ಅಭಿಲಾಷೆ ಕಾದಂಬರಿ ಸಂಚಿಕೆ -51

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 51 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಇಬ್ಬರು ಯೋಧರು ಹಿಮದ ರಾಶಿಯೊಳಗೆ‌‌ ಸಿಲುಕಿದ್ದಾರೆಂದು ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಿರುವುದನ್ನು ನೋಡಿದ ಕೋದಂಡರಾಂ ರವರು, ಅಭಿಜಿತ್ ತಂದೆಗೆ ಫೋನ್ ಮಾಡಿ ಧೈರ್ಯ ಹೇಳಿರುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಇಬ್ಬರು ಯೋಧರು ಹಿಮದಲ್ಲಿ ಸಿಲುಕಿರುವುದಾಗಿ, ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆಯೆಂದು ಟಿವಿಯಲ್ಲಿ ಬರುತ್ತಿದ್ದ ವಾರ್ತೆಯನ್ನು ನೋಡಿ ಯಾರು ಸಿಲುಕಿದ್ದಾರೋ ಎಂದು ಅಭಿಜಿತ್ ‌ತಂದೆ ತಾಯಿ, ಕೋದಂಡರಾಂ ಅವರ ಪತ್ನಿ ಹಾಗೂ ಆಶಾ ಎಲ್ಲರೂ ಆತಂಕಕ್ಕೆ ಒಳಗಾಗಿರುತ್ತಾರೆ.
ವಿಕ್ರಮ್ ಸಹ ವಾರ್ತೆಯನ್ನು ನೋಡಿ, ಓ ಹೋ‌ ಆಶಾಳನ್ನು ಮದುವೆಯಾಗುವವನು ಹಿಮದಲ್ಲಿ‌ ಸಿಲುಕಿಕೊಂಡಿರಬಹುದು, ಅವನನ್ನು ರಕ್ಷಿಸಿದರೆ ಮಾತ್ರ‌ ಆಶಾ ಮದುವೆಯಾಗುತ್ತಾಳೆಂದುಕೊಂಡು,‌ ತಕ್ಷಣ‌ ಆಶಾಳಿಗೆ ಫೋನ್ ಮಾಡಿದಾಗ
ಯಾವುದೋ ಅನ್ ನೋನ್ ನಂಬರ್ ಎಂದು ಆಶ ಫೋನ್ ರಿಸೀವ್ ಮಾಡಿರುವುದಿಲ್ಲ. ಎರಡು ಮೂರು ಸಲ‌ ರಿಂಗ್ ಆದಾಗ
ಛೇ‌ ಯಾರಿದು ಇಷ್ಟು ತಲೆ‌ತಿನ್ನುತ್ತಿದ್ದಾರೆಂದುಕೊಂಡು ಬೇಸರದಿಂದ ಹಲೋ ಎನ್ನಲು
ಆಶಾ ಇಬ್ಬರು ಯೋಧರು ಹಿಮದಲ್ಲಿ ಸಿಲುಕಿದ್ದಾರಂತೆ ನಿನಗೆ ಗೊತ್ತಿಲ್ಲವಾ ಎಂದು ಕೇಳಲು
ವಿಕ್ರಮ್ ಸುಮ್ಮನೆ ಫೋನ್ ಮಾಡಿ ನನಗೇಕೆ ತೊಂದರೆ ಕೊಡುತ್ತಿದ್ದೀಯಾ? ಯಾರೋ ಪಾಪ ಸಿಲುಕಿದ್ದಾರೆಂದು ನನಗೂ ಗೊತ್ತು, ಅವರಿಗೇನೂ ಆಗುವುದಿಲ್ಲ, ನೀನೇಕೆ ಅವರ ವಿಚಾರವಾಗಿ ನನಗೆ ಹೇಳುತ್ತಿದ್ದೀಯಾ? ನೀನೇನಾದರೂ ಹೋಗಿ ಕಾಪಾಡುತ್ತೀಯಾ? ಇಲ್ಲಾ ತಾನೇ? ನಿನಗೆಲ್ಲಿ ಬರಬೇಕು ಆ ಯೋಗ್ಯತೆ ಎಂದು ವಿಕ್ರಮ್ ನನ್ನು ಆಶಾ ಮೂದಲಿಸಲು
ವಿಕ್ರಮ್ ಗೆ ಆಶಾಳ ಮಾತು ಕೇಳಿ ಇನ್ನೂ ಕೋಪ ಉಕ್ಕುತ್ತದೆ. ಇವಳು ನನ್ಮನ್ನು ಕಸಕ್ಕಿಂತ ಕಡೆ ಮಾಡಿಕೊಂಡಿದ್ದಾಳೆಂದುಕೊಂಡು
ನನ್ನ ಯೋಗ್ಯತೆ ಬಗ್ಗೆ ಮಾತಾಡಬೇಡಾ ಆಶಾ, ಏನೋ ನಿನ್ನನ್ನು ಮದುವೆಯಾಗುವವರೇನಾದರೂ ಸಿಲುಕಿಕೊಂಡಿರಬಹುದೇನೋ ಎಂದು ಹೇಳಿದೆ ಅಷ್ಟೇ ಎನ್ನಲು
ಯಾರಾದರೇನು? ಎಲ್ಲರೂ ಸುರಕ್ಷಿತವಾಗಿಯೇ ಬರುತ್ತಾರೆಂದು ಆಶ‌ ತನ್ನ ಆಶಾಭಾವನೆಯಿಂದ ಹೇಳಿದಾಗ
ಅಕಸ್ಮಾತ್ ಹೆಚ್ಚು ಕಡಿಮೆಯಾದರೆ ನೀನು ಯಾರನ್ನ ಮದುವೆಯಾಗುತ್ತೀಯಾ ಎಂದು ಕೇಳಿದೆ ಎಂದಾಗ
ಆಶಾಳಿಗೆ ಕೋಪ ತಡೆಯಲು ಆಗುವುದಿಲ್ಲ ಈಡಿಯಟ್ ಏನು ಮಾತನಾಡುತ್ತಿದ್ದೀಯಾ ಎಂಬುದು ನಿನಗೆ ಅರಿವಿದೆಯಾ? ಎಂದು ಕೋಪೋದ್ರಿಕ್ತಳಾಗಿ ಆಶಾ ಕೇಳಲು
ವಿಕ್ರಮ್ ಗೆ ಮುಖದ‌ ಮೇಲೆ ಹೊಡೆದಂತಾಗಿ ತುಂಬಾ ಕಸಿವಿಸಿಯಾಗುತ್ತದೆ, ಹಾಗಲ್ಲಾ ಆಶಾ ನಾನು ಹೇಳಿದ್ದು ಎಂದು ಪುನಃ ವಿಕ್ರಮ್ ತನ್ನನ್ನು ಡಿಫೆಂಡ್ ಮಾಡಿಕೊಳ್ಳಲು ಹೋದಾಗ
ನೋಡು ವಿಕ್ರಮ್ ಪದೇ‌ ಪದೇ ನನಗೆ ಫೋನ್ ಮಾಡಿ ತೊಂದರೆ ಕೊಡಬೇಡಾ, ಇದೇ ನಿನಗೆ ಲಾಸ್ಟ್‌ ವಾರ್ನಿಂಗ್ ಇನ್ನೊಂದು ಸಲ ಏನಾದರೂ ನನಗೆ ಫೋನ್ ಮಾಡಿದೆಯೋ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಆಶ ಎಚ್ಚರಿಕೆ ನೀಡಿ ವಿಕ್ರಮ್ ಮಾತನಾಡುವ ಮುಂಚೆ ಫೋನ್ ಆಫ್ ಮಾಡುತ್ತಾಳೆ.

