ಅಭಿಲಾಷೆ ಕಾದಂಬರಿ: 38 ನೇ ಸಂಚಿಕೆ
ಹಿಂದಿನ ಸಂಚಿಕೆಯಲ್ಲಿ
ಕಿಡ್ನಾಪರ್ ಗೆ ಬ್ರೈನ್ ವಾಶ್ ಮಾಡಿ, ನಾವುಗಳು ನಿಮ್ಮ ಸಹಾಯಕ್ಕೆ ಬರುತ್ತೇವೆಂದು ನಂಬಿಸಿ ಯುವತಿಯನ್ನು ಅಡಗಿಸಿಟ್ಟಿರುವ ತಾಣವನ್ನು ತೋರಿಸುವಂತೆ ಹೇಳಿ ಅವನ ಕಾರನ್ನು ಇನ್ಸ್ಪೆಕ್ಟರ್ ಹಾಗೂ ಅವರ ಸಿಬ್ಬಂದಿಗಳು ಹಿಂಬಾಲಿಸುತ್ತಾರೆ.
ಕಥೆಯನ್ನು ಮುಂದುವರೆಸುತ್ತಾ
ಕಿಡ್ನಾಪರ್ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದು, ಅವನನ್ನು ಹಿಂಬಾಲಿಸುತ್ತಾ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯು ತಮ್ಮ ಕಾರಿನಲ್ಲಿ ಹೋಗುತ್ತಿರುತ್ತಾರೆ.
ಕಾರು ಬಹಳ ದೂರ ಸಾಗಿದ ನಂತರ ಒಂದು ಚಿಕ್ಕ ರಸ್ತೆಯಲ್ಲಿದ್ದ ಒಂದು ಮನೆಯ ಮುಂದೆ ಕಾರನ್ನು ನಿಲ್ಲಿಸಿ, ಕಿಡ್ನಾಪರ್ ಹೋದ ತಕ್ಷಣ ಬಾಗಿಲನ್ನು ಹಾಕಿಕೊಂಡಾಗ
ಇನ್ಸ್ ಪೆಕ್ಟರ್ ಹಾಗೂ ಅವರ ಸಿಬ್ಬಂದಿಯವರು ಏಯ್ ಬಾಗಿಲು ತೆಗಿ ಎಂದು ಕೂಗಿ ಹೇಳಿದರೂ ಕೂಡಾ ಕಿಡ್ನಾಪರ್ ಬಾಗಿಲು ತೆಗೆಯುವುದಿಲ್ಲ
ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯು ಹೊರಗೆ ನಿಂತಿದ್ದು, ಗುರುಗಳ ಮಗಳಿಗೆ ಏನು ಅಪಾಯ ಮಾಡುತ್ತಾನೋ ಎಂದುಕೊಂಡು ಇನ್ನೇನು ಬಾಗಿಲನ್ನು ಒಡೆಯ ಬೇಕು ಎನ್ನುವಷ್ಟರಲ್ಲಿ,
ಕಿಡ್ನಾಪರ್ ಬಾಗಿಲು ತೆಗೆದು
ಇನ್ಸ್ಪೆಕ್ಟರ್ ರವರಿಗೆ ಒಳಗೆ ಬರುವಂತೆ ಹೇಳಿದಾಗ
ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರು ಒಳಗೆ ಹೋಗಿ, ಕುರ್ಚಿಗೆ ಕಟ್ಟಿದ್ದ ಆಶಾಳನ್ನು ನೋಡಿದ ತಕ್ಷಣ ಇನ್ಸ್ ಪೆಕ್ಟರ್ ಗೆ ಕಿಡ್ನಾಪರ್ ಮೇಲೆ ತಡೆಯಲಾರದ ಕೋಪ ಬರುತ್ತದೆ. ಈಗಲೇ ಇವನನ್ನು ಎಳೆದುಕೊಂಡು ಹೋಗಲಾ ಎನಿಸಿದರೂ, ಇವನ ಹಿಂದೆ ಯಾರು ಯಾರಿದ್ದಾರೆಂದು ತಿಳಿಯಲು ಸುಮ್ಮನಿರುತ್ತಾರೆ. ಕುರ್ಚಿಯ ಪಕ್ಕದಲ್ಲಿ ಒಬ್ಬ ರೌಡಿ ನಿಂತಿದ್ದು, ಮೂವರನ್ನು ನೋಡಿ, ಅಣ್ಣಾ ಇವರನ್ನು ಇಲ್ಲಿಗೇಕೆ ಕರೆದುಕೊಂಡು ಬಂದ್ರೀ? ಎಂದು ಖಾರವಾಗಿ ಪ್ಪಶ್ನಿಸಿದಾಗ
ಇವರು ನಮ್ಮ ಜೊತೆಯಲ್ಲಿದ್ದು, ನಮಗೆ ಸಹಾಯ ಮಾಡುತ್ತಾರೆಂದು ಹೇಳಿದಾಗ
ಅಣ್ಣಾ ಎಷ್ಟೇ ಸಹಾಯ ಮಾಡಿದರೂ ನಮ್ಮ ಸೀಕ್ರೇಟ್ ಸ್ಥಳಕ್ಕೆ ಕರೆದುಕೊಂಡು ಬರಬಾರದಿತ್ತು ಎಂಬ ರೌಡಿಯ ಮಾತಿಗೆ
ಪರವಾಗಿಲ್ಲ ಬಿಡು ಇವರಿಂದ ನಮಗೆ ತೊಂದರೆಯಾಗುವುದಿಲ್ಲವೆಂದು ಕಿಡ್ನಾಪರ್ ಸಮಾಧಾನ ಮಾಡುತ್ತಾನೆ.
ಆಶಾಳಿಗೆ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರನ್ನು ಕಂಡು ತುಂಬಾ ಭಯವಾಗಿದ್ದು ನನಗೆ ಏನೂ ಮಾಡದಂತೆ ಕೈ ಮುಗಿದು ಕೇಳಿಕೊಳ್ಳುತ್ತಾಳೆ
ಕಿಡ್ನಾಪರ್ ಮಾತನಾಡಿ ನಿಮಗೇನೂ ಮಾಡುವುದಿಲ್ಲ, ನಮಗೆ ಹಣ ಮಾತ್ರ ಬೇಕು, ನಿಮ್ಮಪ್ಪ ಹಣ ಕೊಟ್ಟ ತಕ್ಷಣ ನಿಮ್ಮನ್ನು ಬಿಡುಗಡೆ ಮಾಡುತ್ತೇವೆಂದರೂ ಆಶಾಳಿಗೆ ಧೈರ್ಯ ಬರುವುದಿಲ್ಲ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ರೆಂದು ಅಂಗಲಾಚುತ್ತಾ ಬಿಕ್ಕಿ ಬಿಕ್ಕಿ ಅಳುತ್ತಲೇ ಇರುತ್ತಾಳೆ.
ಇನ್ಸ್ ಪೆಕ್ಟರ್ ಕೂಡಾ ಕಿಡ್ನಾಪರ್ ಹೇಳಿದ ಮಾತನ್ನೇ ಹೇಳುತ್ತಿರುವಾಗ
ಆಶಾ ಭಯದ ಕಣ್ಣುಗಳಿಂದ ಇನ್ಸ್ ಪೆಕ್ಟರ್ ನೋಡಲು
ಇನ್ಲ್ ಪೆಕ್ಟರ್ ರವರು ಕಣ್ಣು ಸನ್ನೆ ಮಾಡುತ್ತಾರೆ.
ಇವನ್ಯಾರೋ ನನಗೆ ಕಣ್ಣು ಹೊಡೆಯುತ್ತಿದ್ದಾನೆ ನನಗೇನು ಮಾಡುತ್ತಾನೋ ಎಂದು ಆಶಾಳು ಇನ್ನೂ ಭಯಭೀತಳಾಗಿರುತ್ತಾಳೆ.
