ದೈನಂದಿನ ಬದುಕಿನಲ್ಲಿ ಕನ್ನಡ

– ವಿಶ್ವಾಸ್ .ಡಿ.ಗೌಡ, ಸಕಲೇಶಪುರ

  • ಮುಂದುವರೆದ ಭಾಗ

16) ಮದುವೆ, ಗೃಹಪ್ರವೇಶಗಳ ಕರೆಯೋಲೆಗಳು, ಸಭೆ ಸಮಾರಂಭಗಳ ಆಹ್ವಾನ ಪತ್ರಗಳು ಸಂಪೂರ್ಣವಾಗಿ ಕನ್ನಡದಲ್ಲಿರಲಿ.

17) ಮನೆಯ ಹೆಸರುಹಲಗೆ ಕನ್ನಡದಲ್ಲಿರಲಿ. ಈಗಾಗಲೇ ಇಂಗ್ಲಿಷ್‌ನಲ್ಲಿದ್ದರೆ ಕನ್ನಡಕ್ಕೆ ಬದಲಾಯಿಸಿ,

18) ನಿಮ್ಮ ಬಡಾವಣೆ, ಕಚೇರಿ, ಕಾರ್ಖಾನೆಗಳಲ್ಲಿನ ಕನ್ನಡ ಪರ ಸಂಘಟನೆಗಳ ಕಾಠ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ.

19) ಕನ್ನಡಪರ ಸಂಘಟನೆ ಬೆಳೆಯಲು ಪ್ರೋತ್ಸಾಹಿಸಿ, ಒಗ್ಗಟ್ಟನ್ನು ಮೂಡಿಸಲು ಸದಾ ಯತ್ನಿಸಿ.

20) ಉದ್ಯೋಗ, ಹುದ್ದೆಗಳು ಕನ್ನಡಿಗರಿಗೇ ದೊರಕಲು ಸಹಾಯಮಾಡಿ. ಹುದ್ದೆಗಳ ಅವಕಾಶಗಳಿದ್ದರೆ ಅವರಿಗೆ ತಿಳಿಸಿ.

21) ನಿಮ್ಮ ಕುಟುಂಬದವರೊಡನೆ ಕರ್ನಾಟಕದ ಐತಿಹಾಸಿಕ ಜಾಗಗಳಿಗೆ, ಸುಂದರ ಪ್ರದೇಶಗಳಿಗೆ ಪ್ರವಾಸ ಹೋಗಿ,

22) ಯಾವುದೇ ಕನ್ನಡಪರ ಚಳವಳಿಯಾಗಲಿ ಭಾಗವಹಿಸಿ, ನನ್ನೊಬ್ಬನಿಂದ ಏನಾಗುತ್ತದೆಯೆಂಬ ಆಲಸ್ಯವನ್ನು ಕೈಬಿಡಿ

23) ಕನ್ನಡಿಗರಿಗೇ ಮತ ಹಾಕಿ; ಅದರಲ್ಲೂ ಕನ್ನಡಪರ ವ್ಯಕ್ತಿ ಗಳಿಗೇ ಮತ ಹಾಕಿ.

24) ನೆನಪಿಡಿ; ನಿಮ್ಮ ಆದಾಯದ ಒಂದು ಭಾಗ ಕನ್ನಡಕ್ಕಾಗಿ ವಿನಿಯೋಗವಾಗಲಿ. ಕನ್ನಡ ಸಂಘಟನೆಗಳ ಸದಸ್ಯತ್ವ ಪಡೆಯುವಲ್ಲಿ, ವಂತಿಗೆ ಕೊಡುವಲ್ಲಿ ಉದಾರವಾಗಿರಿ ನೀವು ಕೊಡುವ ಹಣ ಕನ್ನಡದ ಕೆಲಸಕ್ಕೆ ಸಂದಾಯ ವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

25) ಚೆನ್ನಾಗಿ ನೆನಪಿಡಿ; ನಿಮ್ಮ ಜಾತಿ ಕನ್ನಡ, ನಿಮ್ಮ ಕುಲ ಕನ್ನಡ, ನಿಮ್ಮ ಸಮಸ್ತವೂ ಕನ್ನಡ,

26) ಕನ್ನಡದ ಮಧ್ಯೆ ಅನಗತ್ಯ ಇಂಗ್ಲಿಷ್ ಬಳಕೆ ಬೇಡ. “ಮೊನ್ನೆ, ಅಂದ್ರೆ ಡೇ ಬಿಫೋರ್ ಎಸ್ಟರ್ಡೇ, ನನ್ನ ಫ್ರೆಂಡ್ಸ್ ಜೊತೆ ಡೈರೆಕ್ಟರನ್ನು ಮೀಟ್ ಮಾಡಿದೆ” ಎಂಬಂತಹ ವಾಕ್ಯಗಳು ಬೇಡ. “ಮೊನ್ನೆ ನನ್ನ ಗೆಳೆಯರ ಜೊತೆ ನಿರ್ದೇಶಕರನ್ನು ಭೇಟಿ ಮಾಡಿದೆ” ಇದು ಸರಿ, “ರೈಲಿಗೆ ಹೋಗಲು ಮುಂಗಡ ಟಿಕೆಟ್ ಕೊಂಡು ಕೊಂಡೆ” ಇಂತಹ ಕಡೆ ಇಂಗ್ಲಿಷ್ ಪದ ಅನಿವಾರ್ಯ ಬಳಸಿರಿ. ರೇಡಿಯೋ, ಕ್ರಾಸ್, ಚೆಕ್ಕು, ಹೊಟೇಲ್ ಇವು ಇಂದು ಕನ್ನಡದ ಪದಗಳೇ ಆಗಿವೆ.

