ಅಭಿಲಾಷೆ ಕಾದಂಬರಿ ಸಂಚಿಕೆ -27
ಹಿಂದಿನ ಸಂಚಿಕೆಯಲ್ಲಿ
ವಿಕ್ರಮ್ ತಂದೆಯ ಸಾಲ ತೀರಿಸಲು ಒಂದು ಕೋಟಿ ರೂಪಾಯಿ ಕೊಡು ಇಲ್ಲದಿದ್ದರೆ ಆಸ್ತಿಯಲ್ಲಿ ಪಾಲುಕೊಡೆಂದು ಆಶಾ ತನ್ನ ತಂದೆಯನ್ನು ಕೇಳಿರುತ್ತಾಳೆ
ಕಥೆಯನ್ನು ಮುಂದುವರೆಸುತ್ತಾ
ಮಗಳು ವಿಕ್ರಮ್ ತಂದೆಗೆ ಒಂದು ಕೋಟಿ ರೂಪಾಯಿ ಕೊಡು ಅಥವಾ ಆಸ್ತಿಯಲ್ಲಿ ಪಾಲು ಕೊಡೆಂದು ಕೇಳಿದ್ದರಿಂದ ಕೋದಂಡರಾಂಗೆ ಆಘಾತವಾಗಿ, ಮಗಳು ಅರ್ಧಕ್ಕೆ ಊಟ ಬಿಟ್ಟು ಹೋಗಿದ್ದರಿಂದ ತಾವೂ ಕೂಡಾ ಪೂರ್ತಿ ಊಟ ಮಾಡದೆ ಕೈ ತೊಳೆದು ಭುಜದ ಮೇಲಿದ್ದ ಟವಲಿನಿಂದ ಕೈ ಒರೆಸಿಕೊಳ್ಳುತ್ತಾ,
ಪತ್ನಿಯಿದ್ದ ಅಡಿಗೆ ಮನೆಗೆ ಬಂದು ಮಗಳ ಮಾತು ಕೇಳಿದ್ಯಾ ಎಂದು ಪ್ರಶ್ನಿಸಲು
ಕೇಳಿದೇ ಹೊಟ್ಟೆಗೆ ಹಾಲು ಹೊಯ್ದುಕೊಳ್ಶುವಂತಾಯ್ತೂ ರೀ, ಅದು ಏಕೆ ಹಾಗೆ ಆಡುತ್ತಿದ್ದಾಳೋ ದೇವರಿಗೆ ಗೊತ್ತೆಂದು ಅವರ ಪತ್ನಿ ನುಡಿಯಲು,
ಅವಳು ಪ್ರೀತಿಯೆಂಬ ನಶೆಯಲ್ಲಿ ತೇಲಾಡುತ್ತಿದ್ದಾಳೆ. ಆ ನಶೆ ಇಳಿದರೆ ವಾಸ್ತವಕ್ಕೆ ಬರುತ್ತಾಳೆಂದು ಕೋದಂಡರಾಂ ಹೇಳಲು.
ಅವಳ ಪ್ರೀತಿಯ ನಶೆ ಇಳಿಯುವ ಹೊತ್ತಿಗೆ ಏನೇನು ಅನಾಹುತಗಳು ಆಗುತ್ತದೆಯೋ ಎಂದು ನನಗಂತೂ ತುಂಬಾ ಭಯವಾಗುತ್ತಿದೆ ಎಂದು ಅವರ ಪತ್ನಿ ಆತಂಕವನ್ನು ವ್ಯಕ್ತಪಡಿಸಿದಾಗ
ಅವನು ಪ್ರೀತಿಯೆಂಬ ಹೆಸರಲ್ಲಿ ಇವಳ ಬ್ರೈನ್ ವಾಶ್ ಮಾಡಿಬಿಟ್ಟಿದ್ದಾನೆ ಏನು ಮಾಡೋದು?