ನಾವುಗಳು ಪೋಲೀಸ್ ರವರೆಂದು ಕಿಡ್ನಾಪರ್ ಗೆ ತಿಳಿಯದಂತೆ ಗುರುಗಳ ಮಗಳಿಗೆ ಹೇಗೆ ಹೇಳುವುದೆಂದು ಯೋಚಿಸುತ್ತಿರುವಾಗ
ಕಿಡ್ನಾಪರ್ ಮಾತನಾಡಿ ನಾನೀಗ ಇವರಪ್ಪನಿಗೆ ಹಣ ತರಲು ಹೇಳಿರುವ ಜಾಗಕ್ಕೆ ಹೋಗಿ ಫೋನ್ ಮಾಡಿ ಕರೆಸಿ ಅವರಿಂದ ಹಣ ಪಡೆದ ತಕ್ಷಣ ನಿಮಗೆ ಫೋನ್ ಮಾಡುತ್ತೇನೆ, ತಕ್ಷಣ ಈ ಯುವತಿಯನ್ನು ಕರೆದುಕೊಂಡು ಬನ್ನಿ, ಇವಳನ್ನು ಅವರಿಗೆ ಒಪ್ಪಿಸೋಣ, ಅಕಸ್ಮಾತ್ ಹಣ ಕೊಡದೇ ಇದ್ದರೆ ನಾನು ಫೋನ್ ಮಾಡುತ್ತೇನೆ ಆಗ ಇವಳನ್ನು ಬಿಡುವುದು ಬೇಡವೆಂದು ಹೇಳಿದಾಗ
ಓಕೆ ಬ್ರದರ್ ಎಂದು ಇನ್ಸ್ ಪೆಕ್ಟರ್ ಹೇಳುತ್ತಾರೆ.
ಕಿಡ್ನಾಪರ್ ತನ್ನ ಸಹಚರನಿಗೆ ನೀನೂ ಬಾ ಎಂದು ಕರೆದಾಗ
ಬ್ರದರ್ ನೀನೊಬ್ಬನೇ ಹೋಗು ಇವರು ಇಲ್ಲೇ ಇರಲಿ ನಮಗೆ ಸಹಾಯವಾಗುತ್ತದೆಂದು ಇನ್ಸ್ ಪೆಕ್ಟರ್ ಹೇಳಲು
ಓಕೆ ಓಕೆ ಎಂದು ಹೇಳಿ ಕಿಡ್ನಾಪರ್ ಹೊರಗೆ ಹೋದ ಅರ್ಧಗಂಟೆವರೆಗೂ ಇನ್ಲ್ ಪೆಕ್ಟರ್ ರವರು ಸುಮ್ಮನೆ ಕುಳಿತುಕೊಳ್ಳದೆ, ಮನೆಯ ಸುತ್ತಲೂ ಓಡಾಡುತ್ತಿರುತ್ತಾರೆ,
ರೌಡಿಯು ಮಾತ್ರ ಆಶಾಳ ಪಕ್ಕದಲ್ಲೇ ನಿಂತಿರುತ್ತಾನೆ.
ನಾಲ್ಕು ಜನರನ್ನು ನೋಡಿದ ಆಶಾಳಿಗೆ ಇವರು ನನ್ನನ್ನು ಈ ದಿನ ಬಿಡುವುದಿಲ್ಲ, ನನಗೊಂದು ಗತಿ ಕಾಣಿಸುತ್ತಾರೆ, ನನ್ನ ಕಥೆ ಮುಗಿಯಿತೆಂದುಕೊಳ್ಳುತ್ತಾಳೆ.
ಇನ್ಲ್ ಪೆಕ್ಟರ್ ರವರು ತನ್ಞ ಬ್ಯಾಡ್ಜ್ ತೋರಿಸಿ ಧೈರ್ಯ ಹೇಳಬೇಕೆಂದುಕೊಂಡು ಹತ್ತಿರ ಬಂದರೂ ಪಕ್ಕದಲ್ಲಿದ್ದ ರೌಡಿಯಿಂದ ಏನೂ ಹೇಳಲಾಗದೆ ಸುಮ್ಮನಿರಬೇಕಾಗಿರುತ್ತದೆ.
ಕಿಡ್ನಾಪರ್ ನಿಂದ ಫೋನ್ ಬರುತ್ತದೆಂದು ಕಾಯುತ್ತಿದ್ದರೂ ಒಂದು ಗಂಟೆಯಾದರೂ ಫೋನ್ ಬರುವುದೇ ಇಲ್ಲ.
