ಬಾಲ್ಯದ ಆಟ

ಬಾಲ್ಯದಿ ಆಡಿದ ಗೋಲಿ ಆಟ
ಚಿನ್ನಿಕೋಲು ಬುಗುರಿ ಲಗೋರಿ ಆಟ
ಮರಕೋತಿ ಚೂಚಂಡು ಮತ್ತು ಜೂಟಾಟ
ಆಟದ ಜೊತೆಗೆ ಸ್ನೇಹಿತರ ತುಂಟಾಟ.

ಸವಿ ನೆನಪು ಸವಿಯಲು ಬೇಕು
ಬಾಲ್ಯದ ಆಟಗಳ ಒಮ್ಮೆ ನೆನೆಯಬೇಕು
ನೆನೆದು ಸಂತೋಷದಿ ಬದುಕ ಬೇಕು
ಉಳಿದ ದಿನಗಳ ಹರುಷದಿ ಕಳೆಯಬೇಕು.

ಮತ್ತೆ ಬಾರದು ಬಾಲ್ಯದ ದಿನಗಳು
ಬಾಲ್ಯದಿ ನಾವು ಆಡಿದ ಆಟಗಳು
ತರಲೆಯ ಮಾಡಿ ಓಡಿದ ಓಟಗಳು
ಹೇಗೆ ಮರೆಯಲಿ ಸುಂದರ ಕ್ಷಣಗಳು.

ಬಾಲ್ಯದ ಆಟಗಳು ಈಗ ಮರೆಯಾಗಿವೆ
ಮಕ್ಕಳ ಕೈಯಲ್ಲಿ ಮೊಬೈಲ್ ಬಂದಿವೆ
ಮೊಬೈಲ್ ಜೊತೆಗೆ ಒಂಟಿಯಾಗಿ ಕೂತಿವೆ
ಸ್ನೇಹ ಪ್ರೀತಿಯ ಆಟಗಳಿಂದ ದೂರಾಗುತಿವೆ.

ಹೀಗೆ ಸಾಗಿದರೆ ಮಕ್ಕಳ ಪ್ರಯಾಣ
ಮುಂದೆ ಏನಾಗ ಬಹುದು ಊಹಿಸೋಣ
ಮಕ್ಕಳ ಜೊತೆಗೆ ಮಕ್ಕಳನ್ನು ಬಿಡೋಣ
ಅವರ ಆಟಗಳನು ನೋಡಿ ನಲಿಯೋಣ.

– ✍️ ಡಾ. ಬಿ. ವೆಂಕಟೇಶ್
ಹೆಚ್. ಎ. ಎಲ್ ಉದ್ಯೋಗ
ಬಸವನಗುಡಿ ಬೆಂಗಳೂರು
ಸ.ವಾ.ಸo. : 8197673263