ರಾತ್ರಿ ಪುನಃ ಟಿವಿಯಲ್ಲಿ ಹಿಮದಲ್ಲಿ ಸಿಕ್ಕಿಕೊಂಡಿದ್ದವರ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದು ಹಿಮದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಗೆ ಸೇರಿಸಿದ್ದಾರೆಂದು ಪ್ರಾಣಾಪಾಯಕ್ಕೆ ಏನೂ ತೊಂದರೆ ಇಲ್ಲವೆಂದು ಮತ್ತು ಹಿಮದಲ್ಲಿ ಸಿಲುಕಿದವರಲ್ಲಿ ಒಬ್ಬರು ಅಭಿಜಿತ್ ಎಂದು ಹೇಳಲಾಗಿದೆ ಎಂಬುದಾಗಿ ಸುದ್ದಿ ಬಿತ್ತರವಾಗಿದ್ದನ್ನು ನೋಡಿ ಎಲ್ಲರೂ ನಿಟ್ಟುಸಿರು ಬಿಡುತ್ತಾರೆ.
ಅಭಿಜಿತ್ ತಂದೆಯು ನನ್ನ ಮಗನಿಗೆ ಏನಾಯಿತಪ್ಪಾ? ತಕ್ಷಣ ಮಗನನ್ನು ನೋಡಬೇಕೆಂಬ ಕಾತರ ಜಾಸ್ತಿಯಾಗಿದ್ದು, ಮಿಲಿಟರಿ ಹೆಡ್ ಕ್ವಾರ್ಟರ್ಸ್ ‌ನ ನಂಬರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಅಭಿಜಿತ್ ರವರು ಹಿಮದಲ್ಲಿ ಸಿಲುಕಿದ್ದರಿಂದ ಅವರ ದೇಹದ‌ ಉಷ್ಣಾಂಶವು ಏರುಪೇರಾಗಿದೆ. ಇಲ್ಲಿನ ವಾತಾವರಣದಲ್ಲಿ ಚಳಿ ಜಾಸ್ತಿ ಇರುವುದರಿಂದ ಇಲ್ಲಿ ಎರಡು ದಿನಗಳು ಚಿಕಿತ್ಸೆ ಕೊಟ್ಟ ನಂತರ ಸ್ವಲ್ಪ ದಿನ ಹೆಚ್ಚಿನ ಉಷ್ಣಾಂಶ‌ ಇರುವ ಸ್ಥಳಕ್ಕೆ ಶಿಫ್ಚ್ ಮಾಡಬೇಕಿರುವುದರಿಂದ ಅವರನ್ನು ಊರಿಗೆ ಕಳುಹಿಸುತ್ತೇವೆಂದು ಹೇಳಿದಾಗ
ಆದಷ್ಚೂ ಬೇಗ ಕಳುಹಿಸುವಂತೆ ಅಭಿಜಿತ್ ತಂದೆ ರಿಕ್ವೆಸ್ಟ್ ಮಾಡಿಕೊಂಡಾಗ.
ಇನ್ನು ಎರಡು ದಿನಗಳಲ್ಲಿ ಏರ್ಪಾಡು ಮಾಡುತ್ತೇವೆ. ಅವರಿಗೆ ತಕ್ಷಣ ಹೆಚ್ಚಿನ ಉಷ್ಣಾಂಶ ಇರುವ ಪ್ರದೇಶದ ಅವಶ್ಯಕತೆ ಇದೆ. ಅವರನ್ನು ಕಳುಹಿಸಿದ ನಂತರ ಫೋನ್ ಮಾಡುತ್ತೇವೆಂದು ಹೆಡ್ ಕ್ವಾರ್ಟರ್ಸ್ ರವರು ಹೇಳಿ ಫೋನ್ ಆಫ್ ಮಾಡುತ್ತಾರೆ.
ಹೆಡ್ ಕ್ವಾರ್ಟರ್ಸ್ ರವರು ನಿಮ್ಮ ಮಗನ ಪ್ರಾಣಾಪಾಯಕ್ಕೆ ತೊಂದರೆ ಇಲ್ಲವೆಂದು ಹೇಳಿದರೂ ಅಭಿಜಿತ್ ತಂದೆಯ ಮನಸ್ಸಿನಲ್ಲಿ ದುಗುಡ ಕಳವಳ‌ ಉಂಟಾಗಿರುತ್ತದೆ. ಈ ವಿಷಯವನ್ನು ಕೋದಂಡರಾಂ ರವರಿಗೆ ತಿಳಿಸಿದಾಗ
ಕೋದಂಡರಾಂ ರವರು ಮಾತನಾಡಿ, ಸದ್ಯ ನಂಬಿದ ದೇವರು ಒಳ್ಳೆಯದು ಮಾಡಿದ, ಇನ್ನೇನೂ‌ ಭಯವಿಲ್ಲಾ ಸಾರ್ ಎನ್ನುತ್ತಾರೆ
ಮಾಸ್ಟ್ರೇ ಆದರೂ ಮಗನನ್ನು ಕಣ್ಣಿಂದ ನೋಡುವವರೆಗೂ ಮನಸ್ಸಿಗೆ ಸಮಾಧಾನ ಇಲ್ಲವೆಂದು ಅಭಿಜಿತ್ ತಂದೆ ಹೇಳಲು
ಹೌದೂ ಸಾರ್ ನಿಮ್ಮ ಮಾತು ನಿಜ. ಹೆತ್ತ‌ಕರುಳು ಮಕ್ಕಳಿಗಾಗಿ ಮಿಡುಯುವುದು ಸಹಜಾ ಸಾರ್, ಇನ್ನೆರಡು ದಿನಗಳು ಅಷ್ಟೇ ನಿಮ್ಮ ಮಗ ಬಂದುಬಿಡುತ್ತಾರೆ. ಅವರು ಪುನಃ ಹೋಗುವುದರೊಳಗೆ ಮದುವೆ ಮಾಡಿ ಕಳುಹಿಸೋಣ, ಪುನಃ ನಿಮ್ಮ ಮಗ ಮದುವೆದಾಗಿ ರಜೆ ಪಡೆಯುವುದು ತಪ್ಪುತ್ತದೆಂದು ‌ಕೋದಂಡರಾಮ್ ಹೇಳಲು
ಏನ್ ಮಾಸ್ಟ್ರೇ ನೀವು ಹೀಗೇ ಹೇಳುತ್ತಿದ್ದೀರಾ? ಮಗನು ಯಾವ ಸ್ಥಿತಿಯಲ್ಲಿದ್ದಾನೋ ಏನೋ ಎಂದು ಚಿಂತೆಯಲ್ಲಿದ್ದರೆ ನೀವು ಮದುವೆ ವಿಚಾರ ಮಾತನಾಡುತ್ತಿದ್ದೀರಾ ಎಂದು ಅಭಿಜಿತ್ ತಂದೆ ಆಕ್ಷೇಪಿಸಲು
ಹಾಗಲ್ಲಾ ಸಾರ್ ನಾವು ಯಾವಾಗಲೂ ಒಳ್ಳೆಯದನ್ನೇ ನಿರೀಕ್ಷಿಸಬೇಕು, ನಿಮ್ಮ ಮಗನಿಗೆ ಏನೂ ಆಗಿಲ್ಲವೆಂದು ನ್ಯೂಸ್ ನಲ್ಲಿ ಬಂದಿದೆಯಲ್ಲಾ ? ಇನ್ನೇಕೆ ಯೋಚಿಸುತ್ತೀರೆಂದು ಕೋದಂಡರಾಂ ಮಾತಿಗೆ
ಹಾಗಲ್ಲಾ ಮೇಷ್ಟ್ರೇ ಒಂದು ಸಲ‌ ಮಗನನ್ನು ನೋಡಿದ ಮೇಲೆ ನಾವು ಮುಂದಿನದನ್ನು ಡಿಸೈಡ್ ಮಾಡಬಹುದೆಂಬುದು ನಮ್ಮ ಅನಿಸಿಕೆ ಎಂದು ಅಭಿಜಿತ್ ತಂದೆ ಹೇಳುತ್ತಾರೆ.
ನೀವೇನೂ ಯೋಚಿಸಬೇಕಾದ ಅವಶ್ಯಕತೆ ಇಲ್ಲಾ ಸಾರ್ ಏತೆಂದರೆ ನಿಮ್ಮ ಮಗನ ಆರೋಗ್ಯ ಸರಿ ಇಲ್ಲದೇ ಇದ್ದಿದ್ದರೆ ಊರಿಗೇಕೆ ಕಳುಹಿಸುತ್ತಿದ್ದರೆಂದು ಕೋದಂಡರಾಂ ಪ್ರಶ್ನಿಸುತ್ತಾರೆ
ನನ್ನ ಮಗ ಇಲ್ಲಿಗೆ ಬಂದರೆ ಮನೆಗೆ ಬರುತ್ತಾನೋ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಗೊ ಹೋಗುತ್ತಾನೋ ತಿಳಿಯುತ್ತಿಲ್ಲ, ಅವನು ಬಂದ ಮೇಲೆ ಎಲ್ಲವೂ ತಿಳಿಯುತ್ತದೆಂದು ಅಭಿಜಿತ್ ತಂದೆಯ ಮಾತಿಗೆ,
ನನ್ನ ಅಂದಾಜಿನ ಪ್ರಕಾರ ಮನೆಗೇ ಬರಬಹುದೆನಿಸಿದೆ ಸಾರ್ ಎಂದು ಕೋದಂಡರಾಂ ಹೇಳುತ್ತಾರೆ
ನೋಡೋಣ ಮನೆಗೆ ಬರಲಿ ನಂತರ ಡಿಸೈಡ್ ಮಾಡೋಣವೆಂದು ಅಭಿಜಿತ್ ತಂದೆಯು ಹೇಳಿ ಫೋನ್ ಆಫ್ ಮಾಡುತ್ತಾರೆ.

