ಅಭಿಲಾಷೆ ಕಾದಂಬರಿ ಸಂಚಿಕೆ -55

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 55 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಕೋದಂಡರಾಂ ರವರು ರಘುನಂದನ್ ಯುವಕನನ್ನು ಎಲ್ಲೋ ನೋಡಿರುವಂತಿದೆ ಎಂಬ ಮಾತಿಗೆ ಪ್ರಪಂಚದಲ್ಲಿ ಒಂದೇ ತರಹದ ವ್ಯಕ್ತಿಗಳು ಏಳು ಜನರಿರುತ್ತಾರೆಂದು ಕೇಳಿಲ್ಲವಾ ಅಪ್ಪಾ ಎಂದು ಆಶಾ ನುಡಿಯುತ್ತಾಳೆ.

  • ಕಥೆಯನ್ನು ಮುಂದುವರೆಸುತ್ತಾ

ಅಭಿಜಿತ್ ಸ್ನೇಹಿತ ರಘುನಂದನ್ ನನ್ನು ಎಲ್ಲೋ ನೋಡಿದಂತಿದೆ ಎಂದು ಕೋದಂಡರಾಂ ರವರು ಹೇಳಿದ ಮಾತಿಗೆ ಅಪ್ಪಾ ಪ್ರಪಂಚದಲ್ಲಿ ಒಂದೇ ರೀತಿ ಏಳು ಜನ ಇರುತ್ತಾರೆಂದು ಕೇಳಿಲ್ಲನಾ ಅಪ್ಪಾ ಎಂದು ಆಶ‌ ಹೇಳಿದಾಗ
ಆ ಮಾತು ಹಾಗಿರಲಿ, ಈಗ ಗಂಡಿನ ಕಡೆಯವರು ಒಪ್ಪಿದ್ದಾರೆ. ಹುಡುಗ ಪುನಃ ವಾಪಸ್ ಹೋಗುವುದರೊಳಗೆ ಮದುವೆ ಕಾರ್ಯ ಮುಗಿಸಿಬಿಡೋಣವೆಂದು ನಾನು ಹೇಳಿದ್ದಕ್ಕೆ , ಅವರ ಮನೆಯವರೆಲ್ಲರೂ ಒಪ್ಪಿದರು ಎಂದು ಕೋದಂಡರಾಂ ಹೇಳಲು
ಇದೇನ್ರೀ ಹೀಗೆ ಹೇಳುತ್ತೀರಾ? ಮದುವೆ ಏರ್ಪಾಡಿಗೆ ಕಡೇಪಕ್ಷ ಒಂದು ತಿಂಗಳಾದರೂ ಬೇಡವಾ‌ ಎಂದು ಅವರ ಪತ್ನಿ ಪ್ರಶ್ನಿಸಿದಾಗ
ಹಿಂದಿನ ಕಾಲದಂತೆ ಕುಟ್ಚಿ ಬೀಸಿ ಬೆವರು ಸುರಿಸಿ ಕೆಲಸ ಮಾಡುವ ಕಷ್ಟವೇ ಈಗ ಇಲ್ಲ.ಎಲ್ಲವೂ ರೆಡಿಮೇಡ್ ಸಿಗತ್ತೆ. ನೀನೇಕೆ ಯೋಚಿಸುತ್ತೀಯಾ ಎಂದು ಕೋದಂಡರಾಂ ಹೇಳಲು
ಹೋಗಲೀ ಒಳ್ಳೆ ಶುಭದಿನ ನೋಡಿ ಮದುವೆ ಮಾಡಬೇಡವಾ ಎಂದು ಮರು ಪ್ರಶ್ನಿಸಿದಾಗ
ಹತ್ತಿರದಲ್ಲಿ ಯಾವುದಾದರೂ ಒಳ್ಳೆಯ ಲಗ್ನ ಇದ್ದರೆ ನೋಡಿ ಮದುವೆ ಮುಗಿಸಿದರಾಯಿತೆಂದು ಹೇಳುತ್ತಾರೆ.
