ಅಭಿಲಾಷೆ ಕಾದಂಬರಿ ಸಂಚಿಕೆ -58

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 58 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ
  • ವಿಕ್ರಮ್ ನನ್ನು ವಿಚಾರಣೆ ಮಾಡುವಂತೆ ಇನ್ಸ್‌ಪೆಕ್ಟರ್ ಗೆ ತಿಳಿಸಿ ಎಂದು ಆಶಾಳ ತಾಯಿಯ ಮಾತಿಗೆ, ಕೋದಂಡರಾಂ ರವರು ಸಮ್ಮತಿಸುತ್ತಾರೆ.

    ಕಥೆಯನ್ನು ಮುಂದುವರೆಸುತ್ತಾ

ತನ್ನ ಮಗನಿರುವ ವಿಳಾಸವನ್ನು ವಿಕ್ರಮ್ ನಲ್ಲಿರುವುದಾಗಿ, ಆಶ‌ ತನ್ನಪ್ಪನಿಗೆ ಹೇಳಿದಾಗ
ಈಗಲೇ ಇನ್ಸ್ ಪೆಕ್ಟರ್ ಗೆ ಫೋನ್ ಮಾಡುತ್ತೇನೆಂದು ಕೋದಂಡರಾಂ ಹೇಳಿ, ತಕ್ಷಣ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿದಾಗ
ನಮಸ್ಕಾರ ಗುರುಗಳಿಗೆ ಎನ್ನುತ್ತಾ ಈಗ ನನ್ನಿಂದೇನಾಗಬೇಕೆಂದು ಕೇಳಿದ ಪ್ರಶ್ನೆಗೆ
ಕೋದಂಡರಾಂ ರವರು ತನ್ನ ಮಗನ ವಿಳಾಸ‌ ಗೊತ್ತಿದೆಯೆಂದು ವಿಕ್ರಮ್ ಹೇಳುತ್ತಿದ್ದಾನಂತೆ. ಅದನ್ನು ಕೊಡುವಂತೆ ಕೇಳಿದರೆ ನನ್ನ ಮದುವೆಯಾದರೆ ಮಾತ್ರ ಕೊಡುತ್ತೇನೆಂದು ಹೇಳುತ್ತಿದ್ದಾನಂತೆ. ಈಗಾಗಲೇ‌ ನನ್ನ ಮಗಳ ಮದುವೆ ಬೇರೆ ಹುಡುಗನ ಜೊತೆ‌ ಮದುವೆ ಫಿಕ್ಸ್‌ ಆಗಿದೆ. ಅದೂ ಅಲ್ಲದೆ ಅವನನ್ನು ಮದುನೆಯಾಗಲು ನನ್ನ ಮಗಳಿಗೆ ಇಷ್ಟವಿಲ್ಲ‌‌ ಸಾರ್ ಎಂದು ಕೋದಂಡರಾಂ ಹೇಳಿದಾಗ
ಯಾರು ಆ ಹುಡುಗ ಎಂದು ಇನ್ಸ್ ಪೆಕ್ಟರ್ ಕೇಳಲು
ಕೋದಂಡರಾಂರವರು ಕಿಡ್ನಾಪರ್ ತಮ್ಮ ಎಂದ ತಕ್ಷಣ
ಓ,,,,, ಹಳೇ ಗಿರಾಕಿ ತಾನೇ ಗುರುಗಳೇ,,,ನಾನು ವಿಚಾರಿಸುತ್ತೇನೆ. ಅವನ ಬಳಿ ನಿಮ್ಮ ಮಗನ ವಿಳಾಸ ಏನಾದರೂ ಇದ್ದರೆ ಒದ್ದು ವಸೂಲು ಮಾಡುತ್ತೇನೆಂದು ಹೇಳಿ ಫೋನ್ ಆಫ್ ಮಾಡಿ, ದೆಫೇದಾರರನ್ನು ಕರೆದು ಕಿಡ್ನಾಪರ್ ತಮ್ಮನಿಗೆ ಫೋನ್ ಮಾಡಿ ಕರೆಸಿ ಎಂದು ಹೇಳಿದ ತಕ್ಷಣ
ದೆಫೇದಾರರು ಸಾರ್ ವಿಕ್ರಮ್ ಎನ್ನುವ ಹುಡುಗಾನಾ ಎಂದು ಕೇಳಿದಾಗ
ಅದೇ ವಿಕ್ರಮ್ ಕಣ್ರೀ ಅವನನ್ನು ಕರೆಸ್ರೀ, ಇನ್ನೊಂದು ಸಲ‌ ಯಾವ‌ ಹೆಣ್ಣುಮಕ್ಕಳ ಸಹವಾಸಕ್ಕೆ ಹೋಗಬಾರದು ಆ ರೀತಿ ಮಾಡುತ್ತೇನೆ ಎಂದು ಇನ್ಸ್‌ಪೆಕ್ಟರ್ ‌ಹೇಳಿ ತಮ್ಮ ಕಾರ್ಯದಲ್ಲಿ ತೊಡಗುತ್ತಾರೆ.
ಅರ್ಧಗಂಟೆಯಲ್ಲಿ ವಿಕ್ರಮ್ ಇನ್ಸ್‌ಪೆಕ್ಟರ್ ಬಳಿ ಬಂದು ನಮಸ್ಕಾರಾ ಸಾರ್ ಎಂದಾಗ
ಹ್ಞೂಂ ಹ್ಞೂಂ ನಿನ್ನನ್ನು ಸ್ವಲ್ಪ ವಿಚಾರಿಸುವುದಿದೆ ಕುಳಿತುಕೋ ಎಂದು ಇನ್ಸ್ ಪೆಕ್ಟರ್ ಮಾತಿಗೆ,.
ನಾನೇನು ಮಾಡಿದೆ ಸಾರ್ ಎಂದು ವಿಕ್ರಮ್ ಪ್ರಶ್ನಿಸುತ್ತಾನೆ.
ಗುರುಗಳ ಮಗಳಿಗೆ ತುಂಬಾ ಟಾರ್ಚರ್ ಕೊಡ್ತಿದ್ದೀಯಂತೆ, ನಿನಗೆ ಒಂದು ಸಲ‌ ವಾರ್ನ್ ಮಾಡಿದ್ದು ಗೊತ್ತಾಗಲಿಲ್ಲವಾ? ಪದೇ ಪದೇ ಕರೆಸಿ ನಿನ್ನನ್ನು ಕರೆಸಿ ರುಬ್ಬಿದರೆ ಆಗ ಅವರ ಸಹವಾಸಕ್ಕೆ ಹೋಗುವುದನ್ನು ಬಿಡುತ್ತೀಯಾ? ಎಂದು ಇನ್ಸ್ ಪೆಕ್ಟರ್ ಕೋಪದಿಂದ ನುಡಿದಾಗ
ಸಾರ್ ನಾನೇನೂ ಟಾರ್ಚರ್ ಕೊಡುತ್ತಿಲ್ಲಾ ಸಾರ್ ಅವರ ಮಗಳೇ ನನಗೆ ನಂಬಿಸಿ ಮೋಸ‌ ಮಾಡಿದ್ದಾಳೆ ಸಾರ್, ನಾವಿಬ್ಬರೂ ಮೊದಲಿನಿಂದಲೂ ಪ್ರೀತಿಸುತ್ತಾ ಇದ್ದೆವು. ನಮ್ಮಪ್ಪನಿಗೆ ಸಾಲ‌‌ ಜಾಸ್ತಿ ಇದೆಯೆಂದು ನನ್ನನ್ನು ಬಿಟ್ಟಿದ್ದಾಳೆ, ನಾನು ಅವಳನ್ನು ಬಿಟ್ಚು ಹೇಗೆ ಬದುಕಲಿ ಸಾರ್? ನೋಡೀ ಸಾರ್ ನಾನು ಸುಳ್ಳು ಹೇಳುವುದಿಲ್ಲ. ನಾನು ಅವಳು ಎಷ್ಚು ಕಡೆ ಫೋಟೋ ತೆಗೆಸಿಕೊಂಡಿದ್ದೇವೆ ನೀವೇ ನೋಡೀ ಸಾರ್, ಅವಳಿಲ್ಲದೆ ಬದುಕೋಲ್ಲಾ ಸಾರ್ ಎಂದು ವಿಕ್ರಮ್ ಗೋಳಾಡುತ್ತಾನೆ.
ವಿಕ್ರಮ್ ರೋಧಿಸುತ್ತಿರುವುದನ್ನು ನೋಡಿ ಇನ್ಸ್ಪೆಕ್ಟರ್ ಗೆ ಸಮಾಧಾನ ಮಾಡಲಾಗದೆ, ಒಂದು ಕ್ಷಣ ಮೌನವಾಗಿ ಕುಳಿತುಕೊಂಡು, ನಂತರ ನಿಮ್ಮಣ್ಣ ಏಕೆ ಅವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದಾಗ
ಸಾರ್ ನಮ್ಮಣ್ಣ ಅವರನ್ನು‌ ಹೆದರಿಸಲು ಕಿಡ್ನಾಪ್ ಮಾಡಿಸಿದ್ದಾನೆ ನಮ್ಮಮ್ಮನಿಗೆ ಇಪ್ಪತ್ತೈದು ಕೋಟಿ ರೂಪಾಯಿಗಳು ‌ಬರುತ್ತೆ ಸಾರ್, ನಮ್ಮ ತಾಯಿ ಅವರ ಸೋದರರ ಮೇಲೆ ಕೇಸ್ ಹಾಕಿದ್ದಾರೆ ನಮ್ಮಣ್ಣನೇಕೆ ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಹೇಳಿ ಸಾರ್ ಎಂದು ವಿಕ್ರಮ್ ಕೇಳಲು,
ಅದೆಲ್ಲವೂ ಕೋರ್ಟಿನಲ್ಲಿ ತೀರ್ಮಾನವಾಗುತ್ತದೆ. ಆ ಸುದ್ದಿ ಈಗ ಬೇಡಾ, ಕಾಣೆಯಾಗಿರುವ ಗುರುಗಳ ಮಗನ ವಿಳಾಸ‌ ಗೊತ್ತೆಂದು ಹೇಳಿದ್ದೀಯಂತೆ, ನನ್ನ ಮದುವೆಯಾದರೆ ಮಾತ್ರ ಕೊಡುವುದಾಗಿ ಅವರ ಮಗಳಿಗೆ ಹೇಳಿದ್ದೀಯಂತೆ. ಎಲ್ಲಿದ್ದಾರೆ ಗುರುಗಳ‌ ಮಗ,? ಅವರ ವಿಳಾಸ ಯಾರು ಹೇಳಿದ್ರು ಎಂದು ಏರುಧ್ವನಿಯಲ್ಲಿ ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ,
