Table of Contents

ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವಿರಚಿತ ಕೃತಿ ಲೋಕಾರ್ಪಣೆ ಸಮಾರಂಭ

ಕರ್ನಾಟಕ: ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ನಲ್ಲೂರು ಲಕ್ಷ್ಮಣ್‌ರಾವ್ ರೇವಣಕರ್ ವಿರಚಿತ ಆಧ್ಯಾತ್ಮಿಕ ಪರಂಪರೆಯ ಸುಭಾಷಿತ ಸಂಗ್ರಹ 12 ಮತ್ತು 13ನೇ ಭಾಗದ ಹೊತ್ತಿಗೆಗಳ  ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 9 ಮಾರ್ಚ್ 2024ರ ಸಂಜೆ 6 ಗಂಟೆಗೆ ದಾವಣಗೆರೆಯ ವಿನೋಬನಗರ ಒಂದನೇ ಮುಖ್ಯರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿಶೇಟ್ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಗುರುಪ್ರಸಾದ್ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ದಾವಣಗೆರೆ ಜಿಲ್ಲೆಯ ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಮಠದ ಪರಮಪೂಜ್ಯ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಪುಸ್ತಕಗಳ ಲೋಕಾರ್ಪಣೆಯನ್ನು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಗಳು, ಹಿರಿಯ ಸಾಹಿತಿ, ಶಿಕ್ಷಣ ತಜ್ಞರಾದ ಡಾ. ಎಚ್.ವಿ. ವಾಮದೇವಪ್ಪ ನೆರವೇರಿಸಲಿದ್ದಾರೆ. ಪ್ರತಿಷ್ಠಾನದ ಸಂಸ್ಥಾಪಕರಾದ ನಲ್ಲೂರು ಅರುಣಾಚಲ ಎನ್. ರೇವಣಕರ್, ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವರ್ಣೇಕರ್, ಉಡುಪಿ ಜಿಲ್ಲೆ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಶಪ್ಪ ಶೆಣೈ, ದಾವಣಗೆರೆಯ ಕಲಾಕುಂಚ  ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ, ಲೋಕಾರ್ಪಣೆಯಾಗುವ ಕೃತಿಗಳ ವಿರುಚಿತರು ಆದ ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷರಾದ ಅನಿತಾ ರಾಜೇಶ್ ಪಾವಸ್ಕರ್ ತಿಳಿಸಿದ್ದಾರೆ.
ಕೃತಿಗಳ ಲೋಕಾರ್ಪಣೆಯ ದಿನ ಮಧ್ಯಾನ್ಹ 3:30ಕ್ಕೆ ಸಾರ್ವಜನಿಕವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಮುಕ್ತವಾದ ವೇದಿಕೆ ಕಲ್ಪಿಸುವುದರೊಂದಿಗೆ ವಿವಿಧ ಉಚಿತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯ ಈ ಅಪರೂಪದ ವೈಶಿಷ್ಠಪೂರ್ಣ ಸಮಾರಂಭಕ್ಕೆ ಆಧ್ಯಾತ್ಮ, ಸಾಂಸ್ಕೃತಿಕ, ಸಾಹಿತ್ಯ, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪ್ರತಿಷ್ಠಾನದ ಖಜಾಂಚಿ ಶ್ರೀಮತಿ ಸೌಮ್ಯ ಸುಮಿತ್ ಅಣ್ವೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.