Table of Contents

● ಹೆಸರು: ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
● ಜನ್ಮದಿನಾಂಕ: 1 ಜೂನ್ 1952
● ಶಿಕ್ಷಣ: ಪಿ.ಯು.ಸಿ. ವಿದ್ಯಾರಣ್ಯ ಹೈಸ್ಕೂಲ, ಧಾರವಾಡ
● ಹವ್ಯಾಸ: ಲೇಖನ, ಕವಿತೆ, ಎಲ್ಲ ತರದ ಪೇಂಟಿಂಗ್ಸ, ರಂಗೋಲಿ, ಬೋನ್ಸಾಯಿ, ಮಕ್ಕಳಿಗೆ ಆರ್ಟ್ಸ ಮತ್ತು ಕ್ರಾಫ್ಟ ಕಲಿಸುವದು ಇತ್ಯಾದಿ.
● ರೋಹಾ ಮಹಿಳಾ ಮಂಡಳ ಅಧ್ಯಕ್ಷರು, ರೋಹಾ, ಮಹಾಡ, ಪುಣೆ, ಕನ್ನಡ ಸಂಘಗಳ ಸದಸ್ಯರು, ಅಕ್ಕನ ಅರಿವು ಗುಂಪಿನ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯರು.
● ಭಾಗವಹಿಸುವಿಕೆ: ಪಾಕಕಲೆ ಸ್ಪರ್ಧೆ, ರಂಗೋಲಿ, ಕವಿ ಸಮ್ಮೇಳನದಲ್ಲಿ ಸಾಕಷ್ಟು ಸಾರಿ ಭಾಗವಹಿಸಿ ಎಲ್ಲದರಲ್ಲೂ ಪ್ರಶಸ್ತಿ, ಪ್ರಥಮ ಬಹುಮಾನ ಸಂದಿವೆ. ಹೋದ ವರ್ಷ 20 ಫೆಬ್ರವರಿ 2022ರಲ್ಲಿ ಹುಬ್ಬಳ್ಳಿಯ ವಿಶ್ವ ಬಳಗದ ವತಿಯಿಂದ “ಉತ್ತಮ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಿದರು.
● ಲೋಕಾಪುರ, ಬಾದಾಮಿ, ರನ್ನ ವೈಭವ ಮುಧೋಳ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಹಾಗೂ ಪ್ರಶಸ್ತಿಯಿಂದ ಸತ್ಕಾರ. ನವೆಂಬರ್ 27 2022 ಮಂಡ್ಯದವರು ಏರ್ಪಡಿಸಿದ್ದ “ಸಿರಿಧಾನ್ಯ” ಕವಿಗೋಷ್ಠಿಯಲ್ಲಿಯ ಸ್ವರಚಿತ “ಐಸಿರಿಯ ಸಿರಿಧಾನ್ಯ” ಕವಿತೆಗೆ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ಗೌರವಧನ ಕೊಟ್ಟು ಸತ್ಕರಿಸಿದರು.
● ಕೃತಿಗಳು:
1. ಸಚಿತ್ರ ಭಗವದ್ಗೀತೆ(ನಾನು ತಿಳಿದಂತೆ)
2. ಭವಾನಿ ಭಾರತಿ (ಅರಬಿಂದೊ ಘೋಷವರ ಮರಾಠಿಯಿಂದ ಕನ್ನಡಕ್ಕೆ ಅನುವಾದ)
3. ಬ್ರಹ್ಮ ಚಿಂತನಿಕಾ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಇನ್ನೂ ಮುದ್ರಣವಾಗಬೇಕಾಗಿದೆ.
● ಕರ್ಮಯೋಗಿ ಕವಿತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಂದ ಅಭಿನಂದನೆಯ ಪತ್ರ ಬಂದಿದೆ.
● ಇವರು ಬರೆದ ಸಚಿತ್ರ ಭಗವದ್ಗೀತೆಯ ಪುಸ್ತಕಕ್ಕೆ ಬೆಳಗಾವಿಯ “ಹೊಂಬೆಳಕು ಸಾಂಸ್ಕೃತಿಕ ಸಂಘದ ವತಿಯಿಂದ ” ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ”ಯನ್ನು ಮಾರ್ಚ 12 ರಂದು ಸನ್ಮಾನಿಸ ಪ್ರಶಸ್ತಿ ಕೊಡಲಾಗಿದೆ.
