ಆತ್ಮೀಯ ಓದುಗರಿಗೆ ವಂದನೆಯನ್ನು ತಿಳಿಸುತ್ತಾ ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 40 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.
ಹಿಂದಿನ ಸಂಚಿಕೆಯಲ್ಲಿ
ಕಿಡ್ನಾಪರ್ ನ ಕಾಲಿಗೆ ಶೂಟ್ ಮಾಡಿ ಅವನನ್ನು ಆಸ್ಪತ್ರೆಗೆ ಸೇರಿಸಿದ ನಂತರ, ಇನ್ಸ್ಪೆಕ್ಟರ್ ರವರು ಆಡಿದ ನಾಟಕ ತಿಳಿದು, ನಿಮ್ಮನ್ನು ನಂಬಿ ಹಾಳಾಗಿ ಹೋದೆ ಎಂದು ಪಶ್ಚಾತ್ತಾಪ ಪಡುತ್ತಾನೆ
ಕಥೆಯನ್ನು ಮುಂದುವರೆಸುತ್ತಾ
ಕಿಡ್ನಾಪರ್ ನನ್ನು ಆಸ್ಪತ್ರೆ ಸಿಬ್ಬಂದಿಗಳು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗಿ ಅಲ್ಲಿ ಕಾಲಿಗೆ ಹೊಕ್ಕಿದ್ದ ಗುಂಡನ್ನು ತೆಗೆದು, ಬ್ಯಾಂಡೇಜ್ ಸುತ್ತಿ ಡ್ರಸ್ಸಿಂಗ್ ಮಾಡಿ ವಾರ್ಡಿಗೆ ಕರೆದುಕೊಂಡು ಬಂದಾಗ
ಇನ್ಸ್ ಪೆಕ್ಟರ್ ರವರು, ನೀನು ಯಾರು? ನಿನ್ನ ಹಿಂದೆ ಎಷ್ಟು ಜನರಿದ್ದಾರೆ? ಎಷ್ಟು ದಿನಗಳಿಂದ ಈ ಕೆಲಸ ಮಾಡುತ್ತಿದ್ದೀಯಾ? ಇಲ್ಲಿಯವರೆಗೂ ಯಾರ್ಯಾರನ್ನು ಕಿಡ್ನಾಪ್ ಮಾಡಿ ಎಷ್ಟು ಹಣವನ್ನು ಗಳಿಸಿದ್ದೀಯಾ ಎಂದು ಪ್ರಶ್ನಿಸಿದಾಗ
ಸಾರ್ ನಾನು ಈವರೆಗೂ ಯಾರನ್ನೂ ಕಿಡ್ನಾಪ್ ಮಾಡಿಲ್ಲಾ ಸಾರ್ ಎಂದು ಕಿಡ್ನಾಪರ್ ಹೇಳಿದಾಗ.
ಓ ಹೋ ಹಾಗಾದರೆ ನೀನು ಲರ್ನರ್ ಅಂತ ಕಾಣುತ್ತದೆ, ಅದಕ್ಕೆ ನಾವು ಬೀಸಿದ ಗಾಳಕ್ಕೆ ಸುಲಭವಾಗಿ ಬಿದ್ದುಬಿಟ್ಟಿದ್ದೀಯಾ ಎಂದು ಇನ್ಲ್ ಪೆಕ್ಟರ್ ಮಾತಿಗೆ,
ನೀವು ನಿಮ್ಮ ಮಾತಿನಿಂದ ಯಾರನ್ನಾದರೂ ಮರುಳು ಮಾಡುತ್ತೀರಾ ಸಾರ್ ಎಂಬ ಕಿಡ್ನಾಪರ್ ಮಾತಿಗೆ
ಹ್ಞೂಂ ಹ್ಞೂಂ ಆಯ್ತು ಈಗ ನಾನು ಕೇಳಿದ ಪ್ರಶ್ನೆಗೆ ಉತ್ತರ ಹೇಳು
ಎನ್ನಲು
ಸಾರ್ ನಾನು ಕಿಡ್ನಾಪ್ ಮಾಡಿ ಜೀವನ ಮಾಡುವವನಲ್ಲಾ ಸಾರ್ ಎಂದಾಗ
ನಿಮ್ಮಪ್ಪ ಅಮ್ಮ ಯಾರು? ಎಲ್ಲಿದ್ದಾರೆಂದು ಇನ್ಸ್ಪೆಕ್ಟರ್ ಪ್ರಶ್ನಿಸಿದಾಗ
ಸಾರ್ ನನಗೆ ಯಾರೂ ಇಲ್ಲಾ ಸಾರ್ ನಾನೊಬ್ಬ ಅನಾಥ ಎನ್ನುತ್ತಾನೆ ಆ ಕಿಡ್ನಾಪರ್.
