ಗೆಳತಿ ಅಂತಿಮ ನಿಲ್ದಾಣದಲ್ಲಿ ನನ್ನ ಪ್ರಯಾಣ ಸಾಗುವವಾಗಲು ನನ್ನ ಮೇಲೆಕೆ ಇನ್ನೂ ನಿನ್ನ ಪ್ರೇಮ, ನನ್ನ ಜೀವನದ ಕೊನೆ ಅಧ್ಯಾಯದ ಪುಟ ಮುಗಿದಿದೆ. ಇನ್ನು ಮುನ್ನುಡಿ ಬರೆಯುವ ಬಯಕೆಯ ಬಿಟ್ಟು ಬಿಡು. ಅದು ಎಲ್ಲೂ ನಿಲ್ಲದ ನಿರಂತರವಾಗಿರುವ ಅದುವೇ ನಮ್ಮಿಬ್ಬರ ಪ್ರೇಮ-ಸಂಗಮ. ನಾವಿಬ್ಬರು ಕೂಡಿ ಕಳೆದ ಒಂದೊಂದು ಮಧುರ ಕ್ಷಣಗಳು ಮರೆಯಲಾಗದ ಅನುರಾಗ ಸಂಗಮ. ಅಂತಹದೊಂದು ಪ್ರೇಮ ಭಾಗ್ಯ ಪಡೆದ ನಾನು ಈಗ ನಿಶಬ್ದವಾಗಿ ಸಾಗುತ್ತಿರುವೆ ಸಾಕು ನಿಲ್ಲಿಸಿ ಬಿಡು ನಿನ್ನ ಮನದಾಳದ ಆಕ್ರಂದನ.

– ಚನ್ನವೀರ ಸ್ವಾಮಿ ಹಿರೇಮಠ್, ಹೊಳಗುಂದಿ ಮನ‌ಸಿನ ಭಾವನೆಗಳ ಆರಾಧಕ