ಕಿಡ್ನಾಪರ್ ಹೇಳಿದ್ದ ಜಾಗಕ್ಕೆ ಸಹಾಯಕ ಇನ್ಸ್ ಪೆಕ್ಟರ್ ಜೊತೆಗೆ ಪೋಲೀಸ್ ಸಿಬ್ಬಂದಿ ಹೊಂದಿದ್ದ ವಾಹನ ಬಂದು ಆಗಲೇ ಎರಡು ಗಂಟೆ ಮೇಲಾಗಿರುತ್ತದೆ. ಎಲ್ಲರಿಗೂ ಕಾದೂ ಕಾದೂ ಸಾಕಾಗಿರುತ್ತದೆ.
ಆ ವೇಳೆಗೆ ಇನ್ಸ್ ಪೆಕ್ಟರ್ ರವರು ಸಹಾಯಕ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಅಲ್ಲಿ ಏನು ನಡೆಯುತ್ತಿದೆಯೆಂದು ಕೇಳಿದಾಗ
ಸಾರ್ ಕಿಡ್ನಾಪರ್ ಇಲ್ಲಿಗೆ ಬಂದು ಒಂದು ಗಂಟೆಯಾಗಿದೆ. ಬಹುಷಃ ಹುಡುಗಿಯ ತಂದೆಗೆ ಫೋನ್ ಮಾಡಿ ಹಣ ತರಲು ಹೇಳಿದ್ದಾನೆ ಎನಿಸುತ್ತದೆ. ಅವರು ಇನ್ನೂ ಬಂದಿಲ್ಲವೆಂದು ಹೇಳುವ ವೇಳೆಗೆ
ಆಶಾಳ ತಂದೆಯು ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಸಾರ್ ಕಿಡ್ನಾಪರ್ ಹಣ ತರಲು ಹೇಳಿದ್ದಾನೆ ಈಗ ಏನು ಮಾಡಲಿ ಎಂದು ಆತಂಕದಿಂದ ಕೇಳಿದಾಗ
ನೀವು ಧೈರ್ಯವಾಗಿ ಸೂಟ್ ಕೇಸ್ ತೆಗೆದುಕೊಂಡು ಅವನು ಹೇಳಿದ ಸ್ಥಳಕ್ಕೆ ಬಂದು ಬಿಡಿ ಗುರುಗಳೇ ಎಂದು ಇನ್ಸ್ಪೆಕ್ಟರ್ ಹೇಳಲು
ನನಗೇಕೋ ಭಯವಾಗುತ್ತಿದೆ ಸಾರ್ ಎಂದು ಕೋದಂಡರಾಮ್ ತಮ್ಮ ಅಳಲನ್ನು ತೋಡಿಕೊಂಡಾಗ
ಇನ್ಸ್ಪೆಕ್ಟರ್ ರವರು ನೀವು ಧೈರ್ಯವಾಗಿ ಬನ್ನಿ ಗುರುಗಳೇ ಎನ್ನುತ್ತಾರೆ.
ಆಗಲೀ ಸಾರ್ ಎಂದು ಅಳುಕುತ್ತಲೇ ಸೂಟ್ ಕೇಸ್ ತೆಗೆದುಕೊಂಡು ನಾನಿನ್ನು ಬರುತ್ತೇನೆಂದು ತಮ್ಮ ಪತ್ನಿಗೆ ಹೇಳಿದಾಗ
ರೀ ಏನಾದರೂ ಮಾಡಿ ಮಗಳನ್ನು ಕರೆದುಕೊಂಡು ಬನ್ನಿ ಎಂದು ದುಃಖದಿಂದ ಅವರ ಪತ್ನಿ ಹೇಳಲು
ಇನ್ಸ್ ಪೆಕ್ಟರ್ ಇದ್ದಾರೆ ನಮ್ಮ ಮಗಳಿಗೆ ಏನೂ ಆಗುವುದಿಲ್ಲವೆಂದು ತಮ್ಮ ಪತ್ನಿಗೆ ಕೋದಂಡರಾಂರವರು ಧೈರ್ಯ ಹೇಳಿ ಮನೆಯಿಂದ ಹೊರಗೆ ಬಂದು ಆಟೋ ಹಿಡಿದು ಸೀದಾ ಕಿಡ್ನಾಪರ್ ಹೇಳಿದ್ದ ಸ್ಥಳಕ್ಕೆ ಬರುತ್ತಿದ್ದರೂ ಮನದಲ್ಲಿ ಆತಂಕ ಮಾತ್ರ ತುಂಬಿರುತ್ತದೆ.