ನನ್ನ ಮಗಳ ತಂಟೆಗೆ ಬರಬೇಡವೆಂದು ಅವನಿಗೆ ಸರಿಯಾಗಿ ಹೇಳಬೇಕು, ಇಲ್ಲದಿದ್ದರೆ ವಿಕೋಪಕ್ಕೆ ಹೋಗಬಹುದೆಂದು ಕೋದಂಡರಾಂ ಹೇಳಲು
ರೀ ಒಂದು ಕೆಲಸ ಮಾಡಿ,ಅದೇ ನಿಮ್ಮ ಶಿಷ್ಯ ಇನ್ಸ್ಪೆಕ್ಟರ್ ಇದ್ದಾರಲ್ಲಾ ಅವರಿಗೆ ವಿಷಯ ತಿಳಿಸಿ, ಆ ಹುಡುಗನಿಗೆ ಬುದ್ದಿ ಹೇಳಿಸಿ, ಪುನಃ ನಮ್ಮ ಮಗಳ ತಂಟೆಗೆ ಬರದಂತೆ ಎಚ್ಚರಿಕೆ ಕೊಡಿಸ್ರೀ ಎಂದು ಅವರ ಪತ್ನಿ ಹೇಳಲು
ಮಕ್ಕಳು ಮೆಜಾರಿಟಿಗೆ ಬಂದಿದ್ದಾರೆ, ಅವರೂ ಕೂಡಾ ಏನೂ ಮಾಡುವುದಕ್ಕಾಗುವುದಿಲ್ಲ ವೆಂದು ಕೋದಂಡರಾಂ ಹೇಳಿದಾಗ
ಒಂದು ಮಾತು ತಿಳಿಸುವುದಕ್ಕೇನು ಗಂಟು ಕಳೆದುಕೊಳ್ಳುತ್ತೀರಾ? ಇನ್ಸ್ ಪೆಕ್ಟರ್ ಎಚ್ಚರಿಕೆ ಕೊಟ್ಟರೆ ಸ್ವಲ್ಪವಾದರೂ ಹೆದರಿಕೆ ಬರುತ್ತದೆಂದು ಅವರ ಪತ್ನಿಯ ಮಾತಿಗೆ
ನಿನ್ನ ಆಸೆ ಏತಕ್ಕೆ ರಿಜೆಕ್ಟ್ ಮಾಡಲಿ? ಒಂದು ಸಲ ಹೇಳಿನೋಡುತ್ತೇನೆ ಎನ್ನುತ್ತಾರೆ.
ಮಾರನೇ ದಿನ ಕೋದಂಡರಾಮ್ ರವರು ಪೋಲೀಸ್ ಇನ್ಸ್ಪೆಕ್ಟರ್ ಗೆ ಫೋನ್ ಮಾಡಿ ತಮ್ಮ ಮಗಳ ವಿಷಯ ತಿಳಿಸಿ, ಏನಾದರೂ ಮಾಡಿ ಆ ಹುಡುಗನು ನಮ್ಮ ಮಗಳ ತಂಟೆಗೆ ಬರದಂತೆ ಎಚ್ಚರಿಕೆ ಕೊಡಬೇಕೆಂದು ಹೇಳಿದಾಗ
ಗುರುಗಳೇ ನಾನೂ ಇದರಲ್ಲಿ ಅಸಹಾಯಕ, ಅವರಿಬ್ಬರೂ ಮೆಜಾರಿಟಿಗೆ ಬಂದಿದ್ದಾರೆ, ನಾವಿಬ್ಬರೂ ಲವ್ ಮಾಡುತ್ತಿದ್ದೇವೆ ನಾಳೆ ಮದುವೆಯಾಗುತ್ತೇವೆಂದರೆ ನಾನು ಏನೂ ಮಾಡುವುದಕ್ಕೆ ಆಗುವುದಿಲ್ಲವೆಂದು ಇನ್ಸ್ಪೆಕ್ಟರ್ ತಮ್ಮ ಅಸಹಾಯಕತೆಯ ಮಾತಿಗೆ,
ಅದು ನನಗೂ ಗೊತ್ತು ಇನ್ಸ್ ಪೆಕ್ಟರ್ , ಸುಮ್ಮನೆ ಎಚ್ಚರಿಕೆ ಕೊಡಿ, ನೋಡೋಣವೆಂದು ಕೋದಂಡರಾಂ ಹೇಳಲು