ಎರಡು ದಿನ ಕಳೆದ‌ ನಂತರ ಅಭಿಜಿತ್‌ ನನ್ನು ನಿಮ್ಮ ಮನೆಗೆ ನಾಳೆ ಕಳುಹಿಸುತ್ತಿದ್ದೇವೆಂದು ಅಭಿಜಿತ್ ವಿಮಾನ ಹತ್ತುವ ವೇಳೆ ಹಾಗೂ ಊರಿಗೆ ತಲುಪುವ ವೇಳೆಯನ್ನು ತಿಳಿಸಿ ನಿಮ್ಮ ಮಗನನ್ನು ಬರಮಾಡಿಕೊಳ್ಳಿ, ಸ್ವಲ್ಪ ದಿನಗಳ ನಂತರ ವಾಪಸ್‌ ಕರೆಸಿಕೊಳ್ಳುತ್ತೇವೆಂದು ಹೇಳಿ ಮಿಲಿಟರಿ ಹೆಡ್ ಕ್ವಾರ್ಟರ್ಸ್ ‌ನವರು ಫೋನ್ ಆಫ್ ಮಾಡುತ್ತಾರೆ.
ಮಾರನೇ ದಿನ ಬೆಳಿಗ್ಗೆ ಅಭಿಜಿತ್ ವಿಮಾನದಲ್ಲಿ‌ ಬಂದಿಳಿದಾಗ
ಅವರಪ್ಪ ಹಾಗೂ ಕೋದಂಡರಾಂ ಇಬ್ಬರೂ ಬರಮಾಡಿಕೊಳ್ಳುತ್ತಾರೆ.
ಅಭಿಜಿತ್ ನಲ್ಲಿ ಆರೋಗ್ಯದ ಸಮಸ್ಯೆ ಏನೂ ಇಲ್ಲದ್ದರಿಂದ ಅವರಪ್ಪ ನಿಟ್ಚುಸಿರು ಬಿಡುತ್ತಾರೆ.
ಆಸ್ಪತ್ರೆಗೆ ಹೋಗಬೇಕಾ ಎಂದು ಕೋದಂಡರಾಂ ರವರು ಪ್ರಶ್ನಿಸಲು
ಈಗತಾನೇ ಬಂದಿದ್ದೇನೆ, ಹುಷಾರಾಗಿದ್ದೇನೆ ಅಂಕಲ್ ಎಂದು ಅಭಿಜಿತ್ ಹೇಳಿದಾಗ
ಈ ಘಟನೆ ಯಾವ ರೀತಿ ಆಯಿತು ನಿನಗೆ ಹಿಮ ಆವರಿಸುತ್ತದೆ ಹುಷಾರಾಗಿರಬೇಕೆಂದು ಗೊತ್ತಾಗಲಿಲ್ಲವಾ ಎಂದು ಅವರ ತಂದೆ ಕೇಳಲು
ಇಲ್ಲಪ್ಪಾ ನಾನು ಹುಷಾರಾಗಿಯೇ ಇದ್ದೆ, ಆದರೆ ನಾನಿರುವುದಕ್ಕಿಂತ ಸ್ವಲ್ಪ ಮುಂದೆ ಕೊರಕಲು ಇದ್ದದ್ದು ಮಂಜು ಮುಸುಕಿದ್ದರಿಂದ ಕಾಣಲಿಲ್ಲ, ಅದರ ಮೇಲೆ ಕಾಲಿಟ್ಟ ತಕ್ಷಣ ಇಳಿಜಾರಿನಲ್ಲಿ ಹೋಗುವಂತಾಯಿತು, ನನ್ನ ಅದೃಷ್ಟ ಚೆನ್ನಾಗಿತ್ತಪ್ಪಾ, ನನ್ನ ಪೂರ್ತಿ ಶರೀರ ಹಿಮದಲ್ಲಿ ಮುಚ್ಚಿಕೊಳ್ಳಲಿಲ್ಲ ಕತ್ತಿನವರೆಗೆ ಮಾತ್ರ ಹಿಮ ಮಂಜಿನ ಗೆಡ್ಡೆಯಿಂದ ಮುಚ್ಚಿತ್ತು, ನಾನು ಒಂದು ಕೈಯ್ಯನ್ನು ಮೇಲೆಕ್ಕೆತ್ತಿ ಹೆಲ್ಪ್ ಹೆಲ್ಪ್ ಎಂದು ಕೂಗಿದೆ. ನನಗೆ ಸ್ವಲ್ಪ ದೂರದಲ್ಲಿದ್ದ ನನ್ನ ಸಹೋದ್ಯೋಗಿ ಯು ತಕ್ಷಣ ನನ್ನ ಕೈ ಹಿಡಿದು ತಡೆದರು. ನನ್ನ ಜೊತೆ‌ ಇನ್ನೊಬ್ಬರು ಕೂಡಾ ಹಿಮದಲ್ಲಿ ಅರ್ಧ ಮುಚ್ಚಿಹೋಗಿದ್ದರು, ನಮ್ಮಿಬ್ಬರನ್ನು ಆಸ್ಪತ್ರೆಗೆ ‌ಸೇರಿಸಿ ಟ್ರೀಟ್‌ಮೆಂಟ್ ಕೊಟ್ಟರು ಒಂದು ದಿನಕ್ಕೆ ಚೇತರಿಸಿಕೊಂಡೆ, ಆದರೂ ಸ್ವಲ್ಪ ದಿನ ಉಷ್ಣಾಂಶ ಹೆಚ್ಚಿರುವ ಪ್ರದೇಶದಲ್ಲಿರಬೇಕೆಂದು ನಮ್ಮ ಡಾಕ್ಟರ್ ಹೇಳಿದ್ದರಿಂದ ನನ್ನನ್ನು ಮನೆಗೆ ಕಳುಹಿಸಿದ್ದಾರೆ. ನನ್ನ ಎಡಗೈ ಮೇಲೆ ಹಿಮದ ಗಟ್ಟಿ ಇದ್ದುದ್ದರಿಂದ ಸ್ವಲ್ಪ ಮರಗಟ್ಟಿದಂತಾಗಿದೆ, ಇಲ್ಲಿ ಟ್ರೀಟ್ ಮೆಂಟ್ ತೆಗೆದುಕೊಂಡರೆ ಸರಿ ಹೋಗುತ್ತದೆಂದು ಅಭಿಜಿತ್‌ ಹೇಳಿದಾಗ.
ಇಂದು ಮನೆಯಲ್ಲೇ ರೆಸ್ಟ್ ತೊಗೋ ನಾಳೆ ಆಸ್ಪತ್ರೆಗೆ ಹೋಗೋಣವೆಂದು ಅವರಪ್ಪ ಹೇಳಿದಾಗ
ಆಗಲಪ್ಪಾ ಎಂದು ಹೇಳುವ ವೇಳೆಗೆ ಮನೆಯ ಮುಂದೆ ಕಾರು ನಿಂತಾಗ
ಮೂರು ಜನರೂ ಕಾರಿನಿಂದಿಳಿದು ಒಳಗೆ ಹೋದ‌‌ ತಕ್ಷಣ
ಅಭಿಜಿತ್ ತಾಯಿಗೆ ಮಗನ ಕಂಡು ಬಹಳ ಸಂತೋಷ ವಾಗುತ್ತದೆ. ಮನೆಯ ಮುಂದೆ ನಿಲ್ಲಿಸಿ ಯಾರ ದೃಷ್ಟಿ ತಗಲಬಾರದೆಂದು ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ

ಎಷ್ಟೇ ಕಷ್ಟಬಂದರೂ ಅಡಚಣೆಗಳಿದ್ದರೂ ಮನುಷ್ಯ ಜೀವನದಲ್ಲಿ ಸಕಾರಾತ್ಮಕ (Positive attitude) ಭಾವನೆಯನ್ನು ಹೊಂದಿರಬೇಕು. ಜೀವನದಲ್ಲಿ ಆಶಾಭಾವನೆ ಹೊಂದಿದ್ದರೆ ರೋಗಗಳಿಂದ ದೂರ ಇರಬಹುದು. ಜೊತೆಗೆ ಸಾಧಿಸಲಾಗದ್ದನ್ನು ಸಾಧಿಸಬಹುದು. ತಾನು ಮಾಡುವ ಕೆಲಸ‌ ಒಳ್ಳೆಯದೆನಿಸಿದರೆ ಯಾರು ಪ್ರೋತ್ಸಾಹಿಸಲೀ ಅಥವಾ ಬಿಡಲೀ ತನ್ನ ಪ್ರಯತ್ನವನ್ನು ಮುಂದುವರೆಸಬೇಕು. ತನ್ನ ಪ್ರಯತ್ನಕ್ಕೆ ಎಲ್ಲೋ ಒಂದು ಕಡೆ ಯಶಸ್ಸು ಸಿಗುತ್ತದೆ. ಆದರೆ ಸಕಾರಾತ್ಮಕ (Negative attitude) ಭಾವನೆ ಜೊತೆಗೆ ನಿರಾಶಾಭಾವನೆಯು ಮನುಷ್ಯನ ಜೀವವನ್ನು ಅರ್ಧ ಕೊಲ್ಲುತ್ತದೆ.