ವಿಕ್ರಮ್ ತನ್ನ ಮನಸ್ಸಿನಲ್ಲಿ, ಎಂತಾ ಖತರ್ನಾಕ್ ಇದ್ದಾರೆ ಇನ್ಸ್‌ಪೆಕ್ಟರ್ ಕೇಳಿದರೆ ನಾನು ಅವರಣ್ಣನ ವಿಳಾಸ‌ ಕೊಡುತ್ತೇನೆಂದು ನನ್ನ ಮೇಲೆ ಚಾಡಿ ಹೇಳಿದ್ದಾರೆಂದುಕೊಂಡು ವಿಕ್ರಮ್ ಸಾರ್ ನನಗೆ ಗೊತ್ತಿಲ್ಲ ಸಾರ್ ಎನ್ನುತ್ತಾನೆ
ನೋಡು ಸುಳ್ಳು ಹೇಳಬೇಡ. ಸುಳ್ಳು ಹೇಳಿದರೆ ಏನಾಗುತ್ತದೆಂದು ಗೊತ್ತಲ್ಲಾ ಎನ್ನುತ್ತಾ ತಮ್ಮ ಕೈಲಿದ್ದ ಲಾಠಿಯನ್ನು ನೆಲಕ್ಕೆ ಬಡಿದ ತಕ್ಷಣ,
ವಿಕ್ರಮ್ ನಡುಗಿದಂತಾಗಿ ಪುನಃ ಸಾರ್ ನನಗೆ ಗೊತ್ತಿಲ್ಲವೆಂದೇ ಪುನಃ ಹೇಳುತ್ತಾನೆ
ನೋಡು ಒಳ್ಳೆಯ ಮಾತಿನಿಂದ ಕೇಳುತ್ತಿದ್ದೇನೆ ಅವರ ಮಗನ ವಿಳಾಸ ಕೊಟ್ಟು ಬಿಡು ಎಂದು ಇನ್ಸ್‌ಪೆಕ್ಟರ್ ‌ಕೇಳಿದಾಗಲೂ
ನನಗೆ ಗೊತ್ತಿಲ್ಲವೆಂದೇ ಹೇಳುತ್ತಾನೆ ವಿಕ್ರಮ್
ವಿಕ್ರಮ್ ಮಾತು ಕೇಳಿದ ಇನ್ಸ್‌ಪೆಕ್ಟರ್ ಗೆ ತಡೆಯಲಾರದ ಕೋಪ‌ ಬಂದು, ಹೇಳುತ್ತೀಯೋ ಇಲ್ಲವೋ ? ನಮ್ಮ ಟ್ರೀಟ್ ಮೆಂಟ್‌ಬೇಕಾ? ಗುರುಗಳ ಮಗಳಿಗೆ ಮದುವೆಯಾದರೆ ನಿಮ್ಮಣ್ಣನ ವಿಳಾಸ‌ ಕೊಡುತ್ತೇನೆಂದು ಏಕೆ ಹೇಳಿದೆ ಎಂದು ಜೋರಾಗಿ ಕೇಳಲು
ನನ್ನ ಮದುವೆಯಾದರೆ ನಿಮ್ಮಣ್ಣನ ವಿಳಾಸ‌ ಹುಡುಕೋಣವೆಂದು ಹೇಳಿದೆ. ಅಣ್ಣನ ಮೇಲಿನ ವಿಶ್ವಾಸದಿಂದ ನನ್ನ ಮದುವೆಯಾಗುತ್ತಾಳೇನೋ ಎಂದು ಕೇಳಿದೆ ಅಷ್ಟೇ ಸಾರ್ ಎಂದು ವಿಕ್ರಮ್ ನುಡಿದಾಗ
ಏನೋ ಒಂದು ಹೆಣ್ಣಿಗೆ ಅವಳಿಗೆ ಇಷ್ಟವಿಲ್ಲದಿದ್ದರೂ ಅಣ್ಣ ಇರುವ ಬಗ್ಗೆ ಆಸೆ ಹುಟ್ಟಿಸಿ ಮೋಸ ಮಾಡಬೇಕೆಂದು ಇದ್ದೀಯೇನೋ ಬದ್ಮಾಶ್ ಎಂದು ಏರುಧ್ವನಿಯಲ್ಲಿ ಗುಡುಗಿದಾಗ
ನಾವಿಬ್ಬರೂ ಪ್ರೀತಿಸುತ್ತಿರುವಾಗ ಇದರಲ್ಲಿ ಮೋಸ‌ವೇನು ಬಂತೂ ಸಾರ್‌ ಎನ್ನುತ್ತಾನೆ ವಿಕ್ರಮ್
ನಿನ್ನ ಮೊಬೈಲ್ ಕೊಡಿಲ್ಲಿ, ಅದರಲ್ಲಿ ಮುಂಬೈಯಿಂದ ಬಂದಿರುವ ಮೆಸೇಜ್ ಇದೆಯೆಂದು ನೋಡೋಣವೆಂದಾಗ
ನನಗೆ ಯಾರೂ ಯಾವ‌‌ ವಿಳಾಸವನ್ನು ಕಳುಹಿಸಿಲ್ಲ ಎನ್ನುತ್ತಾನೆ
ಮೊದಲು ಮೊಬೈಲ್ ಕೊಡು ಅಷ್ಟೇ ಎಂದು ಇನ್ಸ್ ಪೆಕ್ಟರ್ ಗಡಿಸಿನಿಂದ ಕೇಳಿದಾಗ
ವಿಕ್ರಮ್ ಮರು ಮಾತಾಡದೆ ಇನ್ಸ್‌ಪೆಕ್ಟರ್ ಗೆ ಮೊಬೈಲ್ ಕೊಡುತ್ತಾನೆ.
ಇನ್ಸ್ ಪೆಕ್ಟರ್ ಮೊಬೈಲ್ ಪಡೆದು ರೀ ದೆಫೇದಾರ್ರೇ ಇದರಲ್ಲಿರುವ ಪ್ರತಿಯೊಂದು ಮೆಸೇಜ್ ನೋಡ್ರೀ ಎಂದು ಹೇಳಿ ದೆಫೇದಾರರಿಗೆ ಇನ್ಸ್ ಪೆಕ್ಟರ್ ಮೊಬೈಲ್ ಕೊಡಲು
ಮೊಬೈಲಿನಲ್ಲಿ ಮೆಸೇಜ್ ಇರುವುದನ್ನು ನೋಡಿ ಸಾರ್‌ ನೂರಾರು ಮೆಸೇಜ್ ಇದೆ ಸಾರ್ ಇಷ್ಟೆಲ್ಲಾ ಮೋಡಬೇಕಾದರೆ ರಾತ್ರಿ ಯಾಗುತ್ತದೆಂದು ದೆಫೇದಾರ್ ಹೇಳಲು.
ನೀನೇ ಮೆಸೇಜ್ ತೆಗೆದುಕೊಟ್ಟರೆ ಈಗಲೇ‌ಬಿಡುತ್ತೇನೆ. ಇಲ್ಲದಿದಿದ್ದರೆ ಎಲ್ಲಾ‌ ಮೆಸೇಜ್ ಹುಡುಕುವವರೆಗೂ ಇಲ್ಲೇ ಕೊಳೆಹಾಕುತ್ತೇನೆ. ಮದ್ಯರಾತ್ರಿಯಾದರೂ ಬಿಡುವುದಿಲ್ಲ.‌ ನಮಗೆ ಮೆಸೇಜ್ ಸಿಕ್ಕಿದರೆ ಹುಡುಗಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದೀಯೆಂದು ನಿನ್ನ ಮೇಲೆ ಎಫ್ ಐಆರ್ ಹಾಕಿ ನಾಳೆ ಕೋರ್ಟಿಗೆ ಪ್ರಡ್ಯೂಸ್ ಮಾಡುತ್ತೇನೆಂದು ಇನ್ಸ್ ಪೆಕ್ಟರ್ ಹೇಳಲು
ಮೆಸೇಜ್ ಸಿಗುವವರೆಗೂ ನನ್ನನ್ನು ಇವರು ಬಿಡುವುದಿಲ್ಲ. ಮೊದಲೇ ಗೊತ್ತಾಗಿದ್ದರೆ ವಿಳಾಸವನ್ನು ಬೇರೆ ಕಡೆ ಬರೆದುಕೊಂಡು ಮೊಬೈಲಿನಿಂದ ಡಿಲೀಟ್ ಮಾಡಬಹುದಿತ್ತೆಂದು ವಿಕ್ರಮ್ ಯೋಚಿಸುತ್ತಿರುವಾಗ
ಏಯ್ ಏನು ಯೋಚನೆ ಮಾಡುತ್ತಿದ್ದೀಯಾ? ನಮಗೆ ಬಹಳ‌ ಕೆಲಸ‌ ಇದೆ. ನಿನ್ನ ಬಳಿ ಹರಟೆ ಹೊಡೆಯಲು ಟೈಮಿಲ್ಲ. ನೀನೇ ಮೆಸೇಜ್‌ ತೆಗೆದುಕೊಡುತ್ತೀಯೋ ಅಥವಾ ಕೋರ್ಟಿಗೆ ಪ್ರಡ್ಯೂಸ್ ಮಾಡಲೋ ಬೇಗ ಹೇಳು ಎಂದು ಇನ್ಸ್ ಪೆಕ್ಟರ್ ಗದರಿದ ಧ್ವನಿಯಲ್ಲಿ ಕೇಳಿದಾಗ
ಸಾರ್ ನಾನೇ ತೆಗೆದುಕೊಡುತ್ತೇನೆಂದು ಹೇಳಿ ಇನ್ಸ್ ಪೆಕ್ಟರ್ ರಿಂದ ಮೊಬೈಲ್ ಪಡೆದು, ವಿಳಾಸ‌ ಬಂದಿದ್ದ ಮೆಸೇಜನ್ನು ಓಪನ್ ಮಾಡಿ ಇನ್ಸ್ ಪೆಕ್ಟರ್ ಗೆ ಹೇಳಿದಾಗ.
ಈಗ ಇದು ಎಲ್ಲಿಂದ ಬಂತು ಎಂದು ಇನ್ಸ್‌ಪೆಕ್ಟರ್ ಕೇಳಲು
ನನಗೆ ಮುಂಬೈಯಿಂದ ಫೋನ್ ಬಂದಿತ್ತು, ಅವರೇ ಈ ವಿಳಾಸವನ್ನು ಕಳುಹಿಸಿದರು ಎಂದು ವಿಕ್ರಮ್ ನುಡಿದಾಗ
ಆ ಮೆಸೇಜನ್ನು ನನಗೆ ಕಳುಹಿಸಿ ಇಲ್ಲಿಂದ ರೈಟ್ ಹೇಳುತ್ತಿರು, ನೀನು ಆ ಹುಡುಗಿಯನ್ನು ಪ್ರೀತಿಸಿ ನಿರಾಶನಾಗಿದ್ದೀಯಾ ಅದಕ್ಕೆ ಬಿಡುತ್ತಿದ್ದೇನೆ. ಹೋಗಲೀ ಆ ಹುಡುಗಿ ಸಹವಾಸ ಬಿಟ್ಟು ನಿನ್ನ ಪಾಡಿಗೆ ನೀನು ಇದ್ದುಬಿಡು. ಅಕಸ್ಮಾತ್ ಏನಾದರೂ ಪುನಃ ನಿನ್ನ ಮೇಲೆ ಆ ಹುಡುಗಿಯ ತಂದೆ ಅಥವಾ ಆ ಹುಡುಗಿಯೇ ಕಂಪ್ಲೇಂಟ್ ಕೊಟ್ಟರೆ ಯಾವ ಮುಲಾಜು ನೋಡದೆ ಒಳಗೆ ಹಾಕುತ್ತೇನೆಂದು ಎಚ್ಚರಿಕೆ ನೀಡಿ ಇನ್ಸ್ ಪೆಕ್ಟರ್ ರವರು ವಿಕ್ರಮ್ ನನ್ನು ಮನೆಗೆ ಕಳುಹಿಸುತ್ತಾರೆ.
ಅಯ್ಯೋ ಇದೊಂದು ಛಾನ್ಸ್ ಸಿಕ್ಕಿತ್ತು ಎಂದುಕೊಂಡಿದ್ದೆ ಅದೂ ಹೋಯ್ತಲ್ಲಾ ಎಂದುಕೊಳ್ಳುತ್ತಾ ವಿಕ್ರಮ್ ಮನೆಗೆ ಬರುತ್ತಾನೆ.