ಏಕೆ ಗುರುಗಳೇ ಆ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ನಿಮಗೆ ಇಷ್ಟವಿಲ್ಲವಾ ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದಾಗ
ನಾನು ಒಪ್ಪಿದ್ದೆ ಆದರೆ ಆ ಹುಡುಗನ ಮನೆಯವರಿಗೆ ಕೋಟ್ಯಾಂತರ ರೂಪಾಯಿ ಸಾಲವಿದೆಯಂತೆ, ನನ್ನ ಮಗಳು ಅವರ ಮನೆ ಸೊಸೆಯಾದರೆ ಅವಳೂ ಸಾಲದ ಶೂಲಕ್ಕೆ ಸಿಲುಕುತ್ತಾಳೆಂಬ ಭಯ ಇನ್ಸ್ಪೆಕ್ಟರ್ ಎಂಬ ಕೋದಂಡರಾಂ ಮಾತಿಗೆ
ನಿಮ್ಮ ಮಾತು ನಿಜ ಗುರುಗಳೇ, ಗುರುಗಳಿಗೆ ಸಹಾಯ ಮಾಡುವುದಕ್ಕಾಗುವುದಿಲ್ಲವೆಂದು ಹೇಳಲು ಆಗುವುದಿಲ್ಲ. ಪ್ರಯತ್ನಿಸುತ್ತೇನೆ, ಅವರ ಮೊಬೈಲ್ ನಂಬರ್ ಕೊಡಿ ಗುರುಗಳೇ ಎಂದು ಇನ್ಸ್ಪೆಕ್ಟರ್ ಕೇಳಲು
ನನ್ನ ಮಗಳ ಬಳಿ ಫೋನ್ ನಂಬರ್ ಇದೆ ಅವಳಿಂದ ಪಡೆದು ಕೊಡುತ್ತೇನೆಂದು ಕೋದಂಡರಾಂ ಹೇಳಿದ ನಂತರ
ಆದಷ್ಟೂ ಬೇಗ ಕೊಟ್ಟರೆ ಅವರ ಜೊತೆ ಮಾತನಾಡುತ್ತೇನೆಂದು ಇನ್ಸ್ಪೆಕ್ಟರ್ ಹೇಳುತ್ತಾರೆ
ಒಟ್ಟಿನಲ್ಲಿ ನನ್ನ ಮಗಳ ತಂಟೆಗೆ ಬರದಂತೆ ಮಾಡಿದರೆ ಸಾಕೆಂದು ಕೋದಂಡರಾಂ ರವರ ಮಾತಿಗೆ
ಆಯ್ತು ಗುರುಗಳೇ ಎನ್ನುತ್ತಾ ಇನ್ಸ್ಪೆಕ್ಟರ್ ರವರು ಫೋನ್ ಆಫ್ ಮಾಡುತ್ತಾರೆ.
ಮಾರನೇ ದಿನ ರಾತ್ರಿ ಹತ್ತು ಗಂಟೆಗೆ ವಿಕ್ರಮ್ ಆಶಾಳಿಗೆ ಫೋನ್ ಮಾಡಿ, ಅಂಕಲ್ ಹಣ ಕೊಡಲು ಒಪ್ಪಿದ್ರಾ ಎಂಬ ಪ್ರಶ್ನೆಗೆ
ಇಲ್ಲಾ ವಿಕ್ರಮ್ ಅವರು ಹಣ ಕೊಡುವುದಿರಲಿ ನನ್ನ ನಿನ್ನ ಮದುವೆಗೂ ಒಪ್ಪುವುದಿಲ್ಲವಂತೆ ಎಂದು ಆಶಾಳ ಮಾತಿಗೆ
ವಿಕ್ರಮ್ ಬೆಚ್ಚಿ ಬಿದ್ದಂತವನಾಗಿ, ಹ್ಞಾಂ ಏನಂದೆ? ನಿಮ್ಮಪ್ಪ ನಮ್ಮ ಮದುವೆಗೆ ಒಪ್ಪುವುದಿಲ್ಲವಂತಾ ಎಂದು ಆವೇಶದಿಂದ ಪ್ರಶ್ನಿಸಲು
ಇಲ್ಲಾ ವಿಕ್ರಮ್, ನೀವು ಸಾಲಗಾರರಂತೆ ನಿಮಗೆ ಮಗಳನ್ನು ಕೊಟ್ಟರೆ ನಾನೂ ಸಾಲಗಾರಳಾಗುತ್ತೇನೆಂದು ಹೇಳಿದ್ದಾರೆ ಎಂದು ಆಶಾ ಹೇಳಿದ ಮಾತಿಗೆ