ಅಭಿಲಾಷೆ ಕಾದಂಬರಿ ಸಂಚಿಕೆ -52

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 52 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಅಭಿಜಿತ್ ಮನೆಗೆ ಬಂದಾಗ ಅವನ ಅಮ್ಮ ಆರತಿ ಬೆಳಗಿ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಅಭಿಜಿತ್‌ ನ ಬರಮಾಡಿಕೊಂಡ‌ ನಂತರ ಅಭಿಜಿತ್ ಫ್ರೆಶ್ ಅಪ್ ಆಗಲು ಹೋಗುತ್ತಾನೆ
ಅಭಿಜಿತ್ ತಂದೆ ಕೋದಂಡರಾಂ ರವರನ್ನು ಸೋಫಾಮೇಲೆ ಕುಳಿತುಕೊಳ್ಳುವಂತೆ ಹೇಳಿ‌ ಕಾಫಿ ತಂದುಕೊಡುವಂತೆ ತನ್ನ ಪತ್ನಿಗೆ ಹೇಳಿದಾಗ
ಅಭಿಜಿತ್ ಅಮ್ಮನು ಬಿಸಿ ಬಿಸಿ ಕಾಫಿಯನ್ನು ತರುವ ವೇಳೆಗೆ ಅಭಿಜಿತ್ ಬಂದು ಕುಳಿತುಕೊಳ್ಳುತ್ತಾನೆ.
ಅವರಮ್ಮ ಮೂರು ಜನರಿಗೂ ಕಾಫಿ ಕೊಟ್ಟಾಗ
ಆಹಾ ಈ ಚಳಿಗೆ ಬಹಳ‌ ಹಿತವಾಗಿದೆಯೆಂದು ಅಭಿಜಿತ್ ಹೇಳಿ ಕಾಫಿ ಕುಡಿದ ನಂತರ
ಕೋದಂಡರಾಂ ರವರು ನಾನಿನ್ನು ಬರುತ್ತೇನೆಂದು ಹೇಳಿದಾಗ
ತಿಂಡಿ ತಿಂದು ಹೋಗಲೇಬೇಕೆಂದು ಅಭಿಜಿತ್ ತಂದೆ ಬಲವಂತಪಡಿಸಿದ್ದಕ್ಕೆ, ಬೇಡ ಎನ್ನಲಾರದೆ, ಕೋದಂಡರಾಂ ರವರು ತಿಂಡಿಯನ್ನು ತಿಂದು ನಾನಿನ್ನು ಬರುತ್ತೇನೆ. ಅಕಸ್ಮಾತ್ ಆಸ್ಪತ್ರೆಗೆ ಹೋಗುವುದಿದ್ದರೆ ನಾನೂ ಜೊತೆಯಲ್ಲಿ ಬರುತ್ತೇನೆಂದು ಹೇಳಿದಾಗ
ಸುಮ್ಮನೆ ಚೆಕ್ ಅಪ್ ಮಾಡಿಸಿ ಬರುತ್ತೇವೆ ನಿಮಗೇಕೆ ತೊಂದರೆ ಎಂದು ಅಭಿಜಿತ್ ತಂದೆಯ ಮಾತಿಗೆ
ಛೇ ಛೇ ನನಗೇಕೆ ತೊಂದರೆಯಾಗುತ್ತದ? ನಾಳೆ ಮನೆಯ ಅಳಿಯನಾಗುವವರ ಆರೋಗ್ಕವನ್ನು ನೋಡಿಕೊಳ್ಳಲಾಗದಿದ್ದರೆ ಹೇಗೇ ಸಾರ್ ಎಂದಾಗ
ಈ ಮಾತಿಗೆ ಎಲ್ಲರೂ ಮೌನವಾದಾಗ
ಅಯ್ಯೋ ನಾನೀಗಲೇ ಈ ಮಾತನ್ನು ಹೇಳಬಾರದಿತ್ತೆಂದು ಕೋದಂಡರಾಂ ಗೆ ಕಸಿವಿಸಿಯಾಗಿ, ನಾನು ಹೇಳಿದ್ದು,‌ ನಾಳೆ ಯಾರ ಮನೆಯ ಅಳಿಯರಾದರೂ ಆರೋಗ್ಯ ನೋಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ತಮ್ಮನ್ನು ಸಮರ್ಥಿಸಿಕೊಂಡಾಗ
ಛೇ ಛೇ ಇದರಲ್ಲಿ ನಮ್ಮ ಆಕ್ಷೇಪಣೆಯೇನೂ ಇಲ್ಲಾ ಎಲ್ಲರೂ ಒಪ್ಪಿದ್ದೇವಲ್ಲಾ ಇನ್ನೇಕೆ ಅನುಮಾನ? ನಾವುಗಳೇ ಇದ್ದೀವಲ್ಲಾ ನಿಮಗೇಕೆ ತೊಂದರೆ ಎಂದು ಹೇಳಿದೆ ಅಷ್ಟೇ, ನೀವೂ ಬರುವುದರಲ್ಲಿ ತಪ್ಪಿಲ್ಲವೆಂದು ಅಭಿಜಿತ್ ತಂದೆ ಹೇಳಿದಾಗ
ನೀವು ಆಸ್ಪತ್ರೆಗೆ ಹೋಗುವ ದಿನ ತಿಳಿಸಿ ನಾನೂ ಬರುತ್ತೇನೆಂದು ಕೋದಂಡರಾಮ್ ಹೇಳಿದ್ದಕ್ಕೆ
ಆಗಬಹುದು ಅಂಕಲ್‌ ಎಂದು ಅಭಿಜಿತ್ ನುಡಿದ ನಂತರ
ನಾನಿನ್ನು ಬರುತ್ತೇನೆಂದು ಹೇಳಿ, ಕೋದಂಡರಾಂ ‌ರವರು ಮನೆಗೆ ವಾಪಸ್‌ ಬಂದು ಸೋಫಾ ಮೇಲೆ ಕುಳಿತುಕೊಳ್ಳುತ್ತಾ ಅಬ್ಬಾ ಒಂದು ಗಂಡಾಂತರ ತಪ್ಪಿತೆಂದು ಅವರ ಪತ್ನಿಗೆ ಹೇಳಲು
ಒಂದಲ್ಲಾ ಎರಡು ಗಂಡಾಂತರ ತಪ್ಪಿದಹಾಗಾಯ್ತೆಂದು ಅವರ ಪತ್ನಿ ಮಗಳ ಕಿಡ್ನಾಪ್ ಘಟನೆಯನ್ನು ನೆನಪಿಸಿದಾಗ
ನಿಜಾ ಅ ಈಡಿಯಟ್ಸ್‌ ಗಳಿಂದ ದೊಡ್ಡ ಗಂಡಾಂತರವೇ ಬಂದಿತ್ತು, ಹೇಗೋ ನಮ್ಮ ಇನ್ಸ್ ಪೆಕ್ಟರ್ ಇದ್ದಿದ್ದಕ್ಕೆ ಸುಖಾಂತ್ಯವಾಯಿತು ಎನ್ನುತ್ತಾರೆ ಕೋದಂಡರಾಂ