ಈ ಕಡೆ ಇನ್ಸ್ ಪೆಕ್ಟರ್ ರವರು ತಮ್ಮ ಸಿಬ್ಬಂದಿಯನ್ನು ನೋಡಿ ಕಣ್ಣು ಸನ್ನೆ ಮಾಡಿದಾಗ
ಇಬ್ಬರು ಸಿಬ್ಬಂದಿಯು ತಕ್ಷಣ ಆಶಾ ಪಕ್ಕದಲ್ಲಿ ನಿಂತಿದ್ದ ರೌಡಿಗೆ ಈ ಕಡೆ ಬಾ ಎಂದು ಕರೆಯುತ್ತಾರೆ
ಆ ರೌಡಿಯು ನಾನು ಈ ಹುಡುಗಿಯನ್ನು ಬಿಟ್ಟು ಬರುವುದಿಲ್ಲವೆನ್ನುತ್ತಾನೆ
ಇನ್ಸ್ ಪೆಕ್ಟರ್ ರವರು ತಮ್ಮ ಜೇಬಿನಿಂದ ಗನ್ ತೆಗೆದು ರೌಡಿಗೆ ಹಿಡಿದು, ಈ ಕಡೆ ಬರುತ್ತೀಯೋ ಇಲ್ಲವೋ ಎಂದು ಹೇಳಲು
ಏಯ್ ನೀವು ಮೋಸಗಾರರೆಂದು ನನಗೆ ಗೊತ್ತಿತ್ತು ಕಣ್ರೋ ಎನ್ನುತ್ತಾ ತನ್ನ ಜೇಬಿನಲ್ಲಿರುವ ಮೊಬೈಲನ್ನು ತೆಗೆಯಲು ಹೋದಾಗ
ಇಬ್ಬರು ಸಿಬ್ಬಂದಿಯು ಆ ರೌಡಿಯನ್ನು ಹಿಡಿಯಲು ಮುದಾಗುತ್ತಾರೆ.
ಆ ರೌಡಿಯು ಆಶಾ ಕುಳಿತಿದ್ದ ಕುರ್ಚಿಯ ಪಕ್ಕಕ್ಕೆ ಹೋಗಿ ಪುನಃ ಡ್ರೈವರ್ ಗೆ ಫೋನ್ ಮಾಡಲು ಪ್ರಯತ್ನಿಸಿದಾಗ
ಇಬ್ಬರು ಸಿಬ್ಬಂದಿಯು ರೌಡಿಯನ್ನು ಜೋರಾಗಿ ತಳ್ಳಿದ ತಕ್ಷಣ
ಮೊಬೈಲ್ ಕೆಳಗೆ ಬೀಳುತ್ತದೆ.
ರೌಡಿಯು ಪುನಃ ಅದನ್ನು ತೆಗೆದುಕೊಳ್ಳುವ ಮೊದಲೇ
ಸಿಬ್ಬಂದಿಯು ಕೆಳಗೆ ಬಿದ್ದಿದ್ದ ಮೊಬೈಲನ್ನು ಕಾಲಿನಿಂದ ಒದೆಯಲು
ಮೊಬೈಲ್ ಇನ್ಸ್ ಪೆಕ್ಟರ್ ರವರ ಬಳಿ ಹೋದ ತಕ್ಷಣ ಇನ್ಸ್ ಪೆಕ್ಟರ್ ಮೊಬೈಲ್ ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡು, ಗನ್ ಮಾತ್ರ ಅವನ ನೇರಕ್ಕೇ ಹಿಡಿದು, ನಾವು ಯಾರೆಂದು ತಿಳಿದಿದ್ದೀಯಾ? ನಾನು ಪೋಲೀಸ್ ಇನ್ಸ್ ಪೆಕ್ಟರ್ ಇವರು ನಮ್ಮ ಸಿಬ್ಬಂದಿ ಈಗ ನಿನ್ನ ಆಟ ಏನೂ ನಡೆಯುವುದಿಲ್ಲವೆಂದು ಹೇಳಿ, ಆಶಾ ಕಡೆ ತಿರುಗಿ ನೀವೇನೂ ಭಯ ಪಡುವುದು ಬೇಡಾ ಇವರಿಂದ ನಿಮ್ಮನ್ನು ರಕ್ಷಿಸಿ ಇವರ ಹೆಡೆಮುರಿ ಕಟ್ಟುತ್ತೇವೆಂದು ಹೇಳಿದಾಗ
ಆಶಾಳಿಗೆ ಧೈರ್ಯ ಬರುತ್ತದೆ, ಸಾರ್ ಮೊದಲು ನನ್ನನ್ನು ಇವರಿಂದ ಬಿಡಿಸಿ ಮನೆಗೆ ಕಳುಹಿಸಿ ಸಾರ್ ಎನ್ನುತ್ತಾಳೆ.