ಏಯ್ ನೀನು ಸುಳ್ಳು ಹೇಳುತ್ತಿದ್ದೀಯಾ ನಿನ್ನ ಮೊಬೈಲ್ ಕೊಡು ಅದರಲ್ಲಿರುವ ಕಾಂಟಾಕ್ಟ್ ಗೆ ಫೋನ್ ಮಾಡಿದರೆ ನಿನ್ನ ಬಂಡವಾಳ ಗೊತ್ತಾಗುತ್ತದೆಂದು ಇನ್ಸ್ ಪೆಕ್ಟರ್ ಹೇಳಿದರೂ
ಕಿಡ್ನಾಪರ್ ತನ್ನ ಮೊಬೈಲ್ ಕೊಡಲು ಹಿಂಜರಿಯುತ್ತಾನೆ.
ರೀ ದೆಫೇದಾರ್ರೇ ಇವನ ಮೊಬೈಲನ್ನು ತಕ್ಷಣ ತೆಗೆದುಕೊಳ್ಳುವುದಲ್ಲವೇನ್ರೀ ಯಾಕ್ರೀ ಅವನ ಬಳಿ ಬಿಟ್ರೀ ಎಂದು ಇನ್ಸ್ ಪೆಕ್ಟರ್ ಕೇಳಲು
ಸಾರಿ ಸಾರ್ ಇವನನ್ನು ಆಸ್ಪತ್ರೆಗೆ ಸೇರಿಸುವುದರಲ್ಲಿ ಬ್ಯುಸಿಯಾಗಿದ್ದೆ ಎಂದು ಹೇಳಿ, ಕಿಡ್ನಾಪರ್ ಬಳಿ ಬಂದು ಏಯ್ ಮೊಬೈಲ್ ಕೊಡೋ ಎಂದು ಕೇಳಿದಾಗ
ಕಿಡ್ನಾಪರ್ ಆಗಲೂ ಮೊಬೈಲನ್ನು ಕೊಡಲು ತಯಾರಿರುವುದಿಲ್ಲ.
ದೆಫೇದಾರರೇ ಏನು ಮುಖ ನೋಡುತ್ತಿದ್ದೀರೀ? ಅವನ ಜೇಬಿನಿಂದ ಮೊಬೈಲ್ ತೆಗೆದುಕೊಳ್ರೀ ಎಂದು ಇನ್ಸ್ ಪೆಕ್ಟರ್ ಏರುಧ್ವನಿಯಲ್ಲಿ ಹೇಳಿದಾಗ
ಕಿಡ್ನಾಪರ್ ಅಳುಕುತ್ತಲೇ ಮೊಬೈಲನ್ನು ದೆಫೇದಾರರಿಗೆ ಕೊಡುತ್ತಾನೆ.
ಇದರ ಪಾಸ್ ವರ್ಡ್ ಹೇಳು ಇಲ್ಲದಿದ್ದರೆ ನಿನ್ನ ಹೆಬ್ಬೆಟ್ಚಿನ ಇಂಪ್ರೆಶನ್ ಕೊಟ್ಟು ಓಪನ್ ಮಾಡೆಂದು ದೆಫೇದಾರರು ಹೇಳಲು
ಅವನ ಪಾಸ್ವರ್ಡ್ ಕೇಳಿ ಪಡೆಯಿರಿ, ನಮಗೆ ಮುಂದಿನ ದಿನಗಳಲ್ಲಿ ಅವನ ಮೊಬೈಲ್ ಓಪನ್ ಮಾಡಲು ಬೇಕಾಗುತ್ತದೆಂದು ಇನ್ಸ್ಪೆಕ್ಟರ್ ಹೇಳಿದಾಗ
ದೆಫೇದಾರರು ಕಿಡ್ನಾಪರ್ ಮೊಬೈಲಿನ ಪಾಸ್ ವರ್ಡ್ ಸಂಖ್ಯೆಗಳನ್ನು ಪಡೆದು ಮೊಬೈಲನ್ನು ಓಪನ್ ಮಾಡಿದಾಗ
ಒಂದು ಮೊಬೈಲ್ ನಂಬರಿಗೆ ಹಲವಾರು ಸಲ ಫೋನ್ ಮಾಡಿರುವುದನ್ನು ದೆಫೇದಾರರು ನೋಡುತ್ತಾ, ಯಾರಿಗೆ ಇಷ್ಟೊಂದು ಸಲ ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ
ಅದು ಯುವತಿಯ ತಂದೆಯ ನಂಬರ್ ಎನ್ನುತ್ತಾನೆ ಕಿಡ್ನಾಪರ್
ಓಹೋ ಯುವತಿಯ ತಂದೆಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದೀಯಾ ಅಲ್ಲವಾ ಎಂದು ದೆಫೇದಾರರು ಪುನರ್ ಪ್ರಶ್ನಿಸಿದಾಗ
ಕಿಡ್ನಾಪರ್ ಮೌನವಾಗುತ್ತಾನೆ.