ನೀವಂತೂ ಕುದುರೆ ಮೇಲೆ ಕುಳಿತಂತಿದೆ ಎಂದು ಅವರ ಪತ್ನಿ ಹೇಳಲು
ನೋಡು ಸುಮ್ಮನೆ ಟೈಮ್ ವೇಸ್ಟ್ ಮಾಡುವುದು ಬೇಡಾ ಈಗಲೇ ಪುರೋಹಿತರನ್ಮು ವಿಚಾರಿಸುತ್ತೇನೆಂದು ಹೇಳಿ ಸೀದಾ, ಅವರ ಮನೆಯ ಪುರೋಹಿತರ ಮನೆಗೆ ಬಂದು ವಿಚಾರ‌ ತಿಳಿಸಿದಾಗ
ಪುರೋಹಿತರು ಎಲ್ಲಾ ಲೆಕ್ಕ ಹಾಕಿ ಹದಿನೈದು ದಿನದಲ್ಲಿ ಒಳ್ಳೆ ಮುಹೂರ್ತವಿದೆ ಎಂದು ಹೇಳಿದ ಮಾತನ್ನು ಕೇಳಿ ಅದಕ್ಕೆ ಒಪ್ಪಿಗೆ ಸೂಚಿಸಿ ಸೀದಾ ಮನೆಗೆ ಬಂದು ತಮ್ಮ ಪತ್ನಿಗೆ ವಿಷಯ ತಿಳಿಸಲು
ಹದಿನೈದು ದಿನ ಎಂದರೆ ಸ್ವಲ್ಪ ಉಸಿರು ತಿರುಗಿಸಿಕೊಳ್ಳಬಹುದು ಎನ್ನುತ್ತಾರೆ
ತಕ್ಷಣ ಕೋದಂಡರಾಂ ರವರು ಅಭಿಜಿತ್ ತಂದೆಗೂ ವಿಷಯ ತಿಳಿಸಿದಾಗ
ನಾವುಗಳೂ ರಡಿ ಇದ್ದೇವೆ ಮೇಷ್ಚ್ರೇ ಎಂದು ಅಭಿಜಿತ್ ತಂದೆ ಹೇಳಲು
ನಾನು ಈ ದಿನದಿಂದಲೇ ಮದುವೆಯ ಏರ್ಪಾಡು ಮಾಡಲು ಶುರುಮಾಡುತ್ತೇನೆ ಎಂದು ಕೋದಂಡರಾಂ ಹೇಳುತ್ತಾರೆ
ಓ ಕೆ ನಾವು ಈಗಲೇ ಮಾನಸಿಕವಾಗಿ ರಡಿಯಾಗಿದ್ದೇವೆ ನಾವೂ ಕೂಡಾ ನಾಳೆಯಿಂದಲೇ ಏರ್ಪಾಡು ಮಾಡುತ್ತೇವೆಂದು ಅಭಿಜಿತ್ ತಂದೆ ಹೇಳಿದ ಮಾತಿಗೆ
ಕೋದಂಡರಾಂರವರು ತುಂಬಾ ಥ್ಯಾಂಕ್ಸ್ ಸಾರ್ ಎಂದು ಹೇಳಿ ಫೋನ್ ಆಫ್ ಮಾಡುತ್ತಾರೆ.