ಮುಂದುವರೆಯುತ್ತದೆ……

 

ಅಭಿಲಾಷೆ ಕಾದಂಬರಿ ಸಂಚಿಕೆ -59

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 59 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ
  • ಆಶಾಳ‌ ಅಣ್ಣನ ವಿಳಾಸದ‌ ಬಗ್ಗೆ‌ ಮುಂಬೈಯಿಂದ ಬಂದಿದ್ದ ಮೆಸೇಜನ್ನು ವಿಕ್ರಮ್ ಇನ್ಸ್‌ಪೆಕ್ಟರ್ ‌ಗೆ‌‌ ನೀಡಿ ಮನೆಗೆ ಬರುತ್ತಾನೆ.

    ಕಥೆಯನ್ನು ಮುಂದುವರೆಸುತ್ತಾ

ಆಶಾಳ ಅಣ್ಣನ‌ ವಿಳಾಸವನ್ನು ವಿಕ್ರಮನಿಂದ ಪಡೆದ ಇನ್ಸ್‌ಪೆಕ್ಟರ್ ‌ರವರು ತಕ್ಷಣ ಕಾರ್ಯೋನ್ಮುಕರಾಗಿ, ಮುಂಬೈ ಸ್ಟೇಷನ್ ಗೆ ಫೋನ್ ಮಾಡಿ, ವಿಷಯ ತಿಳಿಸಿದಾಗ,
ಅಲ್ಲಿನ ಇನ್ಸ್‌ಪೆಕ್ಟರ್ ರವರು ಇದರ ಬಗ್ಗೆ ಡೀಟೈಲಾಗಿ ಪತ್ರ ಬರೆದು ಇ ಮೇಲ್ ಮುಖಾಂತರ ಕಳುಹಿಸಿ ಎಂದು ಹೇಳುತ್ತಾರೆ.
ಇನ್ಲ್ ಪೆಕ್ಟರ್ ರವರು ಸುಧೀರ್ಘವಾಗಿ ಪತ್ರವನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಸಿ, ಆಶಾಳ ಅಣ್ಣನ ಚಿಕ್ಕ ಹುಡುಗನಿದ್ದಾಗ ತೆಗೆದಿರುವ ಫೋಟೋ ಜೊತೆಗೆ, ಸಾಫ್ಟ್‌ವೇರ್ ಡೆವಲಪ್ಡ್ ಫೋಟೋ ಕಳುಹಿಸುತ್ತಾರೆ.
ಅಲ್ಲಿನ ಇನ್ಸ್‌ಪೆಕ್ಟರ್ ಪತ್ರವನ್ನು ಓದಿ, ಎರಡು ಫೋಟೋದೊಂದಿಗೆ, ವಿಕ್ರಮ್ ನೀಡಿದ್ದ ವಿಳಾಸದ ಮನೆಯನ್ನು ಹುಡುಕಿ, ‌ಮನೆಯೊಳಗೆ ಹೋದಾಗ,
ಇನ್ಸ್ ಪೆಕ್ಟರ್ ರವರನ್ನು ನೋಡಿ,ಆ ಮನೆಯವರಿಗೆ ಗಾಬರಿಯಾಗುತ್ತದೆ.
ಆ ಮನೆಯ ಯಜಮಾನ ಏಕೆ ಸಾರ್ ನಮ್ಮ ಮನೆಗೆ ಬಂದಿದ್ದೀರೆಂದು ಕೇಳಿದಾಗ
ಇನ್ಸ್‌ಪೆಕ್ಟರ್ ವಿಷಯವನ್ನು ತಿಳಿಸಿ, ಈ ಫೋಟೋದಲ್ಲಿರುವವರನ್ನು ಕರೆಯಿರಿ ಎಂದು ಹೇಳಿದಾಗ
ಮನೆಯ ಯಜಮಾನ ತಬ್ಬಿಬ್ಬುಗೊಂಡು, ಅಯ್ಯೋ ಇನರು ಯಾರು ಎಂಬುದೇ ಗೊತ್ತಿಲ್ಲವೆನ್ನುತ್ತಾರೆ.
ಏನ್ರೀ ಪೋಲೀಸ್ ರವರ ಮುಂದೆಯೇ ನಾಟಕವಾಡುತ್ತಿದ್ದೀರಾ? ಎಂದು ಇನ್ಸ್‌ಪೆಕ್ಟರ್ ಕೋಪದಿಂದ ಪ್ರಶ್ನಿಸಲು
ಸಾರ್ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಇವರು ಯಾರೋ ನನಗೆ ಗೊತ್ತೇ ಇಲ್ಲವೆಂದು ಪುನಃ ಹೇಳಿದಾಗ
ನೀವು ಬೆಂಗಳೂರಿನ ಹುಡುಗನಿಗೆ ಈ ಫೋಟೋದಲ್ಲಿರುವವರು ನಮ್ಮ ಮನೆಯಲ್ಲಿದ್ದಾರೆಂದು ಹೇಳಿ ನಿಮ್ಮ ವಿಳಾಸವನ್ನು ಕಳುಹಿಸಿದ್ದೀರಿ. ಈಗ ನಮ್ಮ ಮನೆಯಲ್ಲಿ ಯಾರೂ ಇಲ್ಲವೆಂದು ಹೇಳುತ್ತೀರಲ್ಲಾ? ನಿಮ್ಮನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಿ ಬಾಯಿ ಬಿಡಿಸಬೇಕಷ್ಟೇ ಎಂದು ಇನ್ಸ್ ಪೆಕ್ಟರ್ ಮಾತಿಗೆ
ಸಾರ್‌ ಖಂಡಿತಾ ನಮ್ಮ ಮನೆಯಲ್ಲಿ ಈ ಫೋಟೋದಲ್ಲಿರುವವರು ಯಾರೂ ಇಲ್ಲವೆಂದೇ ಆ ಮನೆಯ ಯಜಮಾನ ಹೇಳುತ್ತಾರೆ.
ಸುಳ್ಳು ಹೇಳಿದರೆ ನಿಮ್ಮನ್ವು ಬಿಡುವುದಿಲ್ಲ, ಈಗಲೇ ಸ್ಟೇಷನ್ ‌ಗೆ‌ ನಡೆಯಿರಿ ಎಂದರೂ ಕೂಡಾ
ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಸಾರ್ ನಮ್ಮ ಮನೆಯಲ್ಲಿ ಅಂತಹವರು ಯಾರೂ ಇಲ್ಲವೆಂದು ಪುನಃ ಮನೆಯ ಯಜಮಾನ ಹೇಳಲು
ರೀ ದೆಫೇದಾರ್ರೇ ಇವರನ್ನು ಸ್ಟೇಷನ್ ಗೆ ಕರೆದುಕೊಂಡು ಬನ್ರೀ, ಅಲ್ಲೇ ಇವರ ಬಾಯಿ ಬಿಡಿಸೋಣವೆಂದು ಇನ್ಸ್ ಪೆಕ್ಟರ್ ಹೇಳಿದ ತಕ್ಷಣ
ನಡೀರ್ರೀ ಎಂದು ಮನೆಯ ಯಜಮಾನನನ್ನು ಕೈ ಹಿಡಿದು ಎಳೆದೊಯ್ಯುತ್ತಿರುವಾಗ,
ಸರ್ ನನ್ನನ್ನೇಕೆ ಕರೆದೊಯ್ಯುತ್ತಿದ್ದೀರೀ? ನಾನೇನು ಮಾಡಿರುವೆ ಎಂದು ಜೋರಾಗಿ ಕೂಗಿದಾಗ
ಅವರ ಪತ್ನಿ ಸಾರ್ ನಮ್ಮ ಮನೆಯವರು ಏನೂ ತಪ್ಪಿಲ್ಲಾ ಸಾರ್ ಅವರನ್ನು ಬಿಟ್ಚುಬಿಡಿ ಸಾರ್ ಎಂದು ಗೋಗರೆದರೂ
ದೊಫೇದಾರರು ಮನೆಯ ಯಜಮಾನನನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡು ಏ ಬೇಟಾ‌ ಬಾ ಇಲ್ಲಿ ಎಂದು ಕರೆದಾಗ
ರೂಮಿನಲ್ಲಿ ಕುಳಿತಿದ್ದ ಅವರ ಮಗ ಅಮ್ಮನ ಧ್ವನಿ ಕೇಳಿ ಯಾರೋ ಮನೆಗೆ ಬಂದಿದ್ದಾರೆಂದುಕೊಂಡು ಹೊರಗೆ ಬಂದು, ತನ್ನಪ್ಪನನ್ನು ಪೋಲೀಸ್ ರವರು ಕರೆದುಕೊಂಡು ಹೋಗುತ್ತಿರುವುದನ್ನು ಕಂಡು
ಸಾರ್ ನಮ್ಮ ತಂದೆಯವರನ್ನು ಏಕೆ ಕರೆದುಕೊಂಡು ಹೋಗುತ್ತಿದ್ದೀರಾ ಸಾರ್? ನಮ್ಮಪ್ಪ ಏನು ಮಾಡಿದ್ದಾರೆ ಎಂದು ಕೇಳಿದಾಗ
ರೀ ದೆಫೇದಾರ್ರೇ ಇವನನ್ನೂ ಜೊತೆಗೆ ಕರೆದುಕೊಂಡು ನಡೆಯಿರಿ ಎಂದ ತಕ್ಷಣ
ಆ ಹುಡುಗನಿಗೆ ಭಯವಾಗಿ ನಾವೇನು ತಪ್ಪು ಮಾಡಿರುವೆನೆಂದು ಕರೆದುಕೊಂಡು ಹೋಗುತ್ತಿದ್ದೀರಾ ಸಾರ್ ಎನ್ನಲು
ದೆಫೇದಾರರು ವಿಷಯ ಹೇಳಿ ಎಲ್ಲೋ ಆ ಹುಡುಗ ಎಂದು ಗದರಿ ಕೇಳಿದಾಗ
ಇದರಲ್ಲಿ ನಮ್ಮಪ್ಪನದ್ದು ಏನೂ ತಪ್ಪಿಲ್ಲಾ ಸಾರ್ ನಾನೇ ಮಾಡಿದ್ದು, ವಿಕ್ರಮ್ ಎನ್ನುವವರು ಸೋಸಿಯಲ್ ಮೀಡಿಯಾದಲ್ಲಿ ಕಾಣೆಯಾಗಿದ್ದಾರೆ ಹುಡುಕಿಕೊಟ್ಚವರಿಗೆ ಬಹುಮಾನ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಫ್ರಾಂಕ್ ಕಾಲ್ ಮಾಡಿದ್ದೆ ಎಂದಾಗಲೂ ಕೂಡಾ,