ನಂತರದ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿದ್ದ ಹೆಸರುಗಳನ್ನು ದೆಫೇದಾರರು ನೋಡುತ್ತಾ, ಅದರಲ್ಲಿ ಬ್ರದರ್, ಡ್ಯಾಡೀ ಎಂದು ನಮೂದಾಗಿರುವುದನ್ನು ನೋಡಿ ಏನೋ ನೀನು ಅನಾಥ ಎಂದು ಹೇಳಿದೆ ಇದರಲ್ಲಿ ಬ್ರದರ್, ಡ್ಯಾಡಿ ಮಮ್ಮಿ ಎಲ್ಲಾ ಇದೆ, ಎಂದು ಕೇಳಲು
ಅದೂ,,,,ಎಂದು ಮುಂದೆ ಮಾತನಾಡಲು ಅನುಮಾನಿಸಿದಾಗ
ಅವರಿಗೆ ಫೋನ್ ಮಾಡಿ ಇಲ್ಲಿಗೆ ಕರೆಸು ಎಂದು ದೆಫೇದಾರ್ ಹೇಳಿದರೂ
ಕಿಡ್ನಾಪರ್ ಸುಮ್ಮನೆ ಕುಳಿತಿರುತ್ತಾನೆ.
ಏಯ್ ನಿನಗೇ ಕಣೋ ಹೇಳುತ್ತಿರುವುದು ಎಲ್ಲರನ್ನು ಕರೆಸೋ ಎಂದು ಏರುಧ್ವನಿಯಲ್ಲಿ ಇನ್ಸ್ ಪೆಕ್ಟರ್ ಕೂಡಾ ಹೇಳಿದಾಗಲೂ
ಕಿಡ್ನಾಪರ್ ತನ್ನ ಕಾಂಟಾಕ್ಟ್ ನಲ್ಲಿದ್ದ ಫೋನ್ ನಂಬರಿಗೆ ಫೋನ್ ಮಾಡಲು ಹಿಂಜರಿಯುತ್ತಿರುವುದನ್ನು ಕಂಡ ಇನ್ಸ್ ಪೆಕ್ಟರ್ ರವರು
ರೀ ದೆಫೇದಾರರ್ರೇ ಅವನೇಕೋ ಫೋನ್ ಮಾಡುತ್ತಿಲ್ಲ, ನೀವೇ ಫೋನ್ ಮಾಡಿ ಕರೆಸ್ರೀ ಎಂದು ಹೇಳಿದಾಗ
ಆಯ್ತು ಸಾರ್ ಎಂದು ಹೇಳಿ ಕಿಡ್ನಾಪರ್ ಮೊಬೈಲಿನಲ್ಲಿ ಡ್ಯಾಡಿ ಎಂದು ನಮೂದು ಮಾಡಿಕೊಂಡಿದ್ದ ನಂಬರಿಗೆ ದೆಫೇದಾರರು ಫೋನ್ ಮಾಡಿದ ತಕ್ಷಣ
ಕಿಡ್ನಾಪರ್ ತಂದೆಯು ಯಾರು ಫೋನ್ ಮಾಡುತ್ತಿರುವರೆಂದು ಪ್ರಶ್ನಿಸಲು
ಇನ್ಸ್ ಪೆಕ್ಟರ್ ರವರು ದೆಫೇದಾರರಿಂದ ಮೊಬೈಲ್ ಪಡೆದುಕೊಂಡು, ಹಲೋ ನಾನು ಪೋಲೀಸ್ ಇನ್ಸ್ ಪೆಕ್ಟರ್ ಮಾತನಾಡುತ್ತಿರುವುದು ನಿಮ್ಮ ಮಗನ ಕಾಲಿಗೆ ಏಟಾಗಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾನೆ ಈಗಲೇ ಬನ್ನಿ ಎಂದಾಗ
ಕಿಡ್ನಾಪರ್ ತಂದೆಗೆ ಗಾಬರಿಯಾಗಿ ಅಯ್ಯೋ ನನ್ನ ಮಗನಿಗೆ ಏನಾಗಿದೆ ಸಾರ್? ಅವನ ಕಾಲಿಗೆ ಏಟು ಹೇಗೆ ಬಿತ್ತೆಂದು ಕಿಡ್ನಾಪರ್ ತಂದೆ ಪ್ರಶ್ನಿಸಿದಾಗ
