ಮೂಡಿದ ಭಾವನೆ
************
ಅರಳಿದ ಕಲೆಯಲಿ ಕರಗಳ ಕೆಲಸವು
ಬರೆದರು ಕಲ್ಲಲಿ ಭಾವನೆಯ
ಮರೆಯದೆ ನೋಡಲು ಕರೆದರೆ ಹೋಗುವ
ಮೆರೆಯುವ ಚಿತ್ರವ ನೋಡಿದೆಯ ll

ಸಂತಸ ಮನದಲಿ ಅಂತಹ ಸೊಗಸಿದು
ಸಂತೆಲಿ ಸಿಗುವುದು ಈಸೊಬಗು
ಕಂತೆಯ ನೋಟನು ಅಂತೆಯೆ ಕೊಟ್ಟರು
ಇಂತಹ ಚೆಲುವದು ಸಿಗದೀಗ ll

ಮಗುವಿನ ಜೊತೆಯಲಿ ನಗುವದು ಸ್ವರ್ಗವು
ಸಿಗುವುದು ಒಂದೆಡೆ ಖುಷಿಯಾಗಿ
ಮುಗುದೆಯ ಮನವದು ನಗುತಲಿ ಇರುವುದು
ನಗುಮುಖದಿಂದಲೆ ವರವಾಗಿ ll

ನೋಡಲು ಚಂದವು ಮೂಡಿದ ಕೆತ್ತನೆ
ಓಡಿದೆ ಬೇಗನೆ ಬಳಿಯಲ್ಲಿ
ಮೋಡಿಯ ಮಾಡಿದ ನೋಡದೆ ಬಿಡುವೆನೆ
ಕಾಡಿತು ಆಸೆಯು ಮನದಲ್ಲಿ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