ಮಾರನೇ ದಿನ ಬೆಳಿಗ್ಗೆ ಕೋದಂಡರಾಂ ರವರು ಎದ್ದು ಕಾಫಿ ಕುಡಿಯುತ್ತಾ ಪೇಪರ್ ಓದುತ್ತಿರುವಾಗ
ಅಭಿಜಿತ್ ತಂದೆ ಫೋನ್ ಮಾಡಿ, ತಕ್ಷಣ ಆಸ್ಪತ್ರೆಗೆ ಬನ್ನಿ ಎಂದು ಕರೆಯುತ್ತಾರೆ.
ಅಯ್ಯೋ ದೇವರೇ ಯಾರಿಗೇನಾಯ್ತೆಂದು ಕೋದಂಡರಾಂ ಪ್ರಶ್ನಿಸಲು
ಯಾರಿಗೆ ಏನೂ ತೊಂದರೊಯಾಗಿಲ್ಲ, ನೀವು ಆಸ್ಪತ್ರೆಗೆ ಬಂದರೆ ವಿಷಯ ತಿಳಿಸುತ್ತೇನೆಂದು ಅಭಿಜಿತ್ ತಂದೆ ಹೇಳಿದಾಗ.
ನಾನೀಗಲೇ ಹೊರಟು ಬರುತ್ತೇನೆಂದು ಹೇಳಿ ಫೋನ್ ಆಫ್ ಮಾಡಿ ತಕ್ಷಣ ಸ್ನಾನ ಮಾಡಿ, ತನ್ನ ಪತ್ನಿಗೆ ತಿಂಡಿ ಕೊಡಲು ಹೇಳಿದಾಗ
ಅಯ್ಯೋ ಇದೇನ್ರೀ? ಇಲ್ಲಿವರೆಗೂ ಪೇಪರ್ ಓದುತ್ತಾ ಕುಳಿತಿದ್ದವರು ಸಡನ್ನಾಗಿ ಎಲ್ಲೋ ಹೊರಟಂತಿದೆ, ಸ್ಕೂಲಿಗೆ ರಜೆ ಹಾಕಿದ್ದೇನೆಂದು ಹೇಳಿದ್ರೀ, ನಿಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವೆಂದು ಅವರ ಪತ್ನಿಯು ಹೇಳಿದ್ದಕ್ಕೆ
ಸ್ಕೂಲಿಗೆ ರಜೆ ಹಾಕಿದ್ದೇನೆ. ಆದೇಕೋ ಭಾವಿ ಬೀಗರು ಫೋನ್ ಮಾಡಿ ಆಸ್ಪತ್ರೆಗೆ ‌ಬನ್ನಿ ಎಂದರು ಅದಕ್ಕೆ ಹೊರಟಿದ್ದೇನೆ ಎಂದು ಕೋದಂಡರಾಂ ಹೇಳಲು
ಅಯ್ಯೋ ಯಾರಿಗೇನಾಯ್ತಂತೆ? ಅವರ ಮಗ ಹುಷಾರಾಗಿದ್ದಾರಂತಾ? ಎಂದು ಅವರ ಪತ್ನಿ ಪ್ರಶ್ನಿಸಿದಾಗ
ಎಲ್ಲರೂ ಆರೋಗ್ಯವಾಗಿದ್ದಾರೆ, ಗಾಬರಿ ಏನೂ ಇಲ್ಲವೆಂದು ಹೇಳಿದ್ರು, ಅದಕ್ಕೆ ಹೋಗಿ ಬರುತ್ತೇನೆಂದು ಹೇಳುತ್ತಾರೆ
ಬೇಗ ಹೋಗಿ ಬನ್ನಿ ಎಂದು ಅವರ ಪತ್ನಿ ಹೇಳಿ ಅಡಿಗೆ ಮನೆಗೆ ಹೋಗುತ್ತಾರೆ.
ಬೇಗ ಬರುತ್ತೇನೆ ಎನ್ನುತ್ತಾ, ಬಾಗಿಲ ಬಳಿ ಬಂದಾಗ
ಆಶಾ ಅಪ್ಪನು ಹೊರಗಡೆ ಹೋಗಲು ನಿಂತಿರುವುದನ್ನು ನೋಡಿ ಇವತ್ತು ಸ್ಕೂಲಿಗೆ ರಜೆ ಎಂದು ಹೇಳಿದ್ದೆ ಎಲ್ಲಿಗೆ ಹೋಗುತ್ತಿದ್ದೀಯಪ್ಪಾ? ಕಾರಿರುವಾಗ ಒಬ್ಬನೇ ಎಲ್ಲೂ ಹೋಗಬೇಡವೆಂದು ಹೇಳಿರಲಿಲ್ಲವಾ? ನೀನು ಎಲ್ಲಿಗೆ ಹೊರಟಿದ್ದೀಯಾ ಹೇಳು ನಾನು ಡ್ರಾಪ್ ಮಾಡುತ್ತೇನೆ ಎಂದಾಗ
ಕೋದಂಡರಾಂರವರು ಅಭಿಜಿತ್ ತಂದೆ ಹೇಳಿದ ವಿಷಯವನ್ನು ಆಶಾಳಿಗೆ ತಿಳಿಸಿದಾಗ
ಆಸ್ಪತ್ರೆವರೆಗೆ ನಿನ್ನನ್ನು ಡ್ರಾಪ್ ಮಾಡುತ್ತೇನೆ. ನಂತರ ವಾಪಸ್ ಬರುವಾಗ ಕರೆದುಕೊಂಡು ಬರುತ್ತೇನೆಂದು ಆಶಾ ಹೇಳಲು
ನನಗೂ ಒಬ್ಬನೇ ಹೋಗಬೇಕಲ್ಲಾ ಎಂದುಕೊಂಡಿದ್ದೆ. ನೀನು ಬಂದರೆ ಅನುಕೂಲವಾಗುತ್ತದೆಂದು ಹೇಳಿ ಕೋದಂಡರಾಂ ಕಾರಿನಲ್ಲಿ ಕುಳಿತ ನಂತರ
ಆಶಾ‌ ಡ್ರೈವ್ ಮಾಡಿಕೊಂಡು ಆಸ್ಪತ್ರೆಯ ಬಳಿ ಬಂದು, ಕಾರಿನ ಬಾಗಿಲನ್ನು ತೆಗೆದು, ಅಪ್ಪಾ ಹೋಗಿಬಾರಪ್ಪಾ, ನೀನು ಬರುವವರೆಗೂ ಇಲ್ಲೇ ಇರುತ್ತೇನೆಂದು ಆಶ ಹೇಳಿದಾಗ
ಕೋದಂಡರಾಂ ರವರು ಒಳಗೆ ಹೋಗಿ ಅಭಿಜಿತ್ ತಂದೆಗೆ ಫೋನ್ ಮಾಡಿದ ತಕ್ಷಣ
ಅಭಿಜಿತ್ ತಂದೆಯವರು ಬಂದು ತಮ್ಮ ಮಗನನ್ವು ಅಡ್ಮಿಟ್ ಮಾಡಿದ್ದ ವಾರ್ಡಿಗೆ ಕೋದಂಡರಾಂ ರವರನ್ನು ಕರೆದುಕೊಂಡು ಹೋದಾಗ
ಅಭಿಜಿತ್ ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಿದ‌ ಕೋದಂಡರಾಂ ರವರಿಗೆ ಗಾಬರಿಯಾಗಿ, ನಿಮ್ಮ ಮಗನಿಗೆ ಪುನಃ ಏನಾಯ್ತೂ ಸಾರ್ ಎಂದು ಕೇಳಲು
ಸಾರ್‌ ನಿನ್ನೆ ಬೆಳಿಗ್ಗೆ ಊರಿಗೆ ಬಂದವನು ಚೆನ್ನಾಗಿಯೇ ಇದ್ದ, ರಾತ್ರಿ ಕೂಡಾ ಊಟ ಮಾಡಿ ಮಲಗಿದ ನಂತರ ಒಂದು ಗಂಟೆಯ ವೇಳೆಯಲ್ಲಿ ಜೋರಾಗಿ ನಡುಗಲು ಪ್ರಾರಂಭಿಸಿದ, ನಮಗೆ ತುಂಬಾ ಭಯವಾಗಿ, ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದಾಗ
ಡಾಕ್ಚರ್ ರವರು ನಮ್ಮನ್ನು ಬೈದರೆಂದು ಅಭಿಜಿತ್ ತಂದೆ ಹೇಳಲು
ಕಾರಣವೇನೆಂದು ಕೋದಂಡರಾಂರವರು ಪ್ರಶ್ನಿಸಲು
ನನ್ಮ ಮಗ ಬಂದ ತಕ್ಷಣ ಆಸ್ಪತ್ರೆಗೆ‌ ಬರಬೇಕಿತ್ತಂತೆ, ಇಲ್ಲಿ ಎರಡು ದಿನ ಅಬ್ಸರ್ವರ್ ನಲ್ಲಿಟ್ಚು ಟೆಸ್ಟ್ ಮಾಡಬೇಕಿತ್ತಂತೆ, ನನ್ನ ಮಗನೂ ಮರೆತುಬಿಟ್ಟು ನಾಳೆ ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಮಲಗಿದ. ಮಗ ಆರಾಮಾಗಿದ್ದಾನೆಂದು ನಾನೂ ಕೂಡಾ ಮಲಗಿದೆ. ಆದರೆ ಒಂದು ಗಂಟೆ ಸಮಯದಲ್ಲಿ ಗಡಗಡನೆ ನಡುಗಲು ಪ್ರಾರಂಭಿಸಿದ, ನಮಗೆ ಭಯವಾಗಿ ತಕ್ಷಣ ಆಸ್ಪತ್ರೆಗೆ ಸೇರಿಸಿದೆ. ಬೆಳಿಗ್ಗೆಯೇ ಆಸ್ಪತ್ರೆಗೆ ಬರಬೇಕಿತ್ತೆಂದು ಡಾಕ್ಟರ್ ಹೇಳಿದ್ರು, ನಾಳೆ ಬರೋಣವೆಂದು ಸುಮ್ಮನಿದ್ದೆವೆಂದು ಹೇಳಿದಾಗ
ನೀವು ಡಿಫೆನ್ಸ್ ಆಸ್ಪತ್ರೆಯ ರಿಪೋರ್ಟ್ ಸರಿಯಾಗಿ ನೋಡಬಾರದಿತ್ತಾ ಎಂದರು, ಈಗೇನೂ ಪರವಾಗಿಲ್ಲವೆಂದು ಹೇಳಿದ್ದಾರೆ ಎಂದು ಅಭಿಜಿತ್ ತಂದೆ ಹೇಳಿ, ನೀವು ಹೇಗೆ ಬಂದ್ರೀ ಎಂದು ಪ್ರಶ್ನಿಸಿದಾಗ
ನನ್ನ ಮಗಳು ಕರೆದುಕೊಂಡು ಬಂದಳೆಂದು ಕೋದಂಡರಾಂ ಹೇಳುತ್ತಾರೆ.
ಮಗಳನ್ನೂ ಇಲ್ಲಿಗೆ ಕರೆದುಕೊಂಡು ಬರಬಹುದಿತ್ತಲ್ಲವಾ ಎಂದು ಅಭಿಜಿತ್ ತಂದೆ ಕೇಳಲು
ನೀನೇ ಹೋಗಿ ಬಾಪ್ಪಾ ಎಂದಳು ಅದಕ್ಕೆ ಬಂದೆ ಎನ್ನುತ್ತಾರೆ
ಹೊಸ ಪರಿಚಯ ಅದಕ್ಕೆ ಹಾಗೆ ಹೇಳಿರಬೇಕು, ಈಗಲೂ ನಿಮ್ಮ ಮಗಳನ್ನು ಕರೆಯಿರಿ ಎಂದು ಅಭಿಜಿತ್ ತಂದೆಯ ಮಾತಿಗೆ
ಒಂದು ನಿಮಿಷನೆಂದು ಹೇಳಿ ಕೋದಂಡರಾಂ ರವರು ಮಗಳಿಗೆ ಫೋನ್ ಮಾಡಿ ಬರಲು ಹೇಳುತ್ತಾರೆ
ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ ಎಂಬಂತೆ, ಆಶಾಳೂ ಕೂಡಾ ಅಭಿಜಿತ್ ನ ನೋಡಲು ಕಾತರದಿಂದಿದ್ದು ಹೋಗಲಾಗದೆ ಸುಮ್ಮನಿರುತ್ತಾಳೆ.‌ ಅಕಸ್ಮಾತ್ ಅಪ್ಪ ಕರೆದರೆ ಹೋಗಬೇಕೆಂದಿರುತ್ತಾಳೆ.ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ಅಪ್ಪಾ ನಾನು ಬರಬೇಕಾ ಎಂದು ಕೇಳಿದಾಗ
ಹೌದಮ್ಮಾ ಇಲ್ಲಿ ಆಂಟಿ ಇದ್ದಾರೆಂದು, ವಾರ್ಡ್ ನಂಬರ್ ಹೇಳಿದಾಗ
ಆಶಾ ಅಭಿಜಿತ್ ನನ್ನು ಮಾತನಾಡಿಸಬಹುದೆಂದು ವಾರ್ಡಿನೊಳಗೆ ಬರುವ ವೇಳೆಗೆ
ಕೆಲವು ಟಿವಿ ಛಾನಲ್‌ ರವರು ಅಭಿಜಿತ್ ನ ಸಂದರ್ಶನ ಮಾಡಲು ವಾರ್ಡಿಗೆ‌ ಬಂದಿರುತ್ತಾರೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ

ಯಾವತ್ತೂ ಯಾವ ವಿಷಯವನ್ನೂ ಹಗುರವಾಗಿ ತೆಗೆದುಕೊಳ್ಳಬಾರದು ಜೊತೆಗೆ ವೈದ್ಯರ ಸಲಹೆಯಂತೆ ನಡೆದರೆ ಅಪಾಯಕ್ಕೆ ಸಿಲುಕುವ ಸಂಭವ ಕಡಿಮೆ ಇರುತ್ತದೆ. ಬೇರೆಯವರು ಆಸ್ಪತ್ರೆಗೆ ಹೋಗಲು ಯಾರಾದರೂ ಕರೆದಾಗ ಅವರ ಜೊತೆಗೆ ಹೋದರೆ ಅವರಿಗೆ ಮಾನಸಿಕವಾಗಿ ಧೈರ್ಯ ಬಂದಿರುತ್ತದೆ. ಈಗಿನ ಕಾಲದಲ್ಲಿ ಮನೆಗಳಲ್ಲಿ ಹೆಚ್ಚಿನ ಸದಸ್ಯರು ಇರುವುದಿಲ್ಲ. ತುರ್ತು ಸನ್ನಿವೇಶದಲ್ಲಿ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಆಸ್ಪತ್ರೆಗೆ ಹೋಗಲು ವಾಹನ ಒದಗಿಸುವುದನ್ನು ಒಳಗೊಂಡು ಎಲ್ಲಾ ರೀತಿಯ ಸಹಾಯ ಮಾಡಿದರೆ ಹೋಗುವ ಜೀವಗಳನ್ನು ಉಳಿಸಿದಂತಾಗುತ್ತದೆ.