ನೀವು ಆಸ್ಪತ್ರೆಗೆ ಬಂದರೆ ಎಲ್ಲಾ ವಿಷಯ ತಿಳಿಯುತ್ತದೆಂದು ಹೇಳಿ ಆಸ್ಪತ್ರೆಯ ವಿಳಾಸವನ್ನು ಕೊಟ್ಟ ಅರ್ಧ ಗಂಟೆಯಲ್ಲಿ ಇನ್ಸ್ ಪೆಕ್ಟರ್ ನೀಡಿದ್ದ ವಿಳಾಸದ ಆಸ್ಪತ್ರೆಯ ವಾರ್ಡಿಗೆ ಬಂದು ನೋಡಿದಾಗ ಮಗನ ಅವಸ್ಥೆಕಂಡು ಕಿಡ್ನಾಪರ್ ತಂದೆಗೆ ಮಾತುಗಳೇ ಹೊರಡುವುದಿಲ್ಲ,
ವಾರ್ಡಿನ ಹಾಸಿಗೆಯ ಮೇಲೆ ಮಗ ಮಲಗಿದ್ದು, ಅವನ ಕಾಲಿಗೆ ಬ್ಯಾಂಡೇಜ್ ಹಾಕಿದ್ದರೂ ಸಹ ಒಳಗೆ ಸಣ್ಣದಾಗಿ ರಕ್ತ ಹೊರಬರುತ್ತಿದ್ದುದ್ದರಿಂದ ಆ ಭಾಗ ಕೆಂಪಗಾಗಿದ್ದು, ಅವನ ಎದುರಿನ ಸೀಟಿನಲ್ಲಿ ದೆಫೇದಾರರು ಕುಳಿತಿರುವುದನ್ನು
ಕಿಡ್ನಾಪರ್ ತಂದೆಯು ನೋಡಿ ದುಃಖ ಮಡುಗಟ್ಟಿ, ಏನು ಮಾಡಿಕೊಂಡೆಯಪ್ಪಾ ಎಂದು ಅವನ ತಂದೆ ಪ್ರಶ್ನಿಸಿದಾಗ
ಅಪ್ಪಾ ,,,, ಅದೂ,,, ಎಂದು ಹೇಳುತ್ತಿರುವುದನ್ನು ದೆಫೇದಾರರು ತಡೆದು,
ಯಜಮಾನ್ರೇ ಇವನು ನಿಮ್ಮ ಮಗಾನಾ ಎಂದು ಕೇಳಿದಾಗ
ಹೌದಪ್ಪಾ ಅದರಲ್ಲೇನು ಅನುಮಾನವೆಂದು ಕಿಡ್ನಾಪರ್ ತಂದೆ ಪ್ರಶ್ನಿಸಲು
ನೀವು ಇಂತಹ ಮಗನನ್ನು ಬೆಳೆಸಿದ್ದೀರಾ ಎಂದು ನಂಬಲು ಆಗುತ್ತಿಲ್ಲವೆಂದಾಗ
ಮೊದಲು ಏನಾಯ್ತೂ ಎಂದು ಹೇಳೀ ಸಾರ್ ಏತಕ್ಕೆ ಇವನ ಕಾಲಿಗೆ ಪೆಟ್ಟಾಗಿ ರಕ್ತ ಬರುತ್ತಿದೆಯೆಂದು ಆತಂಕದಿಂದ ಕಿಡ್ನಾಪರ್ ತಂದೆ ಪ್ರಶ್ನಿಸಿದಾಗ
ನೀವು ಈಗ ತಾನೇ ಬಂದು ಮಗನ ಅವಸ್ಥೆ ನೋಡಿ ಗಾಬರಿಯಾಗಿದ್ದೀರಾ, ಎರಡು ನಿಮಿಷ ಸುಧಾರಿಸಿಕೊಳ್ಳಿ ಎಲ್ಲವನ್ನೂ ಹೇಳುತ್ತೇನೆ, ಕುಡಿಯುವುದಕ್ಕೆ ನೀರು ಬೇಕಾ ಎಂದು ದೆಫೇದಾರ್ ಪ್ರಶ್ನಿಸಲು
ಅಯ್ಯೋ ಅದೆಲ್ಲಾ ಬೇಡಾ ಸಾರ್ ಮೊದಲು ನನ್ನ ಮಗನಿಗೆ ಏನಾಯ್ತೆಂದು ಹೇಳಿ ನನಗೇಕೋ ತುಂಬಾ ಭಯವಾಗುತ್ತಿದೆಯೆಂದು ಕಿಡ್ನಾಪರ್ ತಂದೆ ಕೇಳಲು