ಇನ್ಸ್‌ಪೆಕ್ಟರ್ ಗೆ ನಂಬಿಕೆ ಬರುವುದಿಲ್ಲ. ನಿಮ್ಮ ಮನೆಯ ರೇಷನ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಕೇಳಿ ಪಡೆದು ಅದನ್ನು ಚೆಕ್ ಮಾಡಿದಾಗ, ಆಶಾ ಅಣ್ಣನನ್ನು ಹೋಲುವ ವ್ಯಕ್ತಿ ಇರುವುದಿಲ್ಲ. ಆ ಕುಟುಂಬದ ಸದಸ್ಯರ ಬಗ್ಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅಕ್ಕ ಪಕ್ಕದವರನ್ನೆಲ್ಲಾ ವಿಚಾರಣೆ ಮಾಡಿದಾಗ
ಫೋಟೋದಲ್ಲಿರುವವರು ಯಾರೂ ಇಲ್ಲವೆಂದು ಹೇಳುತ್ತಾರೆ.
ಬೆಕ್ಕಿಗೆ ಚಲ್ಲಾಟ ಇಲೀಗೆ ಪ್ರಾಣ ಸಂಕಟ ಎನ್ನುವಂತೆ ಮಕ್ಕಳನ್ನು ಕಳೆದುಕೊಂಡಿರುವವರ ಸಂಕಟ‌ ನಿಮಗೇನ್ರೀ ಗೊತ್ತು? ಎಂದು ಚೆನ್ನಾಗಿ ಬೈದು ಸ್ಟೇಷನ್ ಗೆ ವಾಪಸ್ ಬಂದು ಇನ್ಸ್‌ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿದಾಗ,
ಇಂತಹ ಸೀರಿಯಸ್ ವಿಷಯದಲ್ಲೂ ಹುಡುಗಾಟ ಆಡುತ್ತಾರಲ್ಲಾ ಅವರಿಗೆ ಮನುಷ್ಯತ್ವ‌ ಎನ್ನುವುದು ಇದೆಯಾ ಎಂದು ನಿಂದಿಸುತ್ತಾ ಥ್ಯಾಂಕ್ಸ್ ಸಾರ್ ನಿಮ್ಮ ಕೋ ಆಪರೇಷನ್ ಗೆ ಎಂದು ಹೇಳಿ ಫೋನ್ ಆಫ್ ಮಾಡಿ, ಕೋದಂಡರಾಂ ರವರಿಗೆ ವಿಷಯ ತಿಳಿಸಿದಾಗ
ಸಾರ್ ನನ್ನ ಮಗ ಸಿಕ್ಕಿಬಿಟ್ಟ ಎಂದು ತುಂಬಾ ಸಂತೋಷ ವಾಗಿತ್ತು ಸಾರ್, ಈಗ ಸಿಗಲಿಲ್ಲವೆಂಬ ನಿರಾಶೆಯ ಕಾರ್ಮೋಡ ಕವಿದಿದೆ. ಈ ವಿಷಯವನ್ನು ಹೇಗೆ‌ ಅರಗಿಸಿಕೊಳ್ಳಲಿ ಸಾರ್ ಎಂದು ಕೋದಂಡರಾಂ ರವರು ತುಂಬಾ ಪೇಚಾಡುತ್ತಾರೆ.
ಕ್ಷಮಿಸಿ ಗುರುಗಳೇ, ಗುರು ದಕ್ಷಿಣೆಯಾಗಿ ನಿಮಗೆ ನಿಮ್ಮ ಮಗನನ್ನು ಹುಡುಕಿಕೊಡುತ್ತೇನೆಂದು ಇನ್ಸ್ ಪೆಕ್ಟರ್ ಹೇಳಿದಾಗ
ಸಾರ್ ನಮ್ಮ ಮಗ ಬದುಕಿದ್ದಾನೋ ಇಲ್ಲವೋ? ಯಾರಿಗೆ ಗೊತ್ತು? ನನ್ನ ಉಸಿರು ಇರುವವರೆಗೂ‌ ಅವನದೇ ನೆನಪಿನಲ್ಲಿದ್ದು‌. ಒಂದು ದಿನ ಉಸಿರು ನಿಲ್ಲಿಸುತ್ತೇನೆಂದು ತುಂಬಾ ವಿಷಾದದಿಂದ ಕೋದಂಡರಾಂ ರವರು ಹೇಳಿದಾಗ
ನಿರಾಶೆ ಬೇಡಾ ಗುರುಗಳೇ,,,, ಯಾವುದಕ್ಕೂ ಒಂದು ಅಂತಿಮ ಎಂಬುದು ಇರುತ್ತದೆ ಎಂದು ಇನ್ಸ್ ಪೆಕ್ಟರ್ ಮಾತಿಗೆ
ಆಯ್ತು ಸಾರ್ ಕಡೇವರೆಗೂ ಕಾಯುತ್ತೇನೆಂದು ಹೇಳಿ ಫೋನ್ ಆಫ್ ಮಾಡಿ ನಿರಾಶಾಭಾವದಿಂದ ಕುಳಿತುಕೊಂಡಾಗ
ಅವರ ಪತ್ನಿ ಬಂದು ಏಕೆ ಏನೋ ಒಂದು ರೀತಿ ಸಪ್ಪಗಿರುವಂತಿದೆ ಎಂದು ಪ್ರಶ್ನಿಸಲು
ಇನ್ನೇನು ನಮ್ಮ ಮಗ ಸಿಕ್ಕೇ ಬಿಟ್ಟ ಎಂಬ ಮಹದಾಸೆಯಿಂದ ಇದ್ದೆ. ನನ್ನ ಮನಸ್ಸಂತೂ ತುಂಬಾ ಉಲ್ಲಸಿತವಾಗಿತ್ತು ಎಂದು ಕೋದಂಡರಾಂ ಹೇಳಿದಾಗ
ಅಯ್ಯೋ ಈಗೇನಾಯ್ತು ಎಂದು ಅವರ ಪತ್ನಿ ಪ್ರಶ್ನಿಸಲು
ಇನ್ಸ್ ಪೆಕ್ಟರ್ ರವರು ತಿಳಿಸಿದ ವಿಷಯ ವನ್ನೆಲ್ಲಾ ಕೋದಂಡರಾಂ ಹೇಳಿದಾಗ,
ಅವರ ಪತ್ನಿ ವಿಷಾದದ ನಗೆಯನ್ನು ಬೀರುತ್ತಾ, ಮಗ ಇನ್ನೂ ಬದುಕಿದ್ದಾನೆಂದು ನಿಮಗೆ ಎಲ್ಲೋ ಭ್ರಾಂತಷ್ಟೇ, ನಾನು ನನ್ನ ಮಗನಿಲ್ಲವೆಂದು ಗಟ್ಟಿ ಮನಸ್ಸು ಮಾಡಿಕೊಂಡಿದ್ದೇನೆ ಎಂದ ತಕ್ಷಣ
ಕೋದಂಡರಾಂ ರವರಿಗೆ ತಡೆಯಲಾರದ‌ ಕೋಪ ಬರುತ್ತದೆ. ಏನ್ ನೀನು ಹೀಗೆ ಹೇಳುತ್ತಿದ್ದೀಯಾ? ನಿನ್ನ ಮಗ ಸತ್ತಿದ್ದನ್ನು ನೋಡಿದ್ದೀಯಾ? ಎಂದು ಕೋಪದಿಂದ ಪ್ರಶ್ನಿಸಿದಾಗ,
ಇದೇನ್ರೀ? ಹೀಗೆ ಹೇಳುತ್ತಿದ್ದೀರೀ? ನಮ್ಮ ಮಗ ತಪ್ಪಿಸಿಕೊಂಡಿದ್ದು ಗೊತ್ತಿಲ್ಲವೇ ಎಂದಾಗ
ಹ್ಞೂಂ ಹಾಗೆ ಹೇಳು, ನಮ್ಮ ಮಗ ತಪ್ಪಿಸಿಕೊಂಡಿದ್ದಾನೆಯೇ ಹೊರತು ಸತ್ತಿಲ್ಲ. ಅದು ಮನಸ್ಸಿನಲ್ಲಿರಲಿ, ನೀನು ಏನೇನೋ ಕಲ್ಪಿಸಿಕೊಂಡು ಹೇಳಬೇಡ. ನಾವು ಕಡೇವರೆಗೂ ಮಗ ಬದುಕಿದ್ದಾನೆ, ಎಲ್ಲೋ ಇದ್ದಾನೆಂದು ತಿಳಿದುಕೊಂಡಿರೋಣ‌. ಇನ್ಸ್‌ಪೆಕ್ಟರ್ ರವರು ನಿಮಗೆ ಗುರುದಕ್ಷಿಣೆಗಾಗಿ ನಿಮ್ಮ ಮಗನನ್ನು ಹುಡುಕಿಕೊಡುತ್ತೇನೆಂದು ಹೇಳಿದ್ದಾರೆ
ಎನ್ನುವ ವೇಳೆಗೆ ಆಶಾ ಬಂದು, ಯಾರು ಯಾರಿಗೆ ಗುರುದಕ್ಷಿಣೆ ಕೊಡುತ್ತಾರೆಂದು ಪ್ರಶ್ನಿಸಿದಾಗ,
ಕೋದಂಡರಾಂ ರವರು ಮಗಳಿಗೂ ವಿಷಯ ತಿಳಿಸಿದ ತಕ್ಷಣ
ಆಶಾ ಕೂಡಾ ತುಂಬಾ ನಿರಾಶಳಾಗುತ್ತಾಳೆ. ಯಾವಾಗ ನಮ್ಮಣ್ಣ ಮನೆಗೆ ಬರಬೇಕು ಎನ್ನುವುದಿದೆಯೋ ಆಗಲೇ ಬರಲೆಂದಾಗ
ಇದು ಮಾತು ಎಂದರೆ, ಮಗಳೇ ನೀನು ಕರಕ್ಟಾಗಿ ಹೇಳಿದ್ದೀಯಮ್ಮಾ, ನಿಮ್ಮಮ್ಮನಿಗೂ ಸ್ವಲ್ಪ ಹೇಳು ಅಪಶಕುನದಂತೆ ಏನೂ ಮಾತನಾಡಬೇಡವೆಂದು ಹೇಳು ಎಂಬ ಕೋದಂಡರಾಂ ‌ಮಾತಿಗೆ
ಇಷ್ಟು ವರ್ಷ ಸಿಗಲಿಲ್ಲವಲ್ಲಾ ಅದಕ್ಕೆ ಹೇಳಿದೆ ಎಂದು ಅವರ ಪತ್ನಿ ನುಡಿದಾಗ
ಆಯ್ತು ಮುಂದೆ ಮಾತಾಡಬೇಡವೆಂದು ಕಟ್ಟಪ್ಪಣೆ ಮಾಡುತ್ತಾರೆ ಕೋದಂಡರಾಂ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ವಾದ ಅಃಶವೇನೆಂದರೆ

