ಗಂಡು ಹೆಣ್ಣು

ಅವನು ಚೈತನ್ಯ ಶಿವ
ಇವಳು ಅವನ ಶಕ್ತಿ
ಅವನು ಸೃಷ್ಟಿಕರ್ತ
ಇವಳು ವಿಶಾಲ ಸೃಷ್ಟಿ
ಅವನಿಲ್ಲದೆ ಇವಳಿಲ್ಲ
ಇವಳಿಲ್ಲದೆ ಅವನಿಲ್ಲ
ಅವನು ಈಶ್ವರ
ಇವಳು ಸಂಸಾರ
ಅದಕೆಂದೇ ಅರ್ಧನಾರೀಶ್ವರ

ಸ್ತುತಿಪ್ರಿಯಳಿವಳು
ಸ್ಥಿತಪ್ರಜ್ಞನವನು
ಆಭರಣಪ್ರಿಯಳಿವಳು
ನಿರಾಭರಣನವನು
ಆಡಂಬರದವಳಿವಳು
ನಿರಾಡಂಬರದವನು
ಸೌಂದರ್ಯವತಿ ಇವಳು
ಹೃದಯವಂತನವನು
ಎಂತಲೇ ಸತ್ಯಂ ಶಿವಂ ಸುಂದರಂ

ಮಾತುಗಾರ್ತಿ ಇವಳು
ಮೌನಪ್ರಿಯನವನು
ಉತ್ಸಾಹಭರಿತ ಇವಳು
ಶಾಂತವಾಗಿರುವವನವನು
ಕಾರ್ಯಕರ್ತೆಯಿವಳು
ಕಾರಭಾರಿ ಅವನು
ಅದಕೆ ಗಂಡುಹೆಣ್ಣು ಸಮಸಮರ್ಥರು

– ಅನ್ನಪೂರ್ಣ ಸಕ್ರೋಜಿ ಪುಣೆ