ಅಭಿಲಾಷೆ ಕಾದಂಬರಿ ಸಂಚಿಕೆ -53

ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 53 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ

  • ಹಿಂದಿನ ಸಂಚಿಕೆಯಲ್ಲಿ

ಅಭಿಜಿತ್ ನನ್ನು ನೋಡಬೇಕೆಂದು ಆಶ ಆಸ್ಪತ್ರೆಗೆ ಬಂದಾಗ
ಟಿವಿ ಮೀಡಿಯಾದವರು ಅಭಿಜಿತ್ ಸಂದರ್ಶನಕ್ಕೆ ಬಂದಿರುತ್ತಾರೆ

  • ಕಥೆಯನ್ನು ಮುಂದುವರೆಸುತ್ತಾ

ಅಭಿಜಿತ್ ಇರುವ ವಾರ್ಡಿಗೆ ಹೋಗುತ್ತಿರುವಾಗ ಟಿವಿ ಚಾನಲ್‌ ರವರುಗಳನ್ನು ಕಂಡು ಪಕ್ಕದಲ್ಲಿ ನಿಲ್ಲುತ್ತಾಳೆ.
ಅಭಿಜಿತ್ ಗೆ ಆಕ್ಸಿಜನ್ ನೀಡಿದ್ದರಿಂದ ಟಿವಿ ಚಾನಲ್‌ ರವರಿಗೆ ಅಭಿಜಿತ್ ಸಂದರ್ಶನ ಮಾಡಲಾಗದೆ ಅವರಪ್ಪನ ಬಳಿಯೇ ಕೆಲವು ವಿಚಾರಗಳನ್ನು ತಿಳಿದುಕೊಂಡು ಆಕ್ಸಿಜನ್ ಪೈಪ್ ತೆಗೆದ‌ ನಂತರ ಅವರನ್ನೇ ಸಂದರ್ಶಿಸಿ ಅವರ ಅನುಭವವನ್ನು ತಿಳಿದುಕೊಳ್ಳುತ್ತೇವೆಂದು ಹೇಳಿ ಹೋದ ನಂತರ
ಆಶ ವಾರ್ಡಿನೊಳಗೆ ಬಂದು ನಮ್ಮಪ್ಪ ಎಲ್ಲಿ ಎಂದು ಪ್ರಶ್ನಿಸುವ ವೇಳೆಗೆ ಸರಿಯಾಗಿ
ಕೋದಂಡರಾಂ ರವರು ಬಂದಾಗ
ಅಪ್ಪಾ ಎಲ್ಲಿ ಹೋಗಿದ್ದೆ ಎಂದು ಆಶ‌ ಪ್ರಶ್ನೆಗೆ
ಟಿವಿಯಯವರು ಹೋದ ಮೇಲೆ‌ ಬರೋಣವೆಂದು ಇಲ್ಲೇ ಪಕ್ಕದಲ್ಲಿ ಕುಳಿತಿದ್ದೆ ಎಂದಾಗ
ಅಭಿಜಿತ್ ತಾಯಿಯು ಮಾತನಾಡಿ, ಬಾಮ್ಮಾ ಒಳಗೆ ಎನ್ನುತ್ತಾರೆ
ಆಕ್ಸಿಜನ್ ಪೈಪ್ ಹಾಕಿದ್ದ ಅಭಿಜಿತ್ ನ ನೋಡಿದ ಆಶಾ ತನ್ನ ಮನಸ್ಸಿನಲ್ಲಿ ಮಾತನಾಡಿಸಬಹುದೆಂದು ಬಂದರೆ ಆಕ್ಸಿಜನ್ ಪೈಪ್ ಹಾಕಿದ್ದಾರೆಂದು ನಿರಾಸೆಯಾಗಿ ಎರಡು ನಿಮಿಷ ನೋಡಿದ‌ ನಂತರ ನಾನಿನ್ನು ಬರುತ್ತೇನೆಂದು ಆಶಾ‌ ಹೇಳಲು
ನಾನೂ ಜೊತೆಯಲ್ಲಿ ಬರುತ್ತೇನಮ್ಮಾ ಇಬ್ಬರೂ ಹೋಗೋಣವೆಂದು ಕೋದಂಡರಾಂರವರು ಹೇಳಿದಾಗ
ಈಗಲೇ ಹೊರಡಬೇಕಾ ಮೇಷ್ಟ್ರೇ ಎಂದು ಅಭಿಜಿತ್ ತಂದೆ ಕೇಳಲು
ಹೌದು ಸಾರ್ ಮಕ್ಕಳ ವಾರ್ಷಿಕ ಪರೀಕ್ಷೆ ಶುರುವಾಗುತ್ತದೆ. ಅದಕ್ಕೆ ತಯಾರಿ ಮಾಡಿಕೊಳ್ಳಬೇಕೆಂದು ಕೋದಂಡರಾಂ ಹೇಳಿದಾಗ
ನಿಮ್ಮ ಕೆಲಸಕ್ಕೆ ತೊಂದರೆ ಮಾಡುವುದಿಲ್ಲ, ಸಾಧ್ಯವಾದರೆ ಸಂಜೆ ಬನ್ನಿ ಎಂದು ಅಭಿಜಿತ್ ತಂದೆಯ ಮಾತಿಗೆ ಪ್ರಯತ್ನಿಸುತ್ತೇನೆಂದು ಹೇಳಿ ಅಪ್ಪ ಮಗಳು ಇಬ್ಬರೂ ಹೋಗುತ್ತಾರೆ.

ಆಗಲೇ ಟಿವಿಗಳಲ್ಲಿ ಅಭಿಜಿತ್ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದು, ಅಭಿಜಿತ್ ಇದ್ದ ಆಸ್ಪತ್ರೆಯ ಹೆಸರು ವಿಳಾಸ‌ ಹೇಳಿ, ಅಭಿಜಿತ್‌ಗೆ ಏನಾಯಿತೆಂದು ಸಂಪೂರ್ಣ ವಾಗಿ ಮಾಹಿತಿಯನ್ನು ನೀಡುತ್ತಾ, ಇನ್ನೂ ಮೂರು ದಿನ ವೈದ್ಯರ ನಿಗಾದಲ್ಲಿ ಅಭಿಜಿತ್ ರವರು ಇರಬೇಕೆಂದು ಜೀವಕ್ಕೇನೂ ತೊಂದರೆ ಇಲ್ಲವೆಂದು ದೇಶದ ಹೆಮ್ಮೆಯ ಪುತ್ರ ಆಸ್ಪತ್ರೆಯಿಂದ ಬೇಗ ಬಿಡುಗಡೆಯಾಗಲೆಂದು ಹಾರೈಸುತ್ತಿರುತ್ತಾರೆ.