ನಾವುಗಳು ನಿಮ್ಮ ರಕ್ಷಣೆಗೇ ಬಂದಿರುವುದು, ನಿಮ್ಮನ್ನು ಸೇಫಾಗಿ ನಿಮ್ಮ ಮನೆಗೆ ತಲುಪಿಸುತ್ತೇವೆಂದು ಇನ್ಸ್ ಪೆಕ್ಟರ್ ಹೇಳಿ, ಇವನನ್ವು ಕರೆದುಕೊಂಡು ಬಂದು ವಾಹನದಲ್ಲಿ ಕೂಡಿಸಿ ಎಂದಾಗ
ಒಬ್ಬ ಸಿಬ್ಬಂದಿಯು ಆಶಾಳನ್ನು ಬಿಡಿಸಿದ ನಂತರ ಇಬ್ಬರು ಸಿಬ್ಬಂದಿಯು ರೌಡಿಯನ್ನು ನಡೆಯೋ ಎಂದು ಎಳೆದುಕೊಂಡು ಹೋಗಿ ವಾಹನದಲ್ಲಿ ಕೂಡಿಸುತ್ತಾರೆ.
ಆಶಾ ತನ್ನ ಕೈ ಕೊಡವಿಕೊಂಡು
ತುಂಬಾ ಥ್ಯಾಂಕ್ಸ್ ಸಾರ್ ನೀವು ಬರದೇ ಇದ್ದಿದ್ದರೆ ನನ್ನನ್ನು ಏನು ಮಾಡುತ್ತಿದ್ದರೋ ಈ ಪಾಪಿಗಳು ಎನ್ನುತ್ತಾಳೆ.
ಇವರು ಯಾರೆಂದು ಪತ್ತೆ ಹಚ್ಚಿ ಇವರಿಗೆ ಶಿಕ್ಷೆ ಕೊಡಿಸುತ್ತೇನೆಂದು ಇನ್ಲ್ ಪೆಕ್ಟರ್ ಹೇಳಿದಾಗ
ಸಾರ್ ನನಗೆ ನಿಮ್ಮಿಂದ ಪುನರ್ ಜನ್ಮವಾಯ್ತು, ನನ್ನಪ್ಪ ಅಮ್ಮ ಸೇಫಾಗಿದ್ದಾರಾ ಎಂದು ಆಶಾ ಕೇಳಲು
ಅವರಿಗೂ ಏನೂ ಆಗದಂತೆ ವ್ಯವಸ್ಥೆ ಮಾಡಿದ್ಜೇವೆಂದು ಹೇಳಿ ಇನ್ಸ್ ಪೆಕ್ಟರ್ ರವರು ವಾಹನದಲ್ಲಿ ಕುಳಿತುಕೊಂಡ ತಕ್ಷಣ
ಆಶಾ ಕೂಡಾ ವಾಹನದಲ್ಲಿ ಕುಳಿತುಕೊಳ್ಳುತ್ತಾಳೆ.
