Table of Contents

ಒಂಟಿತನ

ಒಂಟಿತನವೆಂಬ ಕ್ರೂರವಾದ ಬಡತನ ಕ್ಷಣ ಕ್ಷಣಕ್ಕೂ ಎದೆ ಬಗೆದು ಚುಚ್ಚಿ ಚುಚ್ಚಿ ಹಿಂಡಿ ನೀನೇಕೆ ಹೀಗೆಂದು ಗುನುಗುತ್ತಿತ್ತು ಸುತ್ತಮುತ್ತಲು ಯಾರಿಲ್ಲ ಇದ್ದ ಜಾಗವು ನನ್ನದಲ್ಲ ಅಂದಮೇಲೆ ಯಾರೊಂದಿಗೆ ಕಾಲ ಕಳೆಯಲಿ ನಾನಿದ್ದ ಒಂಟಿತನದಲ್ಲಿ ವೈಭವದಲ್ಲಿ ಮೆರೆಯುವಂತಹ ಸಾಕಷ್ಟು ಸಿರಿ ಸಂಪತ್ತು ಐಸಿರಿ ಬೇಕಾದಷ್ಟು ಇದ್ದರು ಸಿಂಗಲ್ ಹ್ಯಾಂಡ್ ಎಂಬ ಸ್ಟಿಕ್ಕರ್ ಪಿಕ್ಸ್ ಆಗಿ ರಾರಾಜಸುತ್ತಿರುವಾಗ ಏನೆಂದು ಹೇಳಲಿ ಆರಾಧನೆ ಏನೆಂದು ಆರಾಧನೆ ಮಾಡಲಿ ನಾನಿದ್ದ ಒಂಟಿತನದಲ್ಲಿ ಕೊಟ್ಟ ಮಗಳು ಗಂಡನ ಮನೆಯಲ್ಲಿ ಇದ್ದ ಮಗ ಹೊರದೇಶದಲ್ಲಿ ಇರುವ ಸೊಸೆ ಬಿಸಿನೆಸ್ ಮಾಡೋ ಸೊಸೈಟಿಯಲ್ಲಿ ಬಿಜಿ ಅರಳು ಮರಳಿನ ಪ್ರಾಯಸ್ಥರ ಒಂಟಿತನ ನುಂಗುವಂತೆ ಕಾಡುತ್ತಿತ್ತು ಏನಿದ್ದರೂ ಏನು ಪ್ರಯೋಜನ ಏನು ಲಾಭ ನಾನಿದ್ದ ಒಂಟಿತನದಲ್ಲಿ ಸೊಸೈಟಿಯಲ್ಲಿ ಶೋ ಮಾಡೋಕೆ ಪ್ರಾಪರ್ಟಿ ಇದೆ ನಾನು ಯಾರಿಗೂ ಸಿಗಲ್ಲ ಅನ್ನೋದು ಬಂದು ಹುಚ್ಚು ಭ್ರಮೆ ಲೈಫ್ ನಲ್ಲಿ ಸ್ಪೇಸ್ ಇಲ್ಲದ ಪ್ಲೇಸ್ ನಲ್ಲಿ ವಿಶೇಷವಾಗಿ ಹಾರ್ಟ್ ಲ್ಲಿ ಭವ್ಯ ಅರಮನೆಯಲ್ಲಿ ತಂದೆ ತಾಯಿ ಮಡಿದಿ ಮಕ್ಕಳೆಂಬ ಅಮೂಲ್ಯವಾದ ಸಂಪತ್ ಭರಿತವಾದ ಪ್ರೀತಿಯನ್ನೇ ದಾರಿ ಎರೆದು ಮೂಕನಾಗಿ ಮಾಡಿದ ನಿಮ್ಮ ಹೇಮ ಪದ್ಮ ಪಾದ ಕಮಲಗಳಿಗೆ ಸೃಷ್ಟಿಯಲ್ಲಿ ಇಲ್ಲದ ಅದ್ಭುತ ಉಡುಗೊರೆ ಕೊಡಲು ನನ್ನಲ್ಲಿ ಏನಿದೆ ನೀ ಕೊಟ್ಟ ಈ ಭಕ್ತಿ ಎಂಬ ಒಂಟಿ ಪ್ರಾಣ ಬಿಟ್ಟರೆ, ಅಜ್ಞಾತವಾದ ದುಃಖದಲ್ಲಿ ಮುಳುಗಿದ ನನಗೆ ನಿನ್ನ ಬದುಕಿನ ಸುಂದರ ಕನಸಿನ ಹೊಸ ಚಿತ್ರಣ ಹೀಗಿದೆ ನೋಡು ಎಂಬ ನೋಟ ಕೊಟ್ಟು ನನ್ನ ಬದುಕಿಗೇಕೆ ಒಂಟಿ ಕೊಬ್ಬಿದ ದೂರ್ತನೆಂದೆ ಕ್ಷೀರದಂತೆ ಪ್ರೀತಿ ಧಾರೆ ಎರೆದರು ಮಂಜಿನ ಹನಿಯಂತೆ ಆತನಿಂದ ಕರಗಲು ಸಾಧ್ಯವೇ ಯಾರ್ಯಾರು ಎಷ್ಟೆಷ್ಟೋ ಲಾಲಿಹಾಡಿ ತೂಗಿದರು ಅಹಂಕಾರದಲ್ಲಿರುವ ಆತನಿಗೆ ದೂರ್ತನೆಂದರೆ ಸಾಕೆ!? ಅಂತಹ ಕುಡಿಯೊಂದು ನನ್ನ ಗರ್ಭದಲ್ಲಿ ಫಲಿಸಿತೆ! ಅಯ್ಯೋ ದುರ್ವಿಧಿಯೇ ಆ ಪಿಂಡ ಗರ್ಭಪಾತವಾಗಿದ್ದರೆ ನಾನೀಗ ಒಂಟಿ ಆಗುತ್ತಿರಲಿಲ್ಲ. ನನ್ನೆದಂತಹ ಕರ್ಮದ ಒಂಟಿ ಬದುಕು ಸಾಕು ನಿಲ್ಲಿಸಿ ಬಿಡು ನನ್ನ ಉಸಿರಿಗೆ ಈಗೊಂದು ವಿರಾಮದ ವಿಶ್ರಾಂತಿ ಕೊಟ್ಟು ಬಿಡು ಈ ರೀತಿಯ ಒಬ್ಬ ತಾಯಿಯ ಒಡಲು ಕೊತ ಕೊತ ಕುದಿಯುವ ವೇದನೆ ಇರಬೇಕಾದರೆ ಹೇಗೆ ಬದುಕುತ್ತಿತ್ತು ಆ ಒಂಟಿ ಜೀವ ಒಮ್ಮೆ ಯೋಚಿಸಿರಿ.
– ಮನಸಿನ ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರ ಸ್ವಾಮಿ ಹಿರೇಮಠ್ ಹೊಳಗುಂದಿ