ವಾಗ್ದೇವಿ ಮಾತೆ
***********
ಶಾರದ ಮಾತೆಯೆ ನಿನಗಿದೊ ವಂದನೆ
ವಿದ್ಯಾ ಬುದ್ಧಿಯ ನೀಡಮ್ಮ
ವೀಣಾ ಪಾಣಿಯೆ ಪುಸ್ತಕ ದಾಯಿನಿ
ಅಭಯವ ನೀಡುತ ಪೊರೆಯಮ್ಮ ll

ಬ್ರಹ್ಮನ ರಾಣಿಯೆ ವಿದ್ಯಾ ದಾಯಿನಿ
ಅಕ್ಷರ ರೂಪಿಣಿ ಹರಸಮ್ಮ
ಹಂಸವಾಯಿನೀ ವಾಗ್ದೇವಿ ಮಾತೆಯೆ
ನಾಲಿಗೆಯಲ್ಲಿಯೆ ನೆಲೆಸಮ್ಮ ll

ಮನದಲಿ ನಿನ್ನನೆ ಧ್ಯಾನವ ಮಾಡುವೆ
ನಿಷ್ಠೆಯ ಪೂಜೆಯು ನಿನಗಮ್ಮ
ಕರುಣಿಸು ವರವನು ಭಕ್ತಿಯ ಪ್ರಾರ್ಥನೆ
ನಿತ್ಯವು ಎನ್ನನು ಸಲಹಮ್ಮ ll

ಕರವನು ಮುಗಿಯುತ ಬೇಡುವೆ ತಾಯೇ
ಕರುಣೆಯ ತೋರಿಸು ಬಾರಮ್ಮ
ಕರುಣಿಸು ಭಾಗ್ಯವ ಬಾಳಲಿ ನೆಮ್ಮದಿ
ನಂಬಿದೆ ನಿನ್ನನೆ ಜಗದಮ್ಮ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