ಕನ್ನಡಾoಬೆ
***************
ಕನ್ನಡ ಅಕ್ಷರ ಕಲಿಸಿದ ಗುರುವಿನ
ಪಾದಕೆ ವಂದನೆ
ಕನ್ನಡ ಮಣ್ಣಲಿ ಜನ್ಮ ನೀಡಿದ
ಕನ್ನಡ ಮಾತೆಗೆ ಅಭಿವಂದನೆ ll

ಭಾರತ ಮಾತೆಯ ಪುತ್ರರಾಗಿ
ಜನಿಸಿದ ನಾವು ಧನ್ಯರು
ತಾಯಿಯ ಸೇವೆಯ ಮಾಡಲು
ನಮಗೆ ಲಭಿಸಿದ ಪುಣ್ಯವು ll

ವೀರ ಶೂರ ಯೋಧರು ಇರುವ
ನಾಡಲಿ ಬಾಳಲು ಭಯವಿಲ್ಲ
ಧೀರ ಯೋಧ ವನಿತೆಯು ಆಳಿದ
ರಾಜ್ಯದಿ ಬೇಧ ಭಾವವಿಲ್ಲ ll

ಕನ್ನಡ ಕಂಪನು ಪಸರಿಸಿದ ತಾಯಿ
ಭುವನೇಶ್ವರಿಗೆ ನಮಿಸೋಣ
ಕನ್ನಡಾoಬೆಯ ಮಡಿಲಲಿ ಬೆಳೆಸಿದ
ಋಣವನು ನಾವು ಸಲಿಸೋಣ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