ಅರಳಿದ ಕಲೆ
*********
ಕಲೆಯಲಿ ಇರದು ಪ್ರಾಯದ ಮಿತಿಯು
ಸುಂದರ ಚಿತ್ರವು ಮೂಡಿಸಿದೆ
ಶ್ರಮವನು ವಹಿಸಿ ಬಿಡಿಸಿತು ಕರವು
ಅಂದವ ತೋರಿ ಮೆರೆಯುತಿದೆ ll

ಕೇಸರಿ ಬಣ್ಣ ಸೆಳೆಯುತು ಕಣ್ಣ
ತಾಯಿಯ ಮನಸು ಹೇಳುತಿದೆ
ಜೀವನದಲ್ಲಿ ಭಾವನೆ ಇರಲು
ಮೋಹವು ಉಕ್ಕಿ ಬರುತಲಿದೆ ll

ದೇವರ ದಯೆಯು ಕಲೆಯಲಿ ಮೂಡಿ
ಜನರನು ಸೆಳೆದು ನಿಂತಿಹುದು
ಜಾವದಿ ಎದ್ದು ನಿರತವು ಕಲಿತು
ಬೇಗನೆ ಬಂದ ಕಲೆಯಹುದು ll

ಜಾತ್ರೆಯ ಮೆರಗು ಬರೆದಿದೆ ಚಿತ್ತ
ಬೆಳ್ಳಿಯ ರಥದ ಗಾಲಿಗಳು
ದೇವರ ನೋಟ ಬಾಳಲಿ ಬೇಕು
ಸಾರಿದೆ ಚಿತ್ರದ ಅದರಗಳು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