ಕೆಲವೊಮ್ಮೆ ಮನುಷ್ಯ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕಡೇವರೆಗೂ ಹೋರಾಡಿ, ಕಡೆಗೆ ಮರಣಿಸಿದರೂ ಕೂಡಾ‌ ಸಮಸ್ಯೆ ಹಾಗೇ ಉಳಿದಿರುತ್ತದೆ.
ಈಗಿನ ಕಾಲದಲ್ಲಿ ಸೋಸಿಯಲ್ ಮೀಡಿಯಾದಲ್ಲಿ ಫ್ರಾಂಕ್ ಕಾಲ್‌ ಮಾಡುವುದು, ಒಟಿಪಿ ಕೇಳಿ ಬ್ಯಾಂಕಿನಲ್ಲಿರುವ ಹಣವನ್ನು ಲಪಟಾಯಿಸುವುದು ಇದೇ ಆಗಿದೆ. ನಿಮಗೆ ಪ್ರೈಸ್ ಬಂದಿದೆ, ಮೊದಲ ಪ್ರೀಮಿಯಮ್ ಕಟ್ಟಿದರೆ ಉಳಿದ ಹಣವನ್ನು ನೀಡುತ್ತೇವೆಂದು ಹೇಳಿ ಹಣವನ್ನು ಲಪಟಾಯಿಸುವುದೂ ಉಂಟು. ಇಂತಹ ಫ್ರಾಂಕ್ ಕಾಲ್ ಗಳನ್ನು ನಂಬಬಾರದು. ಯಾರಾದರೂ ಒಟಿಪಿ ಬಂದಿದೆ ಹೇಳಿ ಎಂದರೂ ಅಪ್ಪಿತಪ್ಪಿಯೂ ಹೇಳಲೇಬಾರದು. ಎಟಿಎಂಗಳಿಗೆ ಹೋಗುವಾಗಲೂ ತುಂಬಾ ಎಚ್ಚರಿಕೆಯಿಂದ ಇರಬೇಕು. ರಾತ್ರಿ ಹೊತ್ತು ಜನಸಂದಣಿ ಇಲ್ಲದ ಎಟಿಎಂಗಳಲ್ಲಿ ಹಣವನ್ನು ಡ್ರಾ ಮಾಡಲು ಒಬ್ಬೊಬ್ಬರೇ ಹೋಗಬಾರದು. ಅವಶ್ಯಕತೆ ಇದ್ದಲ್ಲಿ ಮಾತ್ರ ಜೊತೆಯಲ್ಲಿ ಯಾರಾದರನ್ನು ಕರೆದುಕೊಂಡು‌ ಹೋಗಿ ಹಣ ಡ್ರಾ ಮಾಡಿಕೊಂಡು ಬರುವುದು ಉತ್ತಮ. ಡ್ರಾ ಮಾಡಿಕೊಂಡು ಹಣವನ್ನು ಕಾರು ಬೈಕಿನಲ್ಲಿಟ್ಟು ಎಲ್ಲೂ ಹೋಗಬಾರದು. ಹಣವನ್ನು ಜೋಪಾನವಾಗಿ ಮನೆಗೆ ತಲುಪಿಸಿ ನಂತರ ಎಲ್ಲಿಗಾದರೂ ಹೋಗಬಹುದು. ಅದೇರೀತಿ ಹೆಚ್ಚು ಹಣ ಇದ್ದಾಗ ರಶ್ ಗಳಿರುವ ಬಸ್ ಗಳಲ್ಲಿ ಹೋಗಬಾರದು. ಆಟೋ ಮಾಡಿಕೊಂಡು ಹೋದರೆ ಕ್ಷೇಮ ಎನಿಸುತ್ತದೆ. ಐವತ್ತು ಅಥವಾ ನೂರು ರೂಪಾಯಿ ಉಳಿಸಲು ಹೋಗಿ ದೊಡ್ಡ‌ಮೊತ್ತವನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ.

