ನನ್ನ ಅರಸಿ
ನನ್ನನ್ನು ಹರಿಸಿ ಬಂದಳು
ತವರಿನ ಸಿರಿವಂತಿಕೆ ತೊರೆದಳು
ಗಂಡನ ಮನೆ ಸೇರಿದಳು.

ಜೀವನ ಎಂಬ ಪಯಣದಲ್ಲಿ
ಸಪ್ತ-ಪದಿಗಳನ್ನು ದಾಟಿ
ಕೈ ಹಿಡಿದು ಬಂದಳು
ನನ್ನ ಅರಸಿ ಬಂದಳು

ಸಂಸಾರ ಎಂಬ ಸಾಗರದಲ್ಲಿ
ನೋವು ನಲಿವುಗಳನ್ನು ಮರೆತು
ಎಲ್ಲರೊಡನೆ ಕಲೆತು
ನನ್ನ ಅರಸಿ
ನನ್ನನ್ನು ಹರಿಸಿ ಬಂದಳು

ತವರಿಗೆ ತಕ್ಕ ಮಗಳಾಗಿ
ಅತ್ತೆಗೆ ತಕ್ಕ ಸೊಸೆಯಾಗಿ
ಕಷ್ಟಕಾರ್ಪಣ್ಯಗಳ ನುಂಗಿ
ನನ್ನ ಅರಸಿ
ನನ್ನನ್ನು ಹರಿಸಿ ಬಂದಿಹಳು

✍️ ಚಂದ್ರಶೇಖರಚಾರಿ ಎಂ.
ಕನ್ನಡ ಶಿಕ್ಷಕರು, ಚಿತ್ರದುರ್ಗ