ತಕ್ಷಣ ಆಶಾಳನ್ನು ಕರೆದು ಇನ್ನು ಹದಿನೈದು ದಿನಗಳಲ್ಲಿ ನಿನ್ನ ಅಭಿಜಿತ್ ಮದುವೆ ಕಣಮ್ಮಾ ನಿನಗೇನು ಬೇಕೋ ತೆಗೆದುಕೊಂಡು ರಡಿಯಾಗು ಎಂದು ಕೋದಂಡರಾಂ ಹೇಳಲು
ಇದೇನಪ್ಪಾ ದಿಢೀರೆಂದು ಮದುವೆ ಗೊತ್ತು ಮಾಡಿಬಿಟ್ಚಿದ್ದೀಯಾ ಎಂದು ಆಶ ಪ್ರಶ್ನಿಸಿದಾಗ
ಭಾವಿ ಅಳಿಯಂದ್ರಿಗೆ ರಜೆ ಮುಗಿದು ಹೋದರೆ ಪುನಃ ಯಾವಾಗ ಬರುತ್ತಾರೋ ಅದಕ್ಕೆ ಅವರು ಹೋಗುವುದರೊಳಗೆ ಮದುವೆ ಮಾಡಿ ಮುಗಿಸಿದರೆ ಮಾನಸಿಕ ತೊಳಲಾಟ‌ ತಪ್ರುತ್ತದೆಂದು ಕೋದಂಡರಾಂ ಮಾತಿಗೆ,
ನೀನು ಯಾವ ರೀತಿ ಹೇಳುತ್ತೀಯೋ ಹಾಗೆ ಕೇಳುತ್ತೇನೆ. ಒಟ್ಚಿನಲ್ಲಿ ಅವನ ಕಿರಿ ಕಿರಿ ತಪ್ಪಿದರೆ ಸಾಕೆಂದು ಆಶಾ ನುಡಿದಾಗ
ಇನ್ನೂ ಕಿರಿ ಕಿರಿ ಮಾಡಿ ತೊಂದರೆ ಕೊಡುತ್ತಿದ್ದಾನಾ ಎಂದು ಕೋದಂಡರಾಂ ಪ್ರಶ್ನಿಸಿದಾಗ
ಒಂದು ವಾರದಿಂದ ಫೋನ್ ಮಾಡಿಲ್ಲ ಎಲ್ಲಿ ಹೋಗಿದ್ದಾನೋ ಹೋಗಲಿ ಎಂದು ಆಶ‌ ಹೇಳುತ್ತಾಳೆ.
ನಿನಗೆ ಒಳ್ಳೆಯದಾದರೆ ಸಾಕಮ್ಮಾ ಎಂದು ಕೋದಂಡರಾಂ ಹೇಳಿದಾಗ
ಥ್ಯಾಂಕ್ಸ್ ‌ಕಣಪ್ಪಾ ಎಂದು ಹೇಳಿ ತನ್ನ ರೂಮಿಗೆ ಹೋಗಿ, ತನ್ನ ಮೊಬೈಲಿನಲ್ಲಿದ್ದ ಅಭಿಜಿತ್ ಹೆಸರು ನೋಡಿ, ಫೋನ್ ಮಾಡಲಾ ಎನಿಸಿದರೂ, ಅಯ್ಯೋ ಬೇಡಪ್ಪಾ ಎಂದುಕೊಂಡು ಈ‌ ನಂಬರಿನಲ್ಲಿ ವಾಟ್ಸಪ್ ಇದ್ದರೆ ಏನಾದರೂ ಮೆಸೇಜ್ ಮಾಡೋಣವೆಂದು ಹಾಯ್ ಹೇಗಿದ್ದೀರಾ ಎಂದು‌ ಟೈಪ್ ಮಾಡಿ ಇನ್ನೇನು ಕಳುಹಿಸಬೇಕು ಎನ್ನುವಷ್ಟರಲ್ಲಿ ಅಯ್ಯೋ ಬೇಡಪ್ಪಾ ಅವರೇ ಫೋನ್ ಮಾಡಲಿ ನಂತರ ಮಾತನಾಡೋಣವೆಂದುಕೊಂಡು ರಿಮೂವ್ ಮಾಡಲು ಹೋಗುವಷ್ಟರಲ್ಲಿ, ಆಶಾ ಎಲ್ಲಿದ್ದೀಯಾ ಬಾಮ್ಮಾ ಎಂದು ಅವಳಮ್ಮ ಕರೆದಾಗ
ಬಂದೇ ಅಮ್ಮಾ ಎನ್ನುತ್ತಾ ಟೈಪ್ ಮಾಡಿದ್ದ ಮೆಸೇಜನ್ನು ರಿಮೂವ್ ಮಾಡಲು ಹೋಗಿ ಕೈ ತಪ್ಪಿನಿಂದ ಪಕ್ಕದಲ್ಲಿದ್ದ ಫಾರ್ವರ್ಡ್ ಚಿಹ್ನೆಯನ್ನು ಒತ್ತಿಬಿಡುತ್ತಾಳೆ.
