ಜೀವನ ಚಕ್ರ

ಹರಯದಲ್ಲಿ ಹಾರಾಡಬೇಡ
ದುಡ್ಡಿದ್ದಾಗ ಸೊಕ್ಕು ತೋರಿಸಬೇಡ,
ಅಧಿಕಾರ ಇದ್ದಾಗ ದರ್ಪ ತೋರಬೇಡ

ಜೀವನ ಚಕ್ರದಲ್ಲಿ
ನಿನಗೂ ಬರುವುದು

ಹರೆಯಕ್ಕೆ ಮುಪ್ಪು
ದುಡ್ಡಿಗೆ ಬಡತನ
ಅಧಿಕಾರಕ್ಕೆ ನಿವೃತ್ತಿ

ಮರೆಯದಿರು ಮನುಜ
ಅರಿತು ನಡೆ ಬೆರೆತು ಬಾಳು
ನಿನಗೂ ನಾಕು  ಜನರ ಜೊತೆ ಬದುಕು ಉಂಟು

ಶ್ರೀ ರಾಘವೇಂದ್ರ ಸಿಂತ್ರೆ, ರಾಜಕಮಲ್, ಶಿರಸಿ