ರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸ ನೀವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನು.ಅಯೋಧ್ಯೆಯನ್ನ ತೊರೆದವನು. ಲಕ್ಷ್ಮಣ ಮತ್ತು ಸೀತೆಯೊಡನೆ ಕಾಡಿಗೆ ಹೋದವನುಬಂಗಾರ ಜಿಂಕೆನ…
Read more
ತೇಲಿ ಬರುತ್ತಿಹುದು ಜನಸಾಗರವೇ ಇಂದು ಭಾವ ಲಹರಿಯಲ್ಲಿ,ಮುಗಿಸಿ ದೇಶ ಸೇವೆಯ ಹೊದ್ದು ಬರಲು ನೀ ರಾಷ್ಟ್ರ ಧ್ವಜದಲ್ಲಿ!ಜಯಘೋಷಗಳು ಲೀನವಾಗೋವರೆಗೆ ಕಾಣಿರೋ ಪಂಚತತ್ವದೊಳು,ಆವರಿಸಿರಲು ಕತ್ತಲು ಕೇಳುವವರಾರು ನಿನ್ನ ಹೆತ್ತವರ ಗೋಳು ?
Read more
ಮೌನ ಮನದಾಸೆ“”””””””””””ಭವಸಾಗರದ ಒತ್ತಡ ಅವಾಂತರ ವಿಷಮತೆ ಕಳಚಿಆವೇಗ ಆತಂಕ ತಲ್ಲಣವ ಸರಿಸಿಭೋಗ ರೋಗಗಳ ಬೆಂಗಾಡನ್ನು ತೊರೆದುನಿರ್ಭೀತ ನಿರ್ಮಲ ಪರಿಸರದಿ ಸಂಭ್ರಮಿಸುವಾಸೆ ನಗರನಂಜಿನ ಬೇಗುದಿಯಿಂದ ಮುಕ್ತವಾಗಿದಾವಂತ ಮೋಹದಾಹ ಪ್ರಹಾರಗಳ ತೊರೆದುಕ್ರೌರ್ಯ ವಿಕಾರ ವಿಲಾಸ ವ್ಯೊಹ ಸುಳಿವಿಲ್ಲದಜಲಝರಿಯ ನಿಸರ್ಗ ಮಡಿಲಲ್ಲಿ ನೆಲೆಯೂರುವಾಸೆ ವೇಗೋತ್ಕರ್ಷಕ ವಿಕೃತ…
Read more
ಓ ಜೀವವೇ ಮುಂದಡಿಯನಿಡುವೆಯಾ? ಆಲೋಚಿಸುಸೋಲು ಗೆಲುವಿನ ಕುರಿತು ನಿರ್ಧರಿಸುಸುತ್ತ ಮುತ್ತಲೆಲ್ಲ ನೀ ವೀಕ್ಷಿಸುಆತ್ಮ ಸಾಕ್ಷಿಯಲಿ ಕಾರ್ಯವಹಿಸು ಆತ್ಮ ವಿಶ್ವಾಸವೆಂದೆಯಾ? ನನ್ನ ಹಿಡಿತ ,ಧೈರ್ಯ ಮಿಡಿತವಲ್ಲವೇ?ನನ್ನ ಮೇಲಿನ ನಂಬಿಕೆ ಮನೋಬಲಗಳ ಒಕ್ಕಟ್ಟಲ್ಲವೇ?ನನ್ನಂತರಂಗ ತರಂಗಗಳ ಪಿಸುಮಾತು ಜಾಣತನವಲ್ಲವೇ?ಆತ್ಮನೇ ಪರಮಾತ್ಮ ಕರ್ತಾರನಇಂಗಿತವೆಲ್ಲ ಆತ್ಮಬಂಧನವೇ ಅಲ್ಲವೇ? ನಿಲ್ಲು…
Read more