ನಿಮ್ಮ ಮಗ ಎಂದು ಹೇಳುತ್ತಿರುವ ಇವನು ಯಾವುದೋ ಹುಡುಗಿಯನ್ನು ಕಿಡ್ನಾಪ್ ಮಾಡಿ ಅವರ ತಂದೆಗೆ ಎರಡು ಕೋಟಿ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದ, ಅದು ನಮ್ಮ ಸಾಹೇಬರ ಬುದ್ದಿವಂತಿಕೆಯಿಂದ ಇವನ ಪ್ಲಾನ್ ಫೈಲ್ಯೂರ್ ಆಯ್ತು, ನಮ್ಮಿಂದ ತಪ್ಪಿಸಿಕೊಳ್ಳಲು ಹೋದಾಗ,
ನಮ್ಮ ಸಹಾಯಕ ಇನ್ಸ್ ಪೆಕ್ಟರ್ ರವರು ಇವನ ಕಾಲಿಗೆ ಶೂಟ್ ಮಾಡಿ ಹಿಡಿಯಬೇಕಾಯಿತು ಎಂದ ತಕ್ಷಣ
ನೋ,,,, ಸಾರ್ ನನ್ನ ಮಗ ಅಂತಹವನಲ್ಲಾ ಅವನಿಗೇಕೆ ಬೇಕು ಎರಡು ಕೋಟಿ ರೂಪಾಯಿ? ಎಂದು ಕಿಡ್ನಾಪರ್ ತಂದೆ ಪ್ರಶ್ನಿಸಲು
ನನ್ನಲ್ಲಿ ನಂಬಿಕೆ ಇಲ್ಲದಿದ್ದರೆ ನಿಮ್ಮ ಮಗನನ್ನೇ ಕೇಳಿ ಎಂದು ದೆಫೇದಾರರು ಹೇಳಲು
ಕಿಡ್ನಾಪರ್ ತಂದೆ ಮಗನ ಕಡೆ ತಿರುಗಿ ಏನಪ್ಪಾ ದೆಫೇದಾರರು ಹೇಳುತ್ತಿರುವುದು ನಿಜವಾ ಎಂದು ಪ್ರಶ್ನಿಸಿದಾಗ
ಕಿಡ್ನಾಪರ್ ಮೌನವಾಗುತ್ತಾನೆ
ಅಯ್ಯೋ ನಿನಗೇಕೆ ಬೇಕಿತ್ತು ಹಣ?ನಮ್ಮ ಮನೆಯ ಮರ್ಯಾದೆ ಎಲ್ಲವನ್ನೂ ಕಳೆದುಬಿಟ್ಚೆಯಲ್ಲೋ ಎಂದು ದುಃಖತಪ್ತರಾಗಿ, ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಾಗ
ಸಾರೀ ಕಣಪ್ಪಾ ಎಂದು ಕಿಡ್ನಾಪರ್ ಹೇಳಲು
ನಿನ್ನ ಸಾರೀ,,,,ಗೆ ಬೆಂಕಿ ಬಿತ್ತು, ನಮ್ಮ ಮನೆ ಗೌರವ ಮರ್ಯಾದೆ ಎಲ್ಲವನ್ನೂ ಹಾಳುಮಾಡಿ ಸಾರೀ ಎನ್ನುತ್ತಿದ್ದೀಯಾ ನಿನಗೆ ನಾಚಿಕೆಯಾಗುವುದಿಲ್ಲವಾ ಎಂದು ರೋಧಿಸುತ್ತಿರುವಾಗ
ಯಜಮಾನ್ರೇ ಹೊರಗೆ ಹೋಗಿ ಕುಳಿತುಕೊಂಡಿರಿ, ಇಲ್ಲಿ ಅತ್ತರೆ ಬೇರೆ ಪೇಷೆಂಟ್ ಗಳಿಗೆ ತೊಂದರೆಯಾಗುತ್ತದೆ ಎಂಬ ದೆಫೇದಾರರ ಮಾತಿಗೆ