ಅಯ್ಯೋ ಮೆಸೇಜ್ ಹೋಯಿತೆಂದು, ಅದನ್ನು ಡಿಲೀಟ್ ಮಾಡುವ ವೇಳೆಗೆ ಅವಳಮ್ಮಾ ಆಶಾ ಎಲ್ಲಿದ್ದೀಯಾ ಬೇಗ ಬಾ ಎಂದು ಪುನಃ ಕರೆದಾಗ.
ಬಂದೇ ಇರಮ್ಮಾ ಎನ್ನುತ್ತಾ, ರಿಮೂವ್ ಬಟನ್ ಒತ್ತುವ ಬದಲಿಗೆ ವಿಡಿಯೋ ಕಾಲ್ ಬಟನ್ ಒತ್ತುಬಿಡುತ್ತಾಳೆ. ಅಯ್ಯೋ ವಿಡಿಯೋ ಕಾಲ್ ಹೋಯಿತೆಂದು ಗಾಬರಿಯಿಂದ ವಿಡಿಯೋ ಕಾಲ್ ನಿಲ್ಲಿಸಿ, ಮೆಸೇಜ್ ಡಿಲೀಟ್ ಮಾಡಿ, ಬಂದೇ ಅಮ್ಮಾ ಎನ್ನುತ್ತಾ, ಅವಳಮ್ಮನು ಇದ್ದಲ್ಲಿಗೆ ಬಂದು ಏನಮ್ಮಾ ಎಂದು ಕೇಳಿದಾಗ
ಮದುವೆ ಇನ್ನು ಹದಿನೈದು ದಿನ ಇದೆ, ನೀನು ಸಹಾಯ ಮಾಡದೆ ಮೂರು ಹೊತ್ತೂ ಮೊಬೈಲಿನಲ್ಲಿ ಮಾತನಾಡುತ್ತಿದ್ದರೆ ನಾನೊಬ್ಬಳು ಏನು ಮಾಡಲಿ? ನನಗಂತೂ ಸಾಧ್ಯವೇ ಇಲ್ಲವೆಂದು ಅವಳಮ್ಮ ನುಡಿಯಲು,
ಅಮ್ಮಾ ನಾನು ಮೊಬೈಲಿನಲ್ಲಿ ಆಟವಾಡುವುದಿಲ್ಲ. ನಿನಗೆ ಹೆಲ್ಪ್ ಮಾಡುತ್ತೇನೆ ಎಂದು ಆಶ ಹೇಳಿದಾಗ
ನಿನ್ನ ಚಿಕ್ಕಮ್ಮಂದಿರು ಅತ್ತೆ ಬರುವವರೆಗೆ ಸಹಾಯ ಮಾಡಮ್ಮಾ ಅವರು ಬಂದ ನಂತರ ಎಲ್ಲವನ್ನೂ ಅವರೇ ನಿಭಾಯಿಸುತ್ತಾರೆಂದಾಗ
ಆಗಲಮ್ಮಾ ಎಂದು ಆಶ‌ ಹೇಳಿ, ಅಮ್ಮ ಹೇಳಿದ ಕೆಲಸವನ್ನು ಮಾಡಿ ಮುಗಿಸಿ ರೂಮಿಗೆ ವಾಪಸ್‌ ಬರುವ ವೇಳೆಗೆ‌ ರಾತ್ರಿ ಹನ್ನೊಂದು ಗಂಟೆಯಾಗಿರುತ್ತದೆ. ಆ‌ ವೇಳೆಗೆ ಮೊಬೈಲ್ ರಿಂಗ್ ಆಗುತ್ತಿದ್ದು, ಯಾರದ್ದೆಂದು ನೋಡಲು ಅಭಿಜಿತ್ ಕಾಲ್ ಆಗಿದ್ದರಿಂದ, ಅಯ್ಯೋ ನಾನು ಮೆಸೇಜ್ ಡಿಲೀಟ್ ಮಾಡಿದ್ದೆ. ವಿಡಿಯೋ ಕಾಲ್ ಬೇರೆ ಹೋಗಿತ್ತು ಅದಕ್ಕೆ ಅವರೇ ಫೋನ್ ಮಾಡುತ್ತಿದ್ದಾರೆ ಈಗೇನು ಮಾಡಲಿ? ಎನ್ನುತ್ತಾ ಹಲೋ ಎನ್ನುತ್ತಾಳೆ
ಅಭಿಜಿತ್ ಕೂಡಾ ಹಲೋ ಎಂದು ಹೇಳಿ ಹೇಗಿದ್ದೀರಾ ಎಂದು ಪ್ರಶ್ನಿಸಿದಾಗ
ನಾನು ಚೆನ್ನಾಗಿದ್ದೇನೆ ನೀವು ಹುಷಾರಾದ್ರಾ ಎಂದು ಪ್ರಶ್ನಿಸುತ್ತಾಳೆ ಆಶಾ.
ಈಗ‌ ಕಂಪ್ಲೀಟ್ ಗುಣವಾಗಿದ್ದೇನೆ. ನಾನೇ ಫೋನ್ ಮಾಡೋಣವೆಂದುಕೊಂಡಿದ್ದೆ ನೀವೇ ಫೋನ್ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದಾಗ
ಅದೂ,,,,, ಮದುವೆ ಫಿಕ್ಸ್ ಆಯ್ತು ಎಂದು ನಮ್ಮಪ್ಪ ಹೇಳಿದ್ರು ಅದಕ್ಕೆ ಫೋನ್ ಮಾಡಿದೆ ಎಂದು ಆಶಳ‌ ಮಾತಿಗೆ, ನೀವು ಒಪ್ಪಿಕೊಂಡಿದ್ದಕ್ಕೆ ಥ್ಯಾಂಕ್ಸ್ ಎಂದು ಅಭಿಜಿತ್ ಹೇಳಿ ಇನ್ನೇನು ಸಮಾಚಾರ ಎಂದು ಅಭಿಜಿತ್ ಪ್ರಶ್ನಿಸಿದಾಗ
ಏನೂ ಇಲ್ಲಾ ಸುಮ್ಮನೆ ಫೋನ್ ಮಾಡೋಣ ಎನಿಸಿತು, ಅದಕ್ಕೆ ಮಾಡಿದೆ ಎನ್ನುತ್ತಾ, ನಿಮ್ಮನ್ನು ಆಸ್ಪತ್ರೆಯಲ್ಲಿ ಬಚಾವ್ ಮಾಡಿದ ರಘುನಂದನ್ ಗೆ ಥ್ಯಾಂಕ್ಸ್ ಹೇಳಬೇಕು ಎನ್ನುತ್ತಾಳೆ.