ಆ ದಿನ ರಾತ್ರಿ ಏಳುಗಂಟೆಗೆ ಅಭಿಜಿತ್ ತಾಯಿ ನಾನೀಗ ಮನೆಗೆ ಹೊರಟು ನಾಳೆ ಬರುತ್ತೇನೆ ಮಗನ ಬಳಿ ಇದ್ದು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿದಾಗ
ರಾತ್ರಿ ಒಂಬತ್ತು ಗಂಟೆಗೆ ಆಕ್ಸಿಜನ್ ಪೈಪ್ ತೆಗೆಯುತ್ತಾರಂತೆ, ಪೈಪ್ ತೆಗೆದ‌ ತಕ್ಷಣ ಫೋನ್ ಮಾಡುತ್ತೇನೆಂದು ಹೇಳಿ ಈಗ ಮಗ ಮಲಗಿದ್ದಾನೆಂದು ಪತ್ನಿಯನ್ನು ಬೀಳ್ಕೊಡಲು ಆಸ್ಪತ್ರೆಯ ಬಾಗಿಲನವರೆಗೆ ಬಂದು, ಪತ್ನಿಗೆ ಆಟೋ ಗೊತ್ತುಮಾಡಿ, ನಂತರ ಅಲ್ಲೇ ಇದ್ದ ಮೆಡಿಕಲ್‌ ಶಾಪಿನಲ್ಲಿ, ಔಷದಿ ತೆಗೆದುಕೊಂಡು ವಾಪಸ್ ವಾರ್ಡಿಗೆ ಬಂದಾಗ
ವಾರ್ಡಿನ ಮುಂದೆ ಹತ್ತಾರು ಜನ ನಿಂತಿರುವುದನ್ನು ನೋಡಿ ತನ್ನ ಮಗನಿಗೆ ಏನಾಯ್ತೋ ಎಂದು ಭಯವಾಗಿ ಮೈ ಕೈ ನಡುಗಲು ಶುರುವಾಗುತ್ತದೆ. ಅಯ್ಯೋ ನಾನು ಮಗನನ್ನು ಒಬ್ಬನನ್ನೇ ಬಿಟ್ಟು ಹೊರಗೆ ಹೋಗಬಾರದಿತ್ತೆಂದು ಪಶ್ಚಾತ್ತಾಪ ಪಡುತ್ತಾ, ವಾರ್ಡಿನ ಹತ್ತಿರ ಬಂದು ಅಲ್ಲಿದ್ದವರನ್ನು ಏನಾಯಿತೆಂದು ದುಃಖದಿಂದ ಕೇಳಲು
ನಿಮ್ಮ ಮಗನಿಗೆ ಏನೂ ಆಗಿಲ್ಲ, ಯಾವನೋ ಒಬ್ಬ ನಿಮ್ಮ ಮಗನಿಗೆ ಹಾಕಿದ್ದ ಆಕ್ಸಿಜನ್ ಪೈಪ್ ಕಿತ್ತುಹಾಕಲು ಬಂದಿದ್ದನಂತೆ ಅವನನ್ನು ಹಿಡಿದು ಪೋಲೀಸ್ ರವರಿಗೆ ಒಪ್ಪಿಸಿದ್ದಾರಂತೆ ಎಂದಾಗ
ಅಭಿಜಿತ್‌ ತಂದೆಯು ನಿರಾಳರಾಗಿ ಮಗನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ.
ಆ ವೇಳೆಗೆ ಡಾಕ್ಟರ್ ಬಂದು ಅಭಿಜಿತ್ ನ ಪರೀಕ್ಷಿಸಿ, ಇನ್ನು ಆಕ್ಸಿಜನ್ ಅವಶ್ಯಕತೆ ಇಲ್ಲ, ನ್ಯಾಚುರಲ್ ಆಗಿ ಉಸಿರಾಡುತ್ತಿದ್ದಾರೆ, ಇನ್ನು ಯಾವ ರೀತಿಯೂ ಭಯವಿಲ್ಲವೆಂದು ಹೇಳಿದಾಗ
ಅಭಿಜಿತ್ ತಂದೆ ನಿಟ್ಟುಸಿರು ಬಿಡುತ್ತಾರೆ
ನಿಮ್ಮ ಮಗನ ದ್ವೇಷಿಗಳು ಯಾರಿದ್ದಾರೆಂದು ಡಾಕ್ಟರ್ ಪ್ರಶ್ನಿಸಲು
ನನ್ನ ಮಗ ಸೈನ್ಯದಲ್ಲಿದ್ದಾನೆ, ಅವನು ಯಾರಲ್ಲೂ ದ್ವೇಷ‌ ಕಟ್ಟಿಕೊಂಡಿಲ್ಲ, ಬೇರೆ ಯಾರೋ ಗೊತ್ತಿಲ್ಲವೆಂದು ಅಭಿಜಿತ್ ತಂದೆ ಹೇಳಿದಾಗ. ಜೋಪಾನವಾಗಿ ನೋಡಿಕೊಳ್ಳಿ ನಾಳೆ ರಾತ್ರಿ ಡಿಸ್ ಚಾರ್ಜ್ ಮಾಡುತ್ತೇವೆಂದು ಹೇಳಿ ಹೋಗುತ್ತಾರೆ
ಆ ವೇಳೆಗೆ ಅಲ್ಲಿ ನೆರೆದಿದ್ದವರು ಅವರವರ ವಾರ್ಡುಗಳಿಗೆ ಹೋಗುತ್ತಾರೆ.
ನನ್ನ ಮಗನ ಮೇಲೆ ಯಾರು ದ್ವೇಷ ಕಾರುತ್ತಿದ್ದಾರೆ? ನನ್ನ ಮಗ ಏನು ಮಾಡಿದ್ದಾನೆ ಎಂದು ಚಿಂತಿಸುತ್ತಿರುವಾಗ
ವಾರ್ಡಿನೊಳಗೆ ಒಬ್ಬ ಯುವಕ ಬಂದು ನಮಸ್ಕಾರ ಅಂಕಲ್ ಎಂದಾಗ
ಅಭಿಜಿತ್ ತಂದೆ ಪ್ರತಿ ನಮಸ್ಕಾರವನ್ನು ಹೇಳಿ, ಯಾರು ನೀವು ಎಂದು ಕೇಳಲು
ನಾನು ನಿಮ್ಮ ಮಗ ಒಂದೇ ಕಡೆ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮಗನಿಗೆ ತೊಂದರೆಯಾದಾಗ‌ ನಾನು ಊರಿಗೆ ಬಂದಿದ್ದೆ.‌ನ್ಯೂಸ್ ನೋಡಿ ಆಸ್ಪತ್ರೆಗೆ ಬಂದೆ, ಆ ವೇಳೆಗೆ ಒಬ್ಬ ವ್ಯಕ್ತಿಯು ನಿಮ್ಮ ಮಗನಿಗೆ ಹಾಕಿದ್ದ ಆಕ್ಸಿಜನ್ ಪೈಪ್ ತೆಗೆದು ಬಿಟ್ಟಿದ್ದ, ನಾನು ಬಂದ ತಕ್ಷಣ ಓಡಿ ಹೋದ. ತಕ್ಷಣ ಪುನಃ ಪೈಪ್ ಅಳವಡಿಸಿ ಕಳ್ಳ ಕಳ್ಳ ಎಂದು ಜೋರಾಗಿ ಕೂಗುತ್ತಾ ಹಿಡಿಯಲು ಹೋದಾಗ, ಕೈಗೆ‌ ಸಿಗಲೇ ಇಲ್ಲ.
ಅಕ್ಕಪಕ್ಕದವರು ಬಂದು ಅವನನ್ನು ಹಿಡಿದು ಪೋಲೀಸ್ ‌ರವರಿಗೆ ಕೊಟ್ಟಿದ್ದಾರೆ ಎಂದಾಗ.
ಯಾರವನು ಅಂಕಲ್ ಅಭಿಜಿತ್ ನನ್ನು ಕೊಲ್ಲಲು ಬಂದಿದ್ದ ಅವನಿಗೆ ಅಭಿಜಿತ್ ಮೇಲೇಕೆ ದ್ವೇಷವೆಂದು ಆ ಯುವಕ ಕೇಳಲು
ಅಭಿಜಿತ್ ತಂದೆಯು ಮಾತನಾಡಿ ನನಗೆ ಗೊತ್ತಿಲ್ಲಪ್ಪಾ, ಅವನ ಮುಖ ನೋಡಿದರೆ ಯಾರೆಂದು ಹೇಳಬಹುದು ಎನ್ನುತ್ತಾ, ನನ್ನ ಮಗ ನಿಮಗೆ ಹೇಗೆ ಪರಿಚಯ ವೆಂದು ಅಭಿಜಿತ್ ತಂದೆ ಕೇಳಿದಾಗ
ಅಂಕಲ್ ನಾನು ಅಭಿಜಿತ್ ಒಟ್ಚಿಗೆ ಒಂದೇ ಕ್ಯಾಂಪಲ್ಲಿ ಇರುತ್ತೇವೆಂದು ಆ ಯುವಕ ಉತ್ತರಿಸುತ್ತಾನೆ.
ನಿಮ್ಮ ಹೆಸರೇನೆಂದು ಅಭಿಜಿತ್ ತಂದೆ ಪ್ರಶ್ನಿಸಿದಾಗ
ನನ್ನ ಹೆಸರು ರಘುನಂದನ್ ಎನ್ನುತ್ತಾನೆ.
ಇಬ್ಬರೂ ಉಭಯ ಕುಶಲೋಪರಿ ಮಾತನಾಡುತ್ತಿರುವಾಗ
ಅಭಿಜಿತ್ ಗೆ ಎಚ್ಚರವಾಗಿ, ಏಳಲು ಹೋದಾಗ
ಏಯ್ ಏಳಬೇಡ ಮಲಗಿಕೋ ಎಂದು ರಘುನಂದನ್ ಹೇಳಲು
ಅಭಿಜಿತ್ ಕೈ ಸನ್ನೆಯಲ್ಲೇ ಓಕೆ ಎನ್ನುತ್ತಾನೆ.
ರಘುನಂದನ್ ಏನು ಮಾತನಾಡಿದರೂ ಅಭಿಜಿತ್ ಕೈ ಸನ್ನೆಯಿಂದ ಉತ್ತರಿಸುತ್ತಿದ್ದು, ಹೀಗೆ ಮಾತನಾಡುತ್ತಿರುವಾಗ
ಡಾಕ್ಟರ್ ಬಂದು ಪುನಃ ಅಭಿಜಿತ್ ನ ಪರೀಕ್ಷಿಸಿ ಇನ್ನೇನು ಆಕ್ಸಿಜನ್ ಅವಶ್ಯಕತೆ ಇಲ್ಲವೆಂದು ಪೈಪ್ ತೆಗೆದಾಗ
ಥ್ಯಾಂಕ್ಸ್ ಡಾಕ್ಟರ್ ಈಗ ನಿರಾಳವಾಯಿತೆಂದು ಅಭಿಜಿತ್ ಹೇಳಲು.
ಐ ವಿಶ್ ಯು ಸ್ಪೀಡೀ ರೆಕವರಿ ಎಂದು ಡಾಕ್ಟರ್ ಹೇಳಿ ಹೋದನಂತರ
ಅಭಿಜಿತ್ ಮಾತನಾಡಿ, ನಿನಗೊ ಹೇಗೆ ವಿಷಯ ತಿಳಿಯಿತೆಂದು ಅವನ ಸ್ನೇಹಿತನನ್ನು ಕೇಳಲು
ನಾನು ಹೆಡ್ ಕ್ವಾರ್ಟರ್ಸ್ ಗೆ ಫೋನ್ ಮಾಡಿದಾಗ ವಿಷಯ ತಿಳಿಯಿತು, ಸಂಜೆ ಟಿವಿಯಲ್ಲಿ ನಿನ್ಮ ಸುದ್ದಿ ಬಿತ್ತರವಾಯ್ತು ತಕ್ಷಣ ಆಸ್ಪತ್ರೆಗೆ ಬಂದೆ, ಆ ವೇಳಗೆ ಅವನು ಯಾವೊನೋ ನಿನಗೆ ಹಾಕಿದ್ದ ಆಕ್ಸಿಜನ್ ಪೈಪ್ ತೆಗೆಯಲು ಬಂದಿದ್ದ ಅವನನ್ನು ಹಿಡಿದು ಪೋಲೀಸ್ ಗೆ ಒಪ್ಪಿಸಿ ಬಂದೆ ಎಂದಾಗ
ತುಂಬಾ ಥ್ಯಾಂಕ್ಸ್ ‌ರಘುನಂದನ್ ಎನ್ನುತ್ತಾನೆ ಅಭಿಜಿತ್
ನೀನು ನನ್ನ ಜೀವವನ್ನೇ ಉಳಿಸಿದ್ದೀಯಾ ಅದು ಮರೆತೆಯಾ ಎಂದು ರಘುನಂದನ್ ಪ್ರಶ್ನಿಸಲು
ಅಯ್ಯೋ ಏನಾಗಿತ್ತಪ್ಪಾ ಎಂದು ಅಭಿಜಿತ್ ‌ತಂದೆ ಪ್ರಶ್ನಿಸುತ್ತಾರೆ
ಅಂಕಲ್ ಆ ದಿನ ಅಭಿಜಿತ್ ಇಲ್ಲದೇ ಇದ್ದಿದ್ದರೆ ನಾನು ಈ ದಿನ ಬದುಕಿರುತ್ತಿರಲಿಲ್ಲವೆಂದು ಹೇಳಿದಾಗ
ಅಂತಹ ಅಪಾಯ ಏನು ಸಂಭವಿಸಿತ್ತೆಂದು ಅಭಿಜಿತ್ ತಂದೆ ಕೇಳಲು
ಅಂಕಲ್ ನಾನು ಅಭಿಜಿತ್ ಇಬ್ಬರೂ ಗಡಿ ಕಾಯುತ್ತಿರುವಾಗ ನನಗೆ ಕಾಲು ಜಾರಿ ಇನ್ನೇನು ಕೆಳಗೆ ಬೀಳಬೇಕು ಎನ್ನುವಷ್ಟರಲ್ಲಿ ನನ್ನ ಕೈ ಹಿಡಿದು, ನನ್ನ ಪ್ರಾಣ ಉಳಿಸಿದ ಆ ದಿನ ನಾನು ಉಳಿದುಕೊಂಡೆ ಎನ್ನಲು
ಒಬ್ಬರಿಗೊಬ್ಬರು ಸಹಾಯ ಮಾಡಿದರೆ ನಮ್ಮ ಜನ್ಮ ಸಾರ್ಥಕವಾಗುತ್ತದೆಂದು ಅಭಿಜಿತ್ ತಂದೆ ಹೇಳಿದಾಗ.
ನಮ್ಮ ತಂದೆಯೂ ಈ ಮಾತನ್ನೇ ಹೇಳುತ್ತಾರೆ ಅಂಕಲ್ ಎಂಬ ರಘುನಂದನ್ ಮಾತಿಗೆ
ಅಂಕಲ್ ನಾನಿನ್ನು ಮನೆಗೆ ಹೊರಟು ನಾಳೆ ಬೆಳಿಗ್ಗೆ ಪುನಃ ಬರುತ್ತೇನೆಂದು ಹೇಳಿ ಹೋದ ತಕ್ಷಣ
ಕೋದಂಡರಾಮ್ ರವರು ಗಾಬರಿಯಿಂದ ವಾರ್ಡಿಗೆ ಬಂದು ನಿಮ್ಮ ಮಗನಿಗೆ ಏನೂ ತೊಂದರೆಯಾಗಲಿಲ್ಲ ತಾನೇ ಎಂದು ಪ್ರಶ್ನಿಸಲು
ನಿಮ್ಮಂತ ಹಿರಿಯರ ಆಶೀರ್ವಾದದಿಂದ ಹುಷಾರಾಗಿದ್ದಾನೆ ಎನ್ನುತ್ತಾರೆ ಅಭಿಜಿತ್ ತಂದೆ.
ಅಭಿಜಿತ್ ಮಾತನಾಡಿ ನಾನು ಈಗ ಓಕೆ ಆರಾಮ್ ಎಂದಾಗ
ಟಿವಿ ನೋಡುತ್ತಿರುವಾಗ, ನಿಮ್ಮ ಮಗನಿಗೆ ಹಾಕಿದ್ದ ಆಕ್ಸಿಜನ್ ಪೈಪನ್ನು ಯಾರೋ ತೆಗೆದುಹಾಕಲು ಯತ್ನಿಸುತ್ತಿರುವಾಗ ಬೇರೆ ಒಬ್ಬ ಯುವಕ ಬಂದು ಕಾಪಾಡಿದನೆಂದು ನೋಡಿ ಓಡಿಬಂದೆ ಎನ್ನುತ್ತಾರೆ
ನೀವೂ ಬಂದ್ರೀ ಆ ಹುಡುಗ ಇದೇ ತಾನೇ ಹೋದ, ನೀವು ನೋಡಿಲ್ಲವಾ ಎಂದು ಅಭಿಜಿತ್ ತಂದೆ ಪ್ರಶ್ನಿಸಲು
ನಾನು ಅಬ್ಸರ್ವ್ ಮಾಡಲಿಲ್ಲವೆನ್ನುತ್ತಾರೆ ಕೋದಂಡರಾಂ
ಹೋಗಲೀ ಹುಷಾರಾದರಲ್ಲಾ ಅಷ್ಟು ಸಾಕೆಂದು ಹೇಳಿ ಐದು ನಿಮಿಷ ಕುಳಿತು ನಂತರ ನಾನಿನ್ನು ಬರುತ್ತೇನೆಂದು ಕೋದಂಡರಾಮ್ ರವರು ಮನೆಗೆ ಬರುತ್ತಾರೆ.