ಕಿಡ್ನಾಪರ್ ತಂದೆ ಹೊರಗೆ ಬಂದು ಆಕಾಶವೇ ಕಳಚಿಬಿದ್ದಂತೆ ಚಿಂತಿತರಾಗಿ ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡಿರುವಾಗ
ಇನ್ಸ್ ಪೆಕ್ಟರ್ ವಾರ್ಡಿನೊಳಗೆ ಬಂದು ಇವನ ಸಂಂಧಿಕರು
ಯಾರಾದರೂ ಬಂದ್ರಾ ಎಂದು ಕೇಳಲು
ಸಾರ್ ಇವನ ತಂದೆ ಬಂದಿದ್ದಾರೆ ಹೊರಗೆ ಕುಳಿತಿದ್ದಾರೆಂದು ದೆಫೇದಾರರು ಹೇಳಿದಾಗ
ಕರೀರೀ ಅವರನ್ನು ಎಂದು ಇನ್ಸ್ ಪೆಕ್ಟರ್ ಹೇಳಿದ ತಕ್ಷಣ
ದೆಫೇದಾರರು ಹೊರಗೆ ಕುಳಿತಿದ್ದ ಕಿಡ್ನಾಪರ್ ತಂದೆಗೆ ಸಾಹೇಬರು ಕರೆಯುತ್ತಿದ್ದಾರೆಂದು ಹೇಳಿದಾಗ
ಕಿಡ್ನಾಪರ್ ತಂದೆಯು ಅಳುಕಿನಿಂದಲೇ ವಾರ್ಡಿನೊಳಗೆ ಹೋಗಿ ನಮಸ್ಕಾರಾ ಸಾರ್ ಎನ್ನುತ್ತಾರೆ
ಇನ್ಸ್ ಪೆಕ್ಟರ್ ರವರು ಕಿಡ್ನಾಪರ್ ತಂದೆಯನ್ನು ಅಪಾದ ಮಸ್ತಕ ನೋಡಿ, ನಿಮ್ಮನ್ನು ನೋಡಿದರೆ ಒಂದು ರೀತಿಯ ಸಭ್ಯರಂತೆ ಕಾಣುತ್ತಿದ್ದೀರೀ, ಆದರೆ ನಿಮ್ಮ ಮಗ ಇಂತಹ ಕೆಲಸ ಮಾಡಿದ್ದಾನೆಂದು ನಂಬಲಿಕ್ಕೆ ಆಗುತ್ತಿಲ್ಲಾ, ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ ಯಾರಿಗೆ ಗೊತ್ತು ಎನ್ನುತ್ತಾ, ನಿಮಗೆ ಎಷ್ಟು ಜನ ಮಕ್ಕಳು ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ
ಇಬ್ಬರು ಸಾರ್ ಎನ್ನುತ್ತಾರೆ ಕಿಡ್ನಾಪರ್ ತಂದೆ
ಇನ್ನೊಬ್ಬ ಮಗ ಏನು ಮಾಡುತ್ತಿದ್ದಾನೆ? ಅವನೂ ಇವನಂತೇ ಏನಾದರೂ ಕಿಡ್ನಾಪ್ ಕಳ್ಳತನ ಮಾಡುತ್ತಿದ್ದಾನಾ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಲು
ಸಾರ್ ನಮ್ಮ ಮಕ್ಕಳು ಅಂತಹವರಲ್ಲಾ ಸಾರ್ ಎನ್ನುತ್ತಾರೆ ಕಿಡ್ನಾಪರ್ ತಂದೆ
ನಿಮ್ಮ ಇನ್ನೊಬ್ಬ ಮಗನನ್ನು ಕರೆಯಿರಿ ಎಂದು ಇನ್ಸ್ ಪೆಕ್ಟರ್ ಹೇಳಲು