ನಿಮ್ಮ ತಂದೆ ರಘುನಂದನ್ ನೋಡಿ ಎಲ್ಲೋ ನೋಡಿದ್ದೇನೆ ಎಂದರು ನನಗಂತೂ ಅರ್ಥವಾಗಲಿಲ್ಲವೆಂದು ಅಭಿಜಿತ್ ಹೇಳಲು
ನಮ್ಮಣ್ಣ ಒಬ್ಬನಿದ್ದನಂತೆ ಅವನು ಈಗ ಇದ್ದಿದ್ದರೆ ರಘುನಂದನ್ ‌ಜೊತೆಯಾಗಿರಬೇಕಿತ್ತು, ಆ ವಯಸ್ಸಿನ ಹುಡುಗರನ್ನು ನೋಡಿದರೆ ನಮ್ಮಪ್ಪ ಕನ್ಫ್ಯೂಸ್ ಮಾಡಿಕೊಂಡು ಆ ರೀತಿ ಹೇಳುತ್ತಾರೆ ‌ಎಂದು ಆಶಾ ಹೇಳಲು
ಅಯ್ಯೋ ಪಾಪ, ಮಗನನ್ನು ಕಳೆದುಕೊಂಡ ದುಃಖದಿಂದ ಆ ರೀತಿ ಹೇಳುತ್ತಿರಬಹುದು ಎನ್ನುತ್ತಾ, ನಿಮ್ಮಣ್ಣನಿಗೆ ಏನಾಗಿತ್ತೆಂದು ಅಭಿಜಿತ್ ಪ್ರಶ್ನಿಸಿದಾಗ ‌
ಆಶ ನಡೆದ ಘಟನೆ ಹೇಳಿ ಈಗ ಎಲ್ಲಿದ್ದಾನೋ ಏನೋ? ಗೊತ್ತಿಲ್ಲ ನನಗಂತೂ ಬದುಕಿದ್ದಾನೆ ಎಂಬ ನಂಬಿಕೆ ಇದೆ. ಆದರೆ ಸಿಕ್ಕುತ್ತಿಲ್ಲವೆಂದಾಗ
ನಿಮ್ಮಣ್ಣನ ಫೋಟೋ ಇದೆಯಾ ಎಂದು ಅಭಿಜಿತ್ ಕೇಳಲು
ತಾನು ಸಾಫ್ಟ್ ವೇರ್ ನಲ್ಲಿ ಅಭಿವೃದ್ಧಿ ಪಡಿಸಿದ್ದ ತನ್ನಣ್ಣನ ಫೋಟೋವನ್ನು ಕಳುಹಿಸಿ, ಈಗ ಇದ್ದರೆ ಹೆಚ್ಚೂ ಕಡಿಮೆ ಹೀಗೇ ಇರುತ್ತಾನೆ, ಎಲ್ಲಾ ಕಡೆಯೂ ಹುಡುಕಿಸಿದೆವು, ಸೋಸಿಯಲ್ ಮೀಡಿಯಾದಲ್ಲಿ ಕೂಡಾ ಹಾಕಿದ್ದೆ ಆದರೆ ಎಲ್ಲೂ ಪತ್ತೆಯಾಗಿಲ್ಲ. ಆರ್ಮಿಯಲ್ಲೇನಾದರೂ ಇರಬಹುದೆಂದು ತಿಳಿಯೋಣವೆಂದರೆ, ಹೇಗೆ ವಿಚಾರಿಸಬೇಕೆಂದು ತಿಳಿಯಲಿಲ್ಲ. ನಿಮಗೆ ತಿಳಿದಿರುವಂತೆ ಈ ಫೋಟೋ‌ದಲ್ಲಿರುವವರನ್ನು ನಿಮ್ಮ ಆರ್ಮಿಯಲ್ಲಿ ನೋಡಿದ್ದೀರಾ ಎಂದು ಆಶ ಕೇಳಲು
ಅಭಿಜಿತ್ ಆಶ‌ ಕಳುಹಿಸಿದ್ದ ಫೋಟೋವನ್ನು ಎರಡು ನಿಮಿಷ ನೋಡಿ, ವಿಚಾರ ಮಾಡಬೇಕು, ನನಗೆ ಸ್ವಲ್ಪ ದಿನ ಟೈಮ್ ಕೊಡಿ ಎಂದು ಅಭಿಜಿತ್ ಹೇಳಿದಾಗ
ನಮ್ಮಣ್ಣ ಸಿಗುತ್ತಾನೆ ಎಂದರೆ ಎಷ್ಟು ದಿನ ಬೇಕಾದರೂ ಟೈಮ್ ತೆಗೆದುಕೊಂಡು ನಮ್ಮಣ್ಣನನ್ನು ಹುಡುಕಿ ಕೊಡಿ ಪ್ಲೀಸ್‌ ಎಂದು ಆಶ‌ ನುಡಿಯಲು