 

ಅಭಿಲಾಷೆ ಕಾದಂಬರಿ ಸಂಚಿಕೆ -60

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 60ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ
  • ತಮ್ಮ ಮಗನು ಮುಂಬೈ ವಿಳಾಸದಲ್ಲಿದ್ದಾನೆ ಸಿಕ್ಕುತಾನೆ ಎಂದು ಕೊಂಡು ಖುಷಿಯಲ್ಲಿದ್ದ ಕೋದಂಡರಾಮ್ ರವರಿಗೆ, ಆ ವಿಳಾಸ ಫೇಕ್ ಎಂದು ತಿಳಿದ ಮೇಲೆ ಬರ‌ಸಿಡಿಲು ಬಡಿದಂತಾಗಿ, ಬಹಳ ನಿರಾಸೆಯಾಗಿರುತ್ತದೆ

    ಕಥೆಯನ್ನು ಮುಂದುವರೆಸುತ್ತಾ

ತನ್ನ ಮಗನ ವಿಳಾಸ ಸುಳ್ಳೆಂದು ತಿಳಿದ ಬಳಿಕ ಕೋದಂಡರಾಂರವರು ತುಂಬಾ ತುಂಬಾ ನಿರಾಶರಾಗಿದ್ದು, ಗುರುದಕ್ಷಿಣೆಯಾಗಿ ನಿಮ್ಮ ಮಗನನ್ನು ಹುಡುಕಿಕೊಡುತ್ತೇನೆಂದು ಇನ್ಸ್‌ಪೆಕ್ಟರ್ ಹೇಳಿದರೂ, ಯಾವುದೇ ಅಭಿಲಾಷೆ ಮೂಡದೆ ಯಾವಾಗ ಸಿಗುತ್ತಾನೋ ಸಿಗಲೆಂದು ಸುಮ್ಮನಾಗುತ್ತಾರೆ.
ಮದುವೆಯ ದಿನಗಳು ಹತ್ತಿರ ಬಂದಿದ್ದು, ಇನ್ನು ಕೇವಲ‌ ಒಂದು ವಾರ ಮಾತ್ರ ಉಳಿದಿರುತ್ತದೆ.