ಡ್ಪೈವರ್ ಗೆ ಕೋದಂಡರಾಮ್ ರವರ ಮನೆಯ ವಿಳಾಸದ ಲೊಕೇಶನ್ ಕಳುಹಿಸಿದ ನಂತರ
ಡ್ರೈವರ್ ಕೋದಂಡರಾಂ ರವರ ಮನೆಯ ಕಡೆಗೆ ವಾಹನ ಚಲಾಯಿಸುತ್ತಿದ್ದು,
ಇನ್ಸ್ ಪೆಕ್ಟರ್ ರವರು ಸಹಾಯಕ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಕಿಡ್ನಾಪರ್ ವಶದಲ್ಲಿದ್ದ ಹುಡುಗಿಯನ್ನು ರಕ್ಷಿಸಿ ನಮ್ಮ ವಾಹನದಲ್ಲಿ ಕೂಡಿಸಿಕೊಂಡಿದ್ದೇವೆ, ಅವರನ್ನು ಮನೆಗೆ ಬಿಟ್ಟು ಬರುವುದರೊಳಗೆ ನೀವುಗಳು ಧೈರ್ಯವಾಗಿ ಮುನ್ನುಗ್ಗಿ ಕಿಡ್ನಾಪರ್ ಗೆ ತಿಳಿಯದಂತೆ ಅವನನ್ನು ಸುತ್ತುವರಿದು ಹಿಡಿದು ಎಳೆದುಕೊಂಡು ಬನ್ನಿ ಎಂದು ಹೇಳಿದಾಗ
ಸಹಾಯಕ ಇನ್ಸ್ಪೆಕ್ಟರ್ ಯಸ್ ಸಾರ್ ಎಂದು ಹೇಳಿದ ತಕ್ಷಣ
ಇನ್ಸ್ಪೆಕ್ಟರ್ ರವರು ಕೋದಂಡರಾಂ ರವರಿಗೆ ಫೋನ್ ಮಾಡಿ, ಗುರುಗಳೇ ನೀವು ಮನೆಗೆ ವಾಪಸ್ ಬನ್ನಿ ಎನ್ನುತ್ತಾರೆ
ಕೋದಂಡರಾಂ ರವರಿಗೆ ಗಾಬರಿಯಾಗಿ ಸಾರ್ ನಾನು ಕಿಡ್ನಾಪರ್ ಬಳಿ ಹೋಗದಿದ್ದರೆ ನಮ್ಮ ಮಗಳನ್ನು ಅವನು ಬಿಡುವುದಿಲ್ಲ, ನಮ್ಮ ಮಗಳ ಗತಿ ಎಂದು ಆತಂಕದಿಂದ ಕೋದಂಡರಾಂ ಕೇಳಿದಾಗ,
ನೀವು ಮನೆಗೆ ಬರುವುದರೊಳಗೆ ನಿಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿರುತ್ತೇವೆಂದು ಇನ್ಲ್ ಪೆಕ್ಟರ್ ಹೇಳಿದಾಗ
ತುಂಬಾ ಥ್ಯಾಂಕ್ಸ್ ಸಾರ್ ಎಂಬ ಕೋದಂಡರಾಮ್ ಮಾತಿಗೆ
ಗುರುಗಳೇ ಇದು ನಿಮ್ಮ ಶಿಷ್ಯನ ಸಾಹಸವೆಂದಾಗ
ಐ ಆಮ್ ವೆರಿ ವೆರಿ ಪ್ರೌಡ್ ಆಫ್ ಯು ಸರ್ ಎಂದು ಹೇಳಿ, ಆಟೋ ಡ್ರೈವರ್ ಗೆ ಮನೆಯ ವಿಳಾಸ ಹೇಳಿ ವಾಪಸ್ ನಡಿ ಎನ್ನುತ್ತಾರೆ.
ಮುಂದುವರೆಯುತ್ತದೆ
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ
ಯಾರಾದರೂ ಅತೀ ಸಂಕಷ್ಟದಲ್ಲಿದ್ದಾಗ, ನಾನು ನಿಮ್ಮ ಜೊತೆ ಇರುತ್ತೇನೆಂದು ಬೆಂಬಲವನ್ನು ಕೊಡುತ್ತಾರೆಂದರೆ, ಸಂಕಷ್ಟದಲ್ಲಿರುವವರಿಗೆ ಆನೆ ಬಲ ಬಂದಂತಾಗುತ್ತದೆ. ಸಹಾಯ ಮಾಡಿದ ನಂತರ ಅವರಿಂದ ಪ್ರತಿಫಲಾಪೇಕ್ಷೆಯನ್ನು ಪಡೆಯದೇ ಇರುವವನು ದೊಡ್ಡ ಮನುಷ್ಯನಾಗುತ್ತಾನೆ. ನಿನಗೆ ಸಹಾಯ ಮಾಡಿದ್ದೇನೆಂದು ಹೇಳಿ ಅವರಿಂದ ಲಾಭ ಪಡೆಯುವವನು ಲೋಭಿಯಾಗುತ್ತಾನೆ.