ರೈತನೆಟ್ಟ ಬೀಜ ಸಾಹಿತಿಯಿಟ್ಟ ಬಿಂದುಹುಸಿ-ಘಾಸಿಗೊಳಿಸಲಾರದು ಮತ್ತೊಂದುಇದ್ದಡೆ ಅವರ ನಡೆ-ನುಡಿ ಪ್ರಗತಿ ಕಡೆಬಿರುಕು ಬಾರದಿರಲಿ ಹಲ-ಕುಲ-ನೆಲವೆಡೆ ನೀರು ರೈತನಿಗೆ ರಕ್ತವಾದರೆ ಸಾಹಿತಿಗೆ ಅಕ್ಷರಈ ಚೇತನಗಳೇ ಕಾರಣ ನಾವಾಗಲು ಸಾಕ್ಷರರೈತನ ಜೀವನ ಸಾಹಿತಿಯ ಬದುಕುಧರ್ಮ-ದರ್ಶನ, ಸಂಸ್ಕೃತಿಗೆ ಸ್ಫೂರ್ತಿದಾಯಕ ರೈತ ಬೆನ್ನೆಲುಬಾದರೆ ಅರಿವುಣಿಸುವ ಸಾಹಿತಿಅವರುಗಳಿಲ್ಲದ ನಮ್ಮಿ…
Read more
ಮನಸೆಂಬ ತೋಟದಲ್ಲಿ ವಿದ್ಯೆಯೆಂಬ ಹೂ-ಅರಳಿಸಿಮುಂಜಾನೆ ಮಂಜಿನ ಹನಿಗಳ ಪದ-ಪುಂಜ ಬಳಸಿಪ್ರತಿ ಎಸಳಿನ ಮೇಲೆ ಜ್ಞಾನವೆಂಬ ಸಾಗರ ನಿರ್ಮಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಉಲ್ಲೇಖಿಸುವೆ ಸಮಾನ-ಸೌಜನ್ಯ ಮಾನವೀಯತೆ ಬೆರೆಸಿಸೂರ್ಯನ ರಶ್ಮಿ-ಕಾಂತಿ ಧರೆಗೆ ಕರೆಸಿಅರಿವೆಂಬ ಅಕ್ಷರದ ಶಿಕ್ಷಣವ ಕಲಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಬೆಳಗಿಸುವೆ ಸದ್ಭಾವ-ಸದ್ವಾಸನೆ ಬೀರುವ ತಂಗಾಳಿ-ವಾದ್ಯ ತರಸಿಸಮಾಜವೆಂಬ…
Read more
ಓ ನನ್ನ ವಿದ್ಯಾರ್ಥಿಗಳೇ…! ಬಂಧಿಯಾಗದಿರಿ ಶಾಲೆಯ ಪಠ್ಯ ಪುಸ್ತಕಗಳಲ್ಲಿ, ಭ್ರಮಿಸಿ ಆಸ್ವಾದಿಸಿರಿ ಸತ್ಯವನ್ನು ಪರಿಸರದ ಮಡಿಲಿನಲ್ಲಿ ಅರ್ಹತೆ ಪಡೆಯಲು ಇರಲಿ ಪದವಿ-ಪದಕಗಳ ಸಾಲು, ಅಜ್ಞಾನ ಅಳಿಸಿ ಬೆಳಗಿಸುವಲ್ಲಿ ದೀಪ ಹಚ್ಚಿರಲಿ ನಿಮ್ಮ ಪಾಲು ಕುಗ್ಗದಿರಿ ಕಂಡು ಜೊತೆಗೋಡುವ ಜಗದ ಹಿರಿಮೆ, ಒಗ್ಗರಣೆಗೆ…
Read more
ಹೆತ್ತ ತಾಯಿ ಸತ್ತ ಮ್ಯಾಗ ಹೆಗಲ ಮ್ಯಾಲೆ ಹೊತ್ತ ವೈಯ್ತಾರ ಗೋರಿ ಮುಂದ ಕುಂತ ಅತ್ತರೇನ ಹೆತ್ತ ತಾಯಿ ಮರಳಿ ಬರ್ತಾಳಾ..? ||ಪಲ್ಲವಿ|| ಪತಿಯೇ ಪರಮೇಶ್ವರನೆಂದು ತಿಳಿದು ಬಾಳಿ ರಾತ್ರಿ-ಹಗಲೆನ್ನದೆ ಕಷ್ಟದಾಗ ಕೈ ತೊಳೆದಾಕಿ ಗಂಡ ಸತ್ತ ಮೂರು ತಿಂಗಳಾಗ ಹೆತ್ತಾಳ ಮಗನ ಸುಖದ ಸುಪ್ಪತ್ತಿಗೆ ಮ್ಯಾಗ ಬೆಳಸ್ಯಾಳ ಅವನ ||೧|| ಸಾಲ ಮಾಡಿ ಅಂದದ ಮನಿ ಕಟ್ಟಿ ಮಗನ ಕೈಗಿ ಚೆಂದದ ಸೊಸೆಯ ನಿಟ್ಟಾಳ ಸೊಸೆ ಬಂದ ಮರುಗಳಿಗ್ಯಾಗ ವೈಮನಸ್ಸು ಮೂಡ್ಯಾವ ಯಾರಿಗೂ ತಿಳಿಯದ್ಹಂಗ ||೨|| ಹೆಂಡ್ತಿ ಗುಲಾಮನಾಗಿ ಊರಾಗ ತಿರಗ್ಯಾನ ಎತ್ತ ನೋಡಿದರತ್ತ ದುಷ್ಟರ ಸಂಘ ಮಾಡ್ಯಾನ ಹೆತ್ತ ಕರುಳ ಮರೆತು ಕಾಲ ಕಳಿಯ್ತಾನ ತಿಳಿದು-ತಿಳಿಯದ್ಹಂಗ ತುಳಿದು ಹೋಗ್ತಾನ ||೩|| ಹೆತ್ತ ತಾಯಿ ಹಾಸಿಗೀಯ ಹಿಡದಾಳ ಹೆಂಡ ಕುಡಿದ ಮಗನ ಬೈಗುಳ ಕೇಳ್ಕೊಂತ ನಟ್ಟ-ನಡು ಓಣ್ಯಾಗ ನಿಂತ ಸೊಸೆ ಹೇಳ್ತಾಳ ಅತ್ತಿ-ಮಗನ ಕಲಾಗ ಜೀವನ ಬ್ಯಾಸರಾಯ್ತ ||೪|| ಹೆತ್ತ ಕರುಳ ಹೊತ್ತಿ ಉರಿತೈತಿ ನಡು ಬೀದಿಯೊಳ್ಗ ನಿಂತ ಬಿಕ್ಕಿ-ಬಿಕ್ಕಿ ಅಳತೈತಿ ಯ್ಯಾಕಾರ ಹುಟ್ಟಿದ್ನಿ ಈ ಭೂಮಿ ಮ್ಯಾಗಂತ ಭಾರವಾದ ಜೀವ ಗೋರೀಯ ನೆನಸೈತಿ ||೫|| …
Read more
ನನ್ನ ಭಾವನೆ ಯಾರು ರಾಗ-ದ್ವೇಷ ಕಾಮಾದಿಕವ, ಜಯಸಿ ಜಗವೆಲ್ಲ ತಿಳಿದಿಹನು ಸಕಲ ಜೀವಿಗಳಿಗೆ ಮೋಕ್ಷ ಮಾರ್ಗವ ನಿಷ್ಪೃಹನಾಗಿ ಉಪದೇಶಿಹನು, ಬುದ್ಧ, ವೀರ ಜಿನ, ಹರಿ, ಹರ ಬ್ರಹ್ಮ ಅಥವಾ ಅವನಿಗೆ ಸ್ವಾಧೀನರೆನ್ನಿ…
Read more
ಬಾಲ್ಯದ ಆಟ ಬಾಲ್ಯದಿ ಆಡಿದ ಗೋಲಿ ಆಟ ಚಿನ್ನಿಕೋಲು ಬುಗುರಿ ಲಗೋರಿ ಆಟ ಮರಕೋತಿ ಚೂಚಂಡು ಮತ್ತು ಜೂಟಾಟ ಆಟದ ಜೊತೆಗೆ ಸ್ನೇಹಿತರ ತುಂಟಾಟ. ಸವಿ ನೆನಪು ಸವಿಯಲು ಬೇಕು ಬಾಲ್ಯದ ಆಟಗಳ ಒಮ್ಮೆ ನೆನೆಯಬೇಕು ನೆನೆದು…
Read more