27) ಇಂಗ್ಲಿಷ್ ಬೆರೆಸಿ ಮಾತನಾಡುವುದಕ್ಕಿಂತ ಶುದ್ಧ ಕನ್ನಡದಲ್ಲಿ ಮಾತನಾಡುವುದು ಗೌರವದ ವಿಚಾರ ಎಂದು ಭಾವಿಸಿ, ಇತರರಿಗೂ ತಿಳಿಸಿರಿ. ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ನಿರ್ಧರಿಸಿ. ನಿಮ್ಮ ರಬ್ಬರ್‌ಸ್ಟಾಂಪ್, ಪರಿಚಯ ಚೀಟಿ (ವಿಸಿಟಿಂಗ್‌ಕಾರ್ಡ್), ಲೆಟರ್‌ಹೆಡ್‌ಗಳು ಕನ್ನಡ ದಲ್ಲೇ ಇರಲಿ. ಅನಿವಾರ್ಯ ಎನಿಸಿದರೆ ಕನ್ನಡದ ಕೆಳಗೆ ಇಂಗ್ಲಿಷ್‌ನಲ್ಲಿ ಮುದ್ರಿಸಿ.

28) ರೈಲ್ವೆ, ಅಂಚೆ, ಆದಾಯತೆರಿಗೆ ಮುಂತಾದ ಕೇಂದ್ರ ಸರ್ಕಾರದ ಕಚೇರಿಗಳಿಗೆ ಹೋದಾಗ ಕನ್ನಡ ನಮೂನೆ ಯನ್ನೇ ಬಳಸಿ, ಕನ್ನಡ ನಮೂನೆಗಳಿಲ್ಲದಿದ್ದರೆ ಕೇಂದ್ರ ಸರ್ಕಾರ ಒಪ್ಪಿರುವ ತ್ರಿಭಾಷಾ ಸೂತ್ರಕ್ಕೆ ವಿರೋಧವಾಗುತ್ತದೆ. ಎಂದು ಸಂಬಂಧ ಪಟ್ಟವರಿಗೆ ತಿಳಿಸಿ, ಅಲ್ಲಿರುವ ಸಲಹೆ/ ದೂರು ಪೆಟ್ಟಿಗೆಯಲ್ಲಿ ಕನ್ನಡ ಬಳಸದಿರುವುದಕ್ಕೆ ನಿಮ್ಮ ಅಸಮಾಧಾನ ದಾಖಲಿಸಿ

30) ಸಮಯ ಸಿಕ್ಕಾಗಲೆಲ್ಲ ಮಿತ್ರರಿಗೆ, ಪರಿಚಿತರಿಗೆ ಕನ್ನಡದಲ್ಲೇ ವ್ಯವಹರಿಸೋಣ ಎಂಬ ಮಾತನ್ನು ಹೇಳುವ ಪತ್ರ ಬರೆಯಿರಿ. ಕನ್ನಡ ಸಮಸ್ಯೆ- ಪರಿಹಾರ ಕುರಿತು ಚಿಂತಿಸಲು ಮನವಿ ಮಾಡಿ, ನಿಮ್ಮ ಶಾಸಕರು, ಸಂಸತ್‌ ಸದಸ್ಯರಿಗೆ ನಾಡು-ನುಡಿಯ ಸಮಸ್ಯೆ ಗಳ ವಿಚಾರ ಪತ್ರ ಬರೆಯಿರಿ.

31) ಕನ್ನಡಕ್ಕೆ ಅಪಾಯವಿದೆ, ಅವಮಾನ ಆಗುತ್ತಿದೆ ಅನ್ನಿಸಿದರೆ ಪತ್ರಿಕೆಗಳಿಗೆ ಬರೆಯಿರಿ, ಕನ್ನಡ ಸಂಘಟನೆಗಳಿಗೆ ತಿಳಿಸಿ. ಸಂಬಂಧಪಟ್ಟ ಇಲಾಖೆಯವರಿಗೆ ಬರೆಯಿರಿ, ಇಂತಹ ಪ್ರಯತ್ನಗಳು ತಕ್ಷಣ ಫಲ ನೀಡದಿರಬಹುದು. ನಿರಾಶರಾಗ ಬೇಡಿ, ದೂರದರ್ಶನ (ಉಪಗ್ರಹ ವಾಹಿನಿಗಳು), ಆಕಾಶವಾಣಿಗಳಲ್ಲಿ ಕಳಪೆ ಕಾರ್ಯಕ್ರಮಗಳು ಬರುತ್ತಿದ್ದರೆ ಪತ್ರ ಬರೆದು ಅಸಮಾಧಾನ ಸೂಚಿಸಿ, ಬೇರೆಯವರೂ ಪತ್ರ ಬರೆಯುವಂತೆ ಮಾಡಿ, ನಿಶ್ಚಿತವಾಗಿ ಕಾರ್ಯಕ್ರಮಗಳ ಗುಣಮಟ್ಟ ಸುಧಾರಿಸುತ್ತದೆ.

‌‌– ಮುಂದುವರೆಯುತ್ತದೆ