ತೇಲಿ ಬರುತ್ತಿಹುದು ಜನಸಾಗರವೇ ಇಂದು ಭಾವ ಲಹರಿಯಲ್ಲಿ,
ಮುಗಿಸಿ ದೇಶ ಸೇವೆಯ ಹೊದ್ದು ಬರಲು ನೀ ರಾಷ್ಟ್ರ ಧ್ವಜದಲ್ಲಿ!
ಜಯಘೋಷಗಳು ಲೀನವಾಗೋವರೆಗೆ ಕಾಣಿರೋ ಪಂಚತತ್ವದೊಳು,
ಆವರಿಸಿರಲು ಕತ್ತಲು ಕೇಳುವವರಾರು ನಿನ್ನ ಹೆತ್ತವರ ಗೋಳು ?