ಓ ಮೈ ಗಾಡ್ ಹಾಗಾದರೆ ನನ್ನ ಗತಿ ಏನೆಂದು ವಿಕ್ರಮ್ ಪ್ರಶ್ನಿಸಲು
ನಮ್ಮಪ್ಪ ಹೇಳಿದರೆ ನಾನು ಕೇಳುವುದಿಲ್ಲ. ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲವೆಂದು ಆಶ ಹೇಳುತ್ತಾಳೆ
ಥ್ಯಾಂಕ್ಸ್ ಆಶಾ ಡಿಯರ್ ಹೇಗೋ ಸಾಲ ತೀರಿಸಿ ನಿಮ್ಮಪ್ಪನ ಮುಂದೆ ಬಂದು ನಿಂತು ನಮ್ಮ ಸಾಲವೆಲ್ಲವೂ ತೀರಿದೆ, ನಮಗೆ ಇಪ್ಪತ್ತೈದು ಕೋಟಿ ಬಂದಿದೆ ನಾವೇ ಈಗ ಕೋಟ್ಯಾದೀಶ್ವರರಾಗಿದ್ದೇವೆ ನಿಮ್ಮ ಮಗಳನ್ಮು ಕೊಟ್ಟು ಮದುವೆ ಮಾಡಿರೆಂದು ಕೇಳುತ್ತೇನೆಂದು ವಿಕ್ರಮ್ ಹೇಳಲು
ಆದಷ್ಟೂ ಬೇಗ ಅರೇಂಜ್ ಮಾಡು ಇಲ್ಲದಿದ್ದರೆ ಬೇರೆಯವರಿಗೆ ನನ್ನನ್ನು ಕೊಟ್ಟು ಮದುವೆ ಮಾಡಿ ಬಿಡುತ್ತಾರೆಂದು ಆಶಾ ಹೇಳಲು
ಯಾರಿಗೆ ಕೊಟ್ಟು ಮದುವೆ ಮಾಡುತ್ತಾರಂತೆ? ಅವರು ಎಲ್ಲಿದ್ದಾರೆಂದು ವಿಕ್ರಮ್ ಪ್ರಶ್ನಿಸಿದಾಗ
ಅಪ್ಪನನ್ನು ಕೇಳಿ ಅವರ ವಿಳಾಸ ಕೊಡುತ್ತೇನೆಂದು ಆಶ ಹೇಳಲು
ಆದಷ್ಟೂ ಬೇಗ ವಿಳಾಸ ಕೊಟ್ಟರೆ ನಾನೇ ಅವರ ಬಳಿ ಹೋಗಿ ವಿಷಯ ತಿಳಿಸಿ, ಆಶಾ ನಾನು ತುಂಬಾ ಪ್ರೀತಿಸುತ್ತಿದ್ದೇವೆಂದು ದಯವಿಟ್ಟು ಮದುವೆಗೆ ಒಪ್ಪಬಾರದೆಂದು ಕೇಳುತ್ತೇನೆ ಎಂಬ ವಿಕ್ರಮ್ ಮಾತಿಗೆ
ಅವರ ಮನೆಗೆ ಹೋಗುವುದು ಬೇಡ ನಾನೇ ನಮ್ನಪ್ಪನ ಬಳಿ ಅವರ ಫೋನ್ ನಂಬರ್ ಕೇಳಿ ಪಡೆದು ನಿನಗೆ ಕೊಡುತ್ತೇನೆ ನಂತರ ನೀನೇ ಮಾತನಾಡೆಂದು ಹೇಳುತ್ತಾಳೆ
ಆಗಬಹುದು ಆಶಾ ಎಂದು ವಿಕ್ರಮ್ ಹೇಳಿ ಫೋನ್ ಕಟ್ ಮಾಡುತ್ತಾನೆ
ರಾತ್ರಿ ಒಂಬತ್ತು ಗಂಟೆಗೆ ಪುನಃ ಅಪ್ಪ ಮಗಳು ಮನಸ್ಸಿಲ್ಲದಿದ್ದರೂ ಒಟ್ಟಿಗೆ ಕುಳಿತು ