ಮುಕುಂದ ಮಾಧವ

ಕಣಿಪುರದೊಡೆಯನೆ ಕರುಣಾ ಸಾಗರ
ಮುಕುಂದ ಮಾಧವ ಗಿರಿಧರನೆ
ನಂದನ ಕಂದನೆ ಮೂಜಗದೊಡೆಯನೆ
ದಾರಿಯ ತೋರಿಸು ವಾಮನನೆ 

ಸುರಜನ ವಂದಿತ ಮೋಕ್ಷಪ್ರದಾಯಕ
ದೇವಕಿ ತನಯನೆ ನುತಿಸುವೆನು
ಸುಂದರ ರೂಪನೆ ಪಂಕಜ ಲೋಚನ
ನಿತ್ಯವು ನಿನ್ನನು ಭಜಿಸುವೆನು 

ಮುರಳೀ ಲೋಲನೆ ರುಕ್ಮಿಣಿಗೊಡೆಯನೆ
ರಾಧಾ ರಮಣನೆ ಶ್ರೀ ಲೋಲ
ಅಗಣಿತ ಗುಣನಿಧಿ ಮಹಿಮಾಕರನೇ
ಅಚ್ಚುತ ಕೇಶವ ಶ್ರೀ ಬಾಲ 

ಪಾಪವ ನೀಗಿಸು ಪಾವನ ಮೂರುತಿ
ಪಾಲಿಸು ಎನ್ನನು ಕರುಣೆಯಲಿ
ಶಂಕರ ಮಿತ್ರನೇ ಮೋದದಿ ಕರೆಯುವೆ
ಭಕ್ತಿಯ ಪೂಜೆಯ ಮಾಡುತಲಿ 

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