ಮಾರು ಹೋದವ

ನಗಿಸಿ ನಾಟಕ ಆಡಿದಳು ನನ್ನವಳು
ಚಂದದ ಮಾತಿನಲ್ಲಿ ಮರಳು ಮಾಡಿದಳು
ಅತ್ತೆ ಮಾವನನ್ನ ಮನೆಯಿಂದ ಹೊರ ಹಾಕಿದವಳು
ಗಂಡನಿಗೆ ವಿಚ್ಛೇದನ ನೀಡಿದವಳು

ಅರಿವಾಗುವ ಕ್ಷಣದಲ್ಲಿ ಮೂಕನಾದೆ ನಾನು
ನನಗಾಗಿ ಬರಲಿಲ್ಲ ಅವಳು ಇನ್ನೂ
ಸಂಪತ್ತಿನ ಮೋಹಕ್ಕೆ ಮದುವೆ ಆದಳು ನನ್ನನ್ನು
ಪ್ರೀತಿಯ ಆಟದಲ್ಲಿ ಮುಳುಗಿಸಿ ಬಿಟ್ಟಳು ನನ್ನನ್ನು

✍️ ಚಂದ್ರಶೇಖರಚಾರಿ ಎಂ.
ಶಿಕ್ಷಕರು, ಚಿತ್ರದುರ್ಗ