ಅವನೇಕೆ ಇಲ್ಲಿಗೆ ಬರಬೇಕೂ ಸಾರ್ ಎಂದು ಕಿಡ್ನಾಪರ್ ತಂದೆ ಪ್ರಶ್ನಿಸಿದಾಗ
ಸುಮ್ಮನೆ ಕರೆಯುತ್ತೀರೋ ಅಥವಾ ನಾವೇ ಎಳೆದುಕೊಂಡು ಬರಬೇಕಾ ಎಂದು ಇನ್ಸ್ ಪೆಕ್ಟರ್ ಏರುಧ್ವನಿಯಲ್ಲಿ ಕೇಳಿದಾಗ
ನಾನೇ ಕರೆಸುತ್ತೇನೆಂದು ಹೇಳಿ ಎರಡನೇ ಮಗನಿಗೆ ಫೋನ್ ಮಾಡಿ, ನಿಮ್ಮಣ್ಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆಂದು ಆಸ್ಪತ್ರೆಯ ವಿಳಾಸದ ಲೊಕೇಶನ್ ಕಳುಹಿಸಿದಾಗ
ಕಿಡ್ನಾಪರ್ ತಮ್ಮನು ಅಪ್ಪಾ ನಾನೀಗಲೇ ಬಂದೆ ಎಂದು ಹೇಳಿ ಫೋನ್ ಆಫ್ ಮಾಡಿ ಸೀದಾ ಆಟೋ ಹಿಡಿದು ಆಸ್ಪತ್ರೆಯ ವಾರ್ಡಿನೊಳಗೆ ಕಾಲಿಟ್ಟ ತಕ್ಷಣ ಅಲ್ಲಿದ್ದ ಇನ್ಸ್ ಪೆಕ್ಟರ್ ರವರನ್ನು ನೋಡಿ ಕಂಗಾಲಾಗಿ ಅಲ್ಲೇ ನಿಲ್ಲಲು
ಇನ್ಲ್ ಪೆಕ್ಟರ್ ರವರು ವೆಲ್ಕಮ್ ಮಿಸ್ಟರ್ ವಿಕ್ರಮ್ ಎಂದ ತಕ್ಷಣ
ವಿಕ್ರಮ್ ಗೆ ಗರಬಡಿದಂತಾಗಿ ಸಾರ್ ನೀವಿಲ್ಲಿ? ನಮ್ಮಣ್ಣನಿಗೆ ಏನಾಯ್ತೆಂದು ಪ್ರಶ್ನಿಸಿದಾಗ
ಇನ್ಸ್ಪೆಕ್ಟರ್ ರವರು ಓ ಹೋ ನಿನಗೇನೂ ಗೊತ್ತಿಲ್ಲಾ ಅಲ್ಲವಾ ಎಂದು ಪ್ರಶ್ನಿಸಲು.
ನಮ್ಮ ತಾಯಿ ಆಣೆಗೂ ಏನೂ ಗೊತ್ತಿಲ್ಲ ಎನ್ನುತ್ತಾನೆ ವಿಕ್ರಮ್
ನಾನು ನಿನ್ನನ್ನು ಸ್ಟೇಷನ್ ಗೆ ಕರೆಸಿ ಆಶಾ ಎಂಬ ಯುವತಿಯನ್ನು ಕಿಡ್ನಾಪ್ ಮಾಡಿದ್ದೀಯಾ ಎಂದು ಕೇಳಿದರೂ ನನಗೇನೂ ಗೊತ್ತಿಲ್ಲವೆಂದು ಹೇಳಿದೆ ಅಲ್ಲವೇನೋ ಎಂದು ಏರುಧ್ವನಿಯಲ್ಲಿ ಕೇಳಿದಾಗ
ಸಾರ್ ಈಗಲೂ ಹೇಳುತ್ತಿದ್ದೇನೆ ನನಗೇನೂ ಗೊತ್ತಿಲ್ಲಾ ಸಾರ್ ಎಂದೇ ಹೇಳುತ್ತಾನೆ ವಿಕ್ರಮ್
ನಿನಗೆ ವಿಷಯ ಗೊತ್ತಿಲ್ಲದಿದ್ದರೆ ನಿಮ್ಮಪ್ಪ ಹೊರಗೆ ಕುಳಿತಿದ್ದಾರೆ ಅವರನ್ನು ಕೇಳಿದರೆ ಎಲ್ಲಾ ವಿಷಯವನ್ನು ಹೇಳುತ್ತಾರೆ.