● ಮಹಾರಾಷ್ಟ್ರ, ಕರ್ನಾಟಕ ಗಡಿನಾಡ ಸಾಹಿತ್ಯದ ಕವಿಗೋಷ್ಠಿಯು ಸಾಂಗ್ಲಿ ಜಿಲ್ಲೆಯ ಸಂಖ ಊರಲ್ಲಿ ಏಪ್ರಿಲ್ ತಿಂಗಳು 2023 ರಲ್ಲಿ ನಡೆದ ಕವಿಗೋಷ್ಠಿಯಲ್ಲಿ ದಂಪತಿಗಳಿಬ್ಬರು “ಸಿರಿಧಾನ್ಯ” ಕುರಿತು ಬರೆದ ಕವಿತೆಗೆ ಗೀ ಗೀ ಪದವನ್ನು ಹಾಡಿದರು. ಶ್ರೀಯುತರಿಗೆ ಪ್ರಶಸ್ತಿ ಪತ್ರ, ಕಾಣಿಕೆ ಕೊಟ್ಟು ಗೌರವಿಸಲಾಯಿತು.
● ಇತ್ತೀಚೆಗೆ ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಕವಿತೆ, ಲೇಖನ, ಟಂಕಾ, ರುಬಾಯಿ, ನ್ಯಾನೊ ಕಥೆ, ಲಲಿತ ಪ್ರಬಂಧ, ನಿಬಂಧ, ಆಧುನಿಕ ವಚನ, ಜೋಗುಳ ಪದ, ಜಾನಪದ ಕವಿತೆ ಗೀ ಗೀ ಪದ, ಅಬಾಬಿ, ಹಾಸ್ಯ ಲೇಖನ, ಭಗವದ್ಗೀತೆಯ ಸಾರ, ಇತ್ಯಾದಿ ಹಲವು ಪ್ರಕಾರದ ಸ್ಪರ್ಧೆಗಳಲಿ ಭಾಗವಹಿಸಿ, ವಿಶಿಷ್ಟ ಬರಹಗಾರರು, ಅದ್ಭುತ ಕವಿ, ಅತ್ತ್ಯುತ್ತಮ ಎನ್ನುವ ಪ್ರಶಸ್ತಿಗಳು ಕೂಡ ಇವರಿಗೆ ಸಂದಿವೆ.
● ಕಿತ್ತೂರು ಉತ್ಸವದಿಂದ ಪ್ರಶಸ್ತಿ, ಪುಸ್ತಕ ರಾಜ್ಯೋತ್ಸವ ನಿಮಿತ್ತ ಕಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಶಾಲೆಯ ಕನ್ನಡ ಸಂಘದ ಕವಿಗೋಷ್ಠಿಗೆ ಮುಖ್ಯ ಅತಿಥಿಯಾಗಿ ಆಮಂತ್ರಿಸಿ ಸನ್ಮಾನಿಸಿದ್ದಾರೆ.
● ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಬಳ್ಳಾರಿಯಲ್ಲಿ 26 ನವಂಬರ್ 2023 ರ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ “ಕರ್ನಾಟಕ ಸಾಧಕ ರತ್ನ ರಾಜ್ಯೋತ್ಸವ ಪ್ರಶಸ್ತಿ”ಯಿಂದ ಸನ್ಮಾನಿಸಲಾಯಿತು. ಹಾಗೂ ಕವಿಗೋಷ್ಠಿಯಲ್ಲಿಯೂ ಆಯ್ಕೆಯಾಗಿದ್ದಕ್ಕೆ ಇವರ ಕವಿತೆ ಕವಿತೆ “ಕಾವ್ಯ ಲಹರಿ” ಪುಸ್ತಕದಲ್ಲಿ ಮುದ್ರಿಸಿದ್ದಾರೆ.
– ಸಂಪಾದಕರು
ಕವಿತ್ತ ಕರ್ಮಮಣಿ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ(ರಿ), ಬೆಳಗಾವಿ 9743867298