ಮುಂದುವರೆಯುತ್ತದೆ

  • ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ

ಜೀವನದಲ್ಲಿ ಎಷ್ಚು ಹುಷಾರಾಗಿದ್ದರೂ ಸಾಲದು, ಯಾವ ಸಮಯದಲ್ಲಿ ಏನಾಗುತ್ತದೋ ತಿಳಿಯುವುದೇ ಇಲ್ಲ. ಈಗಂತೂ ಭರವಸೆಯಿಲ್ಲದ ಜೀವನದಂತಾಗಿದೆ. ಜನಗಳು ಎಷ್ಟೇ ಹುಷಾರಾಗಿದ್ದರೂ ಬೇರೆಯವರ ಉದಾಸೀನತೆ ದರ್ಪ ಅಹಂಕಾರದಿಂದ ಇನ್ಮೊಬ್ಬರ ಜೀವ ಹೋಗುತ್ತದೆ. ಹೀಗಿರುವಾಗ ಇದರ ಜೊತೆಗೆ ಸ್ವಂತ ಉದಾಸೀನತೆ ಥಳಕು ಹಾಕಿಕೊಂಡರೆ ಮುಗಿದೇ ಹೋಯ್ತು. ಎಲ್ಲರಿಗೂ ಬೇಗ ಮನೆಗೆ ಹೋಗಬೇಕೆಂಬ ತವಕ. ಅದಕ್ಕೆ ಅಡ್ಡಾದಿಡ್ಡಿ ವಾಹನ‌ ಚಲಾಯಿಸಿಕೊಂಡು ವಿಪರೀತ ವೇಗದೊಂದಿಗೆ ಹೋಗಿ ಪ್ರಾಣವನ್ನು ತಾವು ಕಳೆದುಕೊಳ್ಳುನಪದಲ್ಲದೆ ಬೇರೆಯವರ ಪ್ರಾಣಕ್ಕೂ ಕುತ್ತು ತರುತ್ತಾರೆ. ಇವರಿಗೆಲ್ಲಾ ಯಾವಾಗ ಬುದ್ದಿ ಬರುತ್ತದೋ‌ ದೇವರಿಗೆ ಗೊತ್ತು. ಮನೆಯಲ್ಲಿ ತಮಗೂ ತಂದೆ ತಾಯಿ ಹೆಂಡತಿ ಮಕ್ಕಳು ಕಾಯುತ್ತಿರುತ್ತಾರೆ ನಿಧಾನವಾಗಿ _ಸಾವಕಾಶವಾಗಿ ಹೋಗೋಣ ಎನ್ನುವ ಮಾತೇ ಇಲ್ಲ. ಅಚಾತುರ್ಯದಿಂದ ಅವಸರದಿಂದ ಜೀವಕ್ಕೆ ಅಪಾಯ ಮಾಡಿಕೊಂಡರೆ ದುಃಖಿಸುವುದು ತೊಂದರೆ ಕಷ್ಟ ಅನುಭವಿಸುವುದು ಅವರ ಮನೆಯವರೇ ಎಂದು ತಿಳಿಯುವುದೇ ಇಲ್ಲ ಅಲ್ಲವೇ?