ಇಲ್ಲಿ ನಿನಗೆ ಕಥೆ ಹೇಳುವುದಕ್ಕೆ ಆಗುವುದಿಲ್ಲ, ನಾನು ಇವನನ್ನು ವಿಚಾರಿಸಬೇಕೆಂದು ಇನ್ಸ್ ಪೆಕ್ಟರ್ ಗುಡುಗಿದಾಗ
ವಿಕ್ರಮ್ ಅಣ್ಣನ ಕಡೆ ತಿರುಗಿ, ಏನಣ್ಣಾ ಇದೆಲ್ಲಾ? ಕಾಲಿಗೆ ಗಾಯವಾಗಿದೆ, ಇನ್ಸ್ ಪೆಕ್ಟರ್ ಎಲ್ಲರೂ ಇದ್ದಾರೆಂದು ಅಳುತ್ತಾ ಪ್ರಶ್ನಿಸಿದಾಗ
ಏಯ್ ಹೊರಗೆ ಹೋಗಿ ನಿಮ್ಮಪ್ಪನನ್ನು ಕೇಳು ಎಲ್ಲವನ್ನೂ ಹೇಳುತ್ತಾರೆ ಎಂದು ಹೇಳಲಿಲ್ಲವಾ ಎಂಬ ಇನ್ಸ್ ಪೆಕ್ಟರ್ ಮಾತಿಗೆ
ವಿಕ್ರಮ್ ದುಃಖತಪ್ತನಾಗಿ ಮೌನದಿಂದ ಅವರಪ್ಪ ಕುಳಿತಲ್ಲಿಗೆ ಬರುತ್ತಾನೆ
ಮುಂದುವರೆಯುತ್ತದೆ
- ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ
ತಮ್ಮ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದರೆ ಅದನ್ನು ಕಂಡು ಸಂತಸ ಪಡುವ ಹೆತ್ತವರ ಹೃದಯ, ಮಕ್ಕಳೇನಾದಕೂ ತಪ್ಪು ಮಾಡಿ ಪೋಲೀಸ್ ರವರಿಗೆ ಸಿಕ್ಕಿಬಿದ್ದಾಗ ಅವರ ಹೃದಯ ವಿಲವಿಲನೆ ಒದ್ದಾಡುತ್ತದೆ.
ಹೆತ್ತವರಿಗೆ ತಮ್ಮ ಮನೆಯ ಗೌರವ ಮರ್ಯಾದೆ ಮುಖ್ಯವಾಗಿರುತ್ತದೆ. ಅದಕ್ಕೇನಾದರೂ ಚ್ಯುತಿ ಬಂದರೆ ಮಾತ್ರ ಸಹಿಸುವುದಿಲ್ಲ. ತಮ್ಮ ಮಕ್ಕಳು ತಿಳಿದೋ ತಿಳಿಯದೆಯೋ ತಪ್ಪು ಮಾಡಿದ್ದಾರೆ, ಅವರ ಬೆಂಬಲಕ್ಕೆ ನಿಲ್ಲಬೇಕೆಂದು ತಕ್ಷಣ ಕೆಲವರು ಯೋಚಿಸುವುದಿಲ್ಲ. ತನ್ನ ಮನೆಯ ಗೌರವ ಹಾಳುಮಾಡಿದ್ದಾನೆಂಬ ಕೋಪದಲ್ಲಿ, ಸಹಾಯ ಮಾಡಲು ನಿರಾಕರಿಸಿದರೂ ನಂತರ ಮನವರಿಕೆಯಾಗಿ, ಮಕ್ಕಳ ಸಹಾಯಕ್ಕೆ ಧಾವಿಸಬಹುದು.