ಕರ್ನಾಟಕ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದ ಅಡಿಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕರಿಗೆ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಿ ಮರು ನಾಮಕರಣವಾಗಿ ಐವತ್ತು ವರ್ಷಗಳು ಪೂರೈಸಿದ ಸುಸಂದರ್ಭದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ನಿಮಿತ್ಯವಾಗಿ ‘ಕರ್ನಾಟಕ ಸುವರ್ಣ ಕಣ್ಮಣಿ-2024’ ರಾಜ್ಯ ಪ್ರಶಸ್ತಿಯನ್ನು ಘೋಷಿಸಿ ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ಸಾಲಿಗ್ರಾಮ ಗಣೇಶ್ ಶೆಣೈ ಅವರು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಆಸಕ್ತ, ಕನ್ನಡಪರ ಸಾಧಕರು 31 ಮಾರ್ಚ್ 2024 ರೊಳಗೆ ಕನ್ನಡದಲ್ಲಿ ತಮ್ಮ ಸಾಧನೆ, ಸಂಕ್ಷಿಪ್ತ ಪರಿಚಯ, ವ್ಯಾಟ್ಸಪ್ ಸಂಖ್ಯೆ, ಇತ್ತೀಚಿನ ಆಕರ್ಷಕ ಭಾವಚಿತ್ರ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಅವರು ತಿಳಿಸಿದ್ದಾರೆ. ಯಾವುದೇ ಸಭೆ-ಸಮಾರಂಭ ಇರುವುದಿಲ್ಲ. ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಅವರು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಅವರ ಭಾವಚಿತ್ರದೊಂದಿಗೆ ಪ್ರಶಸ್ತಿ ಪತ್ರದ ಸಾಫ್ಟ್ ಕಾಫಿಯನ್ನು ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ದಾವಣಗೆರೆಯ ಕಲಾಕುಂಚದ ಆಯ್ಕೆ ಸಮಿತಿಯಲ್ಲಿ ಒಬ್ಬರಾದ ಶ್ರೀಮತಿ ಸಾವಿತ್ರಾ ರೇವಣಸಿದ್ದಪ್ಪ ಆನೆಕೊಂಡ ಅವರು ವರದಿಯಲ್ಲಿ ತಿಳಿಸಿದ್ದಾರೆ.