ನಾನು ಹುಡುಕಿ ಕೊಡುತ್ತೇನೆಂದು ಭರವಸೆ ನೀಡಲಾರೆ ಪ್ರಯತ್ನಿಸುತ್ತೇನೆಂದು ಹೇಳಿ ನಿಮ್ಮಣ್ಣನ ಹೆಸರು ವಿವರ ಕಳುಹಿಸಿ, ನಿಮ್ಮಣ್ಣನ ದೇಹದ ಮೇಲೆ ಏನಾದರೂ ಗುರುತುಗಳಿವೆಯಾ ಹೇಳಿ ದರೆ ಪತ್ತೆ ಹಚ್ಚಲು ಸುಲಭವಾಗುತ್ತದೆಂಬ ಅಭಿಜಿತ್ ಮಾತಿಗೆ,
ಅಂತಹ ಗುರುತು ಏನೂ ಇಲ್ಲವೆಂದು ನಮ್ಮಪ್ಪ ಹೇಳುತ್ತಿದ್ದರು, ಆದರೆ ಅವನು ಏನು ಕಷ್ಟದ ಕೆಲಸ‌ ಮಾಡಬೇಕಾದರೂ ಜೈ ರಘುವೀರ ಸಮರ್ಥ ಎನ್ನುತ್ತಿದ್ದನೆಂದು ನಮ್ಮಪ್ಪ ಹೇಳುತ್ತಿದ್ದಾರೆ ಎಂದಾಗ
ಈ ವಿಚಾರವನ್ನು ನಮ್ಮ ಆರ್ಮಿಯಲ್ಲಿರುವ ಎಲ್ಲಾ ಸ್ನೇಹಿತರಿಗೆ ಕಳುಹಿಸಿ ಪತ್ತೆ ಮಾಡುತ್ತೇನೆಂದು ಅಭಿಜಿತ್ ಹೇಳಿ, ದಿನವೂ ಫೋನ್ ಮಾಡಿದರೆ ನಿಮ್ಮ ಅಬ್ಜಕ್ಷನ್ ಇಲ್ಲಾ ತಾನೇ ಎಂದು ಕೇಳಿದಾಗ
ನೋ ನೋ ನೀವು ಫೋನ್ ಮಾಡಿದರೆ ಸಂತೋಷವಾಗುತ್ತದೆ ಎನ್ನುತ್ತಾಳೆ ಆಶಾ
ಓಕೆ ನಾಳೆ ಫೋನ್ ಮಾಡುತ್ತೇನೆಂದು ಹೇಳಿ ಅಭಿಜಿತ್ ಫೋನ್ ಆಫ್ ಮಾಡುತ್ತಾನೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಿಂದ ತಿಳಿದು ಬರುವ ಅಂಶನೇನೆಂದರೆ

ಮನುಷ್ಯನಿಗೆ ಯಾವುದಾದರೂ ಬೆಲೆ ಬಾಳುವ ವಸ್ತುವನ್ನು ಕಳೆದುಕೊಂಡಿದ್ದರೆ ಯಾವಾಗಲೂ ಅನ್ಯಾಯವಾಗಿ ಹೋಯಿತೆಂದು ವ್ಯಥೆ ಪಡುತ್ತಾನೆ. ಹೀಗಿರುವಾಗ ತನ್ನ ಸ್ವಂತ ಸಂಬಂಧಿಕರು ಯಾರಾದರೂ ಕಳೆದು ಹೋಗಿದ್ದರೆ ಅದನ್ನು ಮರೆಯಲಾದೀತೇ?
ಮನುಷ್ಯ ತಾನು ಎಷ್ಟೇ ಹಣ ಗಳಿಸಿದರೂ, ನಾನು ದುಡಿದದ್ದೆಂದು ತಿಳಿದುಕೊಂಡು ಸುಮ್ಮನಿರುತ್ತಾನೆ. ಏನಾದರೂ ಹಣ ಕಳೆದುಹೋದರೆ ಅದನ್ನು ಜೀವನ ಪರ್ಯಂತ ಮರೆಯುವುದೇ ಇಲ್ಲ.