Table of Contents

ಡಾ. ಉಷಾರಾಣಿ ಆರ್. ಕುಂಚದಲ್ಲಿ ಶ್ರೀ ಎಲ್.ಎಚ್. ಪೆಂಡಾರಿ

ಧಾರವಾಡ, ಮಾರ್ಚ್ 01- ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಎಲ್.ಎಚ್. ಪೆಂಡಾರಿ(ಕವಿತ್ತ ಕರ್ಮಮಣಿ) ಅವರ ಭಾವಚಿತ್ರವನ್ನು ರಚಿಸಿರುವ ದಾವಣಗೆರೆ ನಗರದ ಖ್ಯಾತ ಹಿರಿಯ ಚಿತ್ರಕಲಾವಿದರಾದ ಡಾ. ಉಷಾರಾಣಿ ಆರ್. ಅವರು ದಿನಾಂಕ 01 ಮಾರ್ಚ್ 2024 ರಂದು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಹಿಂದಿ ವಿಭಾಗಕ್ಕೆ ಬೆಟ್ಟಿ ನೀಡಿ ಕವಿತ್ತ ಕರ್ಮಮಣಿ ಅವರಿಗೆ ಸಮರ್ಪಿಸಿದರು. ಭಾವಚಿತ್ರವನ್ನು ಸ್ವೀಕರಿಸಿದ ಜಿಲ್ಲಾಧ್ಯಕ್ಷರು ಉಷಾರಾಣಿ ಅವರ ಕಲೆಯನ್ನು ಪ್ರಶಂಸಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ. ಸೀತಾರಾಮ ಕೆ. ಪವಾರ ಅವರು ಉಷಾರಾಣಿ ಅವರ ಕಲೆಯನ್ನು ಮೆಚ್ಚಿ ಸತ್ಕರಿಸಿದರು. ಸಂಶೋಧನಾ ವಿದ್ಯಾರ್ಥಿಯಾದ ಶ್ರೀ ಸಾಗರ ಎಸ್. ಗೇಂಡ, ಶ್ರೀ ಕಿರಣಕುಮಾರ ಕೆಂಪವಾಡೆ ಉಪಸ್ಥಿತರಿದ್ದರು.