ಜೀವನ ಒಂದು ಖಾಲಿ ಗಾಡಿ.
ಅದಕ್ಕೆ ಬೇಕು ಎರಡು ಹೋರಿ
ನಿತ್ಯವೂ ಸಾಗಬೇಕು ಸಮನಾಗಿ
ಎಂದಿಗೂ ಇರಿಯಬಾರದು ಸಂಸಾರದಲ್ಲಿ.
ಇರಿದುಕೊಂಡರೆ ಅಂದಿತು
ನಾನು ಹಾಯ್, ನೀನು ಬಾಯ್

ಯುವಕರಿಗೆ ಒಂದು ಸವಾಲು

ಪಕ್ಕದ ಮನೆ ಹುಡುಗಿ ಎಂದರೆ ನನಗೆ ಇಷ್ಟ
ಅವರ ಅಪ್ಪ ನನ್ನನ್ನು ನೋಡಿದರೆ ಬಲು ಕಷ್ಟ.
ಆದರೂ ಬಿಡಲಿಲ್ಲ ನಾನು ಪಟ್ಟ
ಏಕೆಂದರೆ ಈಗಿನ ಕಾಲದಲ್ಲಿ ಹುಡುಗಿಯರು ಸಿಗುವುದೇ ಬಲು ಕಷ್ಟ.

ಓದಿ ಉದ್ಯೋಗ ಪಡೆದರ ಮಾತ್ರ ಹೆಣ್ಣಿನೊಂದಿಗೆ ವರದಕ್ಷಿಣೆ
ಇಲ್ಲವಾದರೆ ನಾವೇ ಹೆಣ್ಣಿಗೆ ಕೊಡಬೇಕಾಗುತ್ತದೆ ವಧುದಕ್ಷಿಣೆ

ಶ್ರೀ ಚಂದ್ರಶೇಖರಚಾರಿ ಎಂ.
ಶಿಕ್ಷಕರು: ವಿಶ್ವ ಮಾನವ ಶಾಲೆ ಸೀಬಾರ ಗುತ್ತಿನಾಡು, ಚಿತ್ರದುರ್ಗ