ಕೋದಂಡರಾಂರವರು ಇರುವಷ್ಟು ದಿನಗಳಲ್ಲಿಯೇ ಸಾಧ್ಯವಾದವರಿಗೆ ಹತ್ತಿರದ ನೆಂಟರು ಸ್ನೇಹಿತರಿಗೆ‌ ಲಗ್ನ ಪತ್ರಿಕೆ ತಲುಪಿಸಿ, ಇನ್ನುಳಿದ ದೂರದ‌ಲ್ಲಿರುವ ನೆಂಟರು ಸ್ನೇಹಿತರಿಗೆ‌ ವಾಟ್ಸಾಪ್ ಮೂಲಕ ಲಗ್ನ ಪತ್ರಿಕೆಯನ್ನು ಕಳುಹಿಸಿರುತ್ತಾರೆ.
ಎಕಡೂ ಕುಟುಂಬಗಳಲ್ಲಿ ಮದುವೆಯ ಸಿದ್ದತೆಯು ಭರದಿಂದ ಸಾಗುತ್ತಿರುತ್ತದೆ.
ಕೋದಂಡರಾಂ ರವರು ಒಬ್ಬರೇ ಕುಳಿತುಕೊಂಡು, ಇನ್ನು ವಾರ ಕಳೆದರೆ ಮಗಳ‌ ಮದುವೆಯೂ ಮುಗಿದು ಹೋಗುತ್ತದೆ. ಮನೆಯಲ್ಲಿ, ನಾನು ನನ್ನ ಪತ್ನಿ ಬಿಟ್ಟರೆ ಯಾರೂ ಇರುವುದಿಲ್ಲ. ಮಗ ಯಾವಾಗ‌ ಬರುತ್ತಾನೋ ಎಂದು ನಿರೀಕ್ಷೆಯಲ್ಲಿರಬೇಕಾಗಿರುತ್ತದೆ. ಈಗಂತೂ ಶಾಲೆಯಲ್ಲಿರುವರೆಗೆ ಮಕ್ಕಳ ಜೊತೆ ಇರಬಹುದು. ಇನ್ನು ಕೆಲವು ತಿಂಗಳಲ್ಲಿ ರಿಟೈರ್ಡ್ ಆಗಿ ಬಿಟ್ಟರೆ‌ ಹೇಗಪ್ಪಾ ದಿನ‌ ತಳ್ಳುವುದೆಂದು ನೆನಸಿಕೊಂಡು ಚಿಂತಿತರಾಗಿ ಕುಳಿತಿರುವಾಗ,
ಅಭಿಜಿತ್ ತಂದೆಯಿಂದ ಕರೆ ಬಂದಿದ್ದನ್ನು ನೋಡಿ, ರಿಸೀವ್ ಮಾಡಿ, ನಮಸ್ಕಾರ ಸಾರ್ ಮದುವೆ ಸಿದ್ದತೆಗಳು ಹೇಗೆ ನಡೆಯುತ್ತಿದೆಯೆಂದು ಕೇಳಿದಾಗ,
ಸಾರ್ ಸದ್ಕಕ್ಕೆ ಆ ಯೋಚನೆಯೇ ಇಲ್ಲದಂತಾಗಿದೆ ಮೇಷ್ಚ್ರೇ ಎಂದು ಅಭಿಜಿತ್ ತಂದೆ ಹೇಳಿದ ಮಾತಿಗೆ,
ಕೋದಂಡರಾಂ ರವರಿಗೆ ಗಾಬರಿಯಾಗಿ ಯಾಕ್ ಸಾರ್ ಹೀಗೆ ಹೇಳುತ್ತಿದ್ದೀರೀ? ಯಾರಿಗೆ ಏನಾಯ್ತೆಂದು ಪ್ರಶ್ನಿಸಿದಾಗ
ಯಾರಿಗೂ ಏನೂ ಆಗಿಲ್ಲ ಮೇಷ್ಟ್ರೇ,,,, ಎಲ್ಲರೂ ಸೌಖ್ಯವಾಗುದ್ದೇವೊ. ಆದರೆ ನನ್ನ ಮಗನಿಗೆ ಆರ್ಮಿ ಹೆಡ್ ಕ್ವಾರ್ಟರ್ಸ್ ನಿಂದ ಕರೆಬಂದಿದೆ, ಇಂದೇ ಹೋಗಬೇಕಂತೆ ಎಂದು ಅಭಿಜಿತ್ ತಂದೆ ವಿಷಾದದಿಂದ ಹೇಳಿದಾಗ,
ಸಾರ್ ಇದೇನ್ ಸಾರ್ ಹೀಗೆ ಹೇಳುತ್ತಿದ್ದೀರೀ? ಹದಿನೈದು ದಿನ ಮಗ ಊರಿನಲ್ಲಿರುತ್ತಾನೆ, ಮದುವೆ ಮಾಡಿ ಮುಗಿಸಬಹುದೆಂದು ಹೇಳಿದ್ರೀ ಈಗ ಏನಾಯ್ತೂ‌ ಸಾರ್‌ ಎಂಬ ಕೋದಂಡರಾಂ ಪ್ರಶ್ನೆಗೆ,
ಮೇಷ್ಟ್ರೇ ಅದು ಆರ್ಮಿ ಅಡ್ಮಿನಿಷ್ಟ್ರೇಷನ್, ನಾವು ಎಳ್ಳಷ್ಟೂ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಆಗುವುದಿಲ್ಲವೆಂದು ಅಭಿಜಿತ್ ತಂದೆ ಹೇಳುತ್ತಾರೆ.
ಸಾರ್ ಇದರಲ್ಲಿ ಯಾರೂ ಸುಳ್ಳು ಹೇಳುತ್ತಿಲ್ಲವಲ್ಲಾ ಎಂದು ಕೋದಂಡರಾಂ ‌ಹೇಳಲು
ಹೌದು ಮೇಷ್ಟ್ರೇ ‌ಆದರೆ ಹೆಡ್ ಕ್ವಾರ್ಟರ್ಸ್ ರವರು ನಮ್ಮ ಮಗನ ಡಿಸ್ಚಾರ್ಜ್ ಸಮ್ಮರಿಯನ್ನು ತರಿಸಿಕೊಂಡು ನೋಡಿದ್ದಾರೆ. ಅದರಲ್ಲಿ ನಮ್ಮ ಮಗನ ಆರೋಗ್ಯ ಸಾಟಿಸ್ ಫ್ಯಾಕ್ಷನ್ ಆಗಿದೆಯೆಂದು ಡಾಕ್ಟರ್ ಬರೆದಿರುವುದನ್ನು ನೋಡಿ, ಕೂಡಲೇ ಡಾಕ್ಟರ್ ಗೆ ಫೋನ್ ಮಾಡಿದ್ದು, ನನ್ನ ಮಗ ಸಂಪೂರ್ಣವಾಗಿ ಗುಣವಾಗಿದ್ದಾನೆಂದು ರಿಪೋರ್ಟ್ ಕೊಟ್ಟಿದ್ದರಿಂದ ತಕ್ಷೊಣ ಬರುವಂತೆ ಹೇಳಿದ್ದಾರೆ ಎನ್ನಲು
ಸಾರ್ ಮದುವೆ ಇನ್ನು ಒಂದು ವಾರ ಮಾತ್ರ ಇದೆ‌. ಒಂದು ವಾರದ‌ ಮಟ್ಟಿಗೆ ರಜೆಯನ್ನು ಮುಂದುವರೆಸಲು ಕೇಳಿದ್ದರೆ ಚೆನ್ನಾಗಿತ್ತೆಂಬ ಕೋದಂಡರಾಂ ಮಾತಿಗೆ,
ಸಾರ್‌ ನಾವು ಸರಿಯಾದ ಕಾರಣ ಕೊಡದಿದ್ದರೆ ರಜೆಯನ್ನು ಮುಂದುವರೆಸುವುದಿಲ್ಲವೆಂಬ ಅಭಿಜಿತ್ ತಂದೆಯ ಮಾತಿಗೆ,
ಮದುವೆ ಇದೆ ಎಂದು ಹೇಳಿ ರಜೆ ಪಡೆಯಲು ಆಗುವುದಿಲ್ಲವಾ ಸಾರ್‌ ಎಂದು ಕೋದಂಡರಾಂ ಪ್ರಶ್ನಿಸಿದಾಗ,
ನೀವು ರೆಸ್ಟ್ ತೆಗೆದುಕೊಳ್ಳಲೆಂದು ರಜೆ‌ ಕೊಟ್ಟಿದ್ದೆವು.‌ ನೀವು ಮದುವೆ ಮಾಡಿಕೊಳ್ಳಲು ರಜೆ ಕೊಟ್ಟಿಲ್ಲವೆನ್ನುತ್ತಾರೆ ಮೇಷ್ಟ್ರೇ. ಅವರಿಗೆ ಸುಳ್ಳು ಹೇಳಿ‌ ತಪ್ಪಿಸಿಕೊಳ್ಳಲು ಆಗುವುದಿಲ್ಲವೆಂದು ಅಭಿಜಿತ್ ತಂದೆಯ‌ ಮಾತಿಗೆ,
ಸಾರ್ ಈಗೇನು ಮಾಡುವುದು? ಮದುವೆ ಕೆಲಸಗಳೆಲ್ಲವೂ ಇನ್ನೇನು ಪೂರ್ಣವಾಗುತ್ತಿವೆ. ಲಕ್ಷಾಂತರ ‌ರೂಪಾಯಿ ಖರ್ಚಾಗಿದೆ. ಈಗ‌ ಏಕ್ ದಂ ಮದುವೆ ನಿಲ್ಲಿಸಬೇಕೆಂದು ಹೇಳಿದರೆ ನಾನೇನು ಮಾಡಲಿ? ನನಗೆ ಕೈ ಕಾಲು ಆಡುತ್ತಿಲ್ಲವೆಂದು ಕೋದಂಡರಾಂ ಕವರು ಹೇಳಿದಾಗ
ನಾನು ಹೆಲ್ಪ್ ಲೆಸ್ ಮೇಷ್ಟ್ರೇ, ನಮ್ಮ ಹುಡುಗ ಪುನಃ ಬರಬೇಕೆಂದರೂ ಕಡೇಪಕ್ಷ ಆರು ತಿಂಗಳಾಗುತ್ತದೆಂದು ಅಭಿಜಿತ್ ತಂದೆ ಹೇಳಲು
ಈ ವಿಷಯವನ್ನು ನಮ್ಮ ಮನೆಯಲ್ಲಿ ಹೇಗೆ‌ ಹೇಳಲಿ ಎಂದು ಪೇಚಾಡಿದಾಗ
ಸತ್ಯ ಕಹಿಯಾದರೂ ಹೇಳಲೇಬೇಕು ಮೇಷ್ಟ್ರೇ, ಆದಷ್ಟೂ ಬೇಗ ವಾಪಸ್ ಬರುವಂತೆ ನನ್ನ ಮಗನಿಗೆ ಹೇಳುತ್ತೇನೆ ಎಂದು ಅಭಿಜಿತ್ ‌ತಂದೆಯ ಮಾತಿಗೆ
ಎಷ್ಟೇ ಬೇಗ ಬರುತ್ತಾರೆಂದರೂ ಕಡೇಪಕ್ಷ ಆರು ತಿಂಗಳಾದರೂ ಬೇಕಲ್ಲವೇ ಎಂದು ಕೋದಂಡರಾಂ ಪುನಃ ಪ್ರಶ್ನಿಸಲು
ಹೌದು ಮೇಷ್ಟ್ರೇ ನಾವು ತಪ್ಪು ಮಾಡಿದೆವು ಎಂದು ಅಭಿಜಿತ್ ತಂದೆ ಹೇಳುತ್ತಾರೆ.
ಆಯ್ತು ‌ಸಾರ್ ಏನೂ ಮಾಡುವುದಕ್ಕೆ ಆಗುವುದಿಲ್ಲ.‌ ಯಾವಾಗ ಕಂಕಣ ಕೂಡಿಬರುತ್ತದೋ ಆವಾಗಲೇ ಆಗಲಿ ಎಂದು ಹೇಳಿ ಫೋನ್ ಆಫ್ ಮಾಡಿದ ನಂತರ, ತಮ್ಮ ಮನಸ್ಸಿನಲ್ಲಿ
ಮಗಳ ಮದುವೆ ಆಗಿದ್ದರೆ ಆ ದುಷ್ಟನ ಕಾಟ ತಪ್ಪುತ್ತಿತ್ತು.‌ ಈಗ ಮದುವೆ ನಿಂತಿದೆ ಎಂದರೆ ಪುನಃ ಕಾಟ ಕೊಡಲು ಶುರುಮಾಡುತ್ತಾನೆ ಎಂದು ಬೇರೆ ರೀತಿಯಲ್ಲಿ ಯೋಚನೆ ಶುರುವಾಗುತ್ತದೆ.

ಆಶಾ ಕೆಲಸದಿಂದ ಬಂದವಳೇ‌ ಮದುವೆಯ ಸಿದ್ದತೆಗಾಗಿ ಅಮ್ಮನಿಗೆ ಸಹಾಯಮಾಡುತ್ತಾ ಮಾತನಾಡುತ್ತಿರುವಾಗ,
ಆಶಾಳ ಅಮ್ಮ ಮಾತನಾಡಿ, ಇದೇನೇ ಇವತ್ತು ನಿಮ್ಮಪ್ಪನ ಸದ್ದೇ ಇಲ್ಲಾ, ಸಂಜೆಯಿಂದ ಈ ಕಡೆ ಬಂದೇ ಇಲ್ಲಾ‌, ಪ್ರತಿ ಗಳಿಗೆಯೂ ಏನು ಬೇಕೆಂದು ಕೇಳುತ್ತಿದ್ದವರು, ಈ ದಿನ ಊಟದ ಸಮಯವಾದರೂ ಬಂದೇ ಇಲ್ಲವೆಂದು ಹೇಳಿದ ತಕ್ಷಣ
ಅಪ್ಪಾ ,,,, ಅಪ್ಪಾ,,,,ಊಟಕ್ಕೆ ಬಾಪ್ಪಾ ಎಂದು ಆಶಾ ತನ್ನಪ್ಪನನ್ನು ಕರೆದಾಗ
ಬಂದೇ ಕಣಮ್ಮಾ ಎನ್ನುತ್ತಾ, ಕೋದಂಡರಾಂರವರು ಮೇಜಿನ ಮುಂದೆ ಮೌನದಿಂದ ಕುಳಿತುಕೊಂಡಾಗ,
ಏನ್ರೀ ನಾನು ಬೆಳಿಗ್ಗೆ ಹೇಳಿದ್ದು ಮರೆತು ಹೋಯ್ತಾ‌ ಎಂದು ಕೇಳಲು
ಏನು ಹೇಳಿದ್ದೆ? ಅದರಿಂದ ಈಗೇನಾಗಬೇಕೆಂದು ಕೋದಂಡರಾಂ ಪ್ರಶ್ನಿಸಲು
ಇದೇನ್ರೀ ಹೀಗೆ ಹೇಳುತ್ತಿದ್ದೀರೀ? ಮದುವೆ ಇನ್ನು ವಾರ ಕೂಡಾ ಇಲ್ಲಾ, ಚಿನ್ನದ ಒಡವೆ ವಿಷಯ ಏನು ಮಾಡಿದ್ರೀ? ಹೇಳಿದ ಒಡವೆಗಳನ್ನು ಸರಿಯಾದ ಟೈಮ್ ಗೆ ಕೊಡುತ್ತಾರಾ? ಎಂದು ಅವರ ಪತ್ನಿ ಪ್ರಶ್ನಿಸಿದಾಗ,
ನಿಧಾನಕ್ಕೆ ಕೊಡಲಿ ಬಿಡು ಅದರಿಂದೇನೂ ತಕ್ಷಣಕ್ಕೆ ಆಗಬೇಕಾದ್ದಿಲ್ಲವೆಂಬ ಕೋದಂಡರಾಂ ಮಾತಿಗೆ,
ಅಯ್ಯೋ ರಾಮಾ ಇದೇನ್ರೀ ಹೀಗೆ ಹೇಳುತ್ತಿದ್ದೀರೀ? ಮದುವೆ ಇನ್ನು ಒಂದು ವಾರ ಇದೆ, ಕಡೇಪಕ್ಷ ಮಾಂಗಲ್ಯದ‌ ಸರ ಕೊಡಲು ಹೇಳಿ ಎಂಬ ಅವರ ಪತ್ನಿ ಮಾತಿಗೆ,
ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲವೆಂದು ಕೋದಂಡರಾಂ ಹೇಳುತ್ತಾರೆ.
ಅಪ್ಪಾ ಏನು ಹೇಳುತ್ತಿದ್ದೀಯಾ? ಇನ್ನು ಒಂದು ವಾರದಲ್ಲಿ ಎಲ್ಲವೂ ಬೇಕಲ್ಲಾ ಎಂದು ಆಶಾ ಕೇಳಲು,
ಮದುವೆ ಇನ್ನು ಆರು ತಿಂಗಳು ನಡೆಯುವುದಿಲ್ಲವೆಂದು ಕೋದಂಡರಾಂ ಹೇಳಿದ ಮಾತಿಗೆ
ಇದೇನಪ್ಪಾ ಹೀಗೆ ಹೇಳುತ್ತಿದ್ದೀಯಾ? ಆರು ತಿಂಗಳು ಮದುವೆಯನ್ನು ಯಾರು ಮುಂದಕ್ಕೆ ಹಾಕಿದರು ಎಂದು ಆಶಾಳ ಪ್ರಶ್ನೆಗೆ
ಕೋದಂಡರಾಂ ರವರು ಅಭಿಜಿತ್ ತಂದೆ ಹೇಳಿದ ವಿಷಯವನ್ನು ಹೇಳಿ, ಇಂದೇ ರಾತ್ರಿ ಅವರ ಮಗ ಹೆಡ್ ಕ್ವಾರ್ಟರ್ಸ್ ಗೆ ಹೋಗಬೇಕಂತೆ ಎಂದ ತಕ್ಷಣ
ಆಶಾ ಹಾಗೂ ಅವಳಮ್ಮನ ಉತ್ಸಾಹ ಜರ್ರನೆ ಇಳಿದು,‌ ಮನೆಯೆಲ್ಲಿ ಮೌನ ಆವರಿಸುತ್ತದೆ.
ಸಂತೋಷದಿಂದ ಊಟ ಮಾಡುತ್ತಿದ್ದ ಆಶ ಮೌನಕ್ಕೆ ಜಾರುತ್ತಾಳೆ.
ಕೋದಂಡರಾಮ್ ರವರೂ ಸಹಾ ಏನೂ ಮಾತನಾಡದೆ ಮೌನದಿಂದ ಊಟ‌ಮಾಡಿ ಕೈ ತೊಳೆಯಲು ಹೋಗುತ್ತಾರೆ.
ಅವಳಮ್ಮ ಮಾತನಾಡಿ, ಆಶಾ ಇದೇನಮ್ಮಾ ಹೀಗಾಯ್ತು? ಇನ್ನೂ ಆರು ತಿಂಗಳಿಗೆ ಬರುತ್ತಾರಂತೆ, ಅಲ್ಲಿಯವರೆಗೆ ಕಾಯುತ್ತೀಯಾ ಆಶಾ‌ ಎಂದು ಕೇಳಿದಾಗ
ಆಶಾಳ ಮೌನವೇ ಅವಳಮ್ಮನ ಪ್ರಶ್ನೆಗೆ ಉತ್ತರವಾಗಿರುತ್ತದೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ

ಒಂದೊಂದು ಸಲ ಇನ್ನೇನು ನಮ್ಮ ಕೆಲಸವಾಗೇ ಬಿಟ್ಟಿತೆಂದು ತಿಳಿದು ಸಂತೋಷದಿಂದ ಇರುವ ಸಮಯದಲ್ಲಿ, ಅನಿರೀಕ್ಷಿತವಾಗಿ ಯಾವುದಾದರೂ ಘಟನೆ ನಡೆದು ಆ ಕೆಲಸ‌ಕ್ಕೆ ವಿಘ್ನ ಬಂದೊದಗುತ್ತದೆ. ಆಗ ಧೃತಿಗೆಡದೆ ಸಮಾಧಾನದಿಂದ ಆಗಿರುವ ನಿರಾಸೆಯನ್ನು ತಡೆದುಕೊಳ್ಳಬೇಕು. ಇದಕ್ಕೆ ಯಾರೂ ಹೊರತಲ್ಲ ಅಲ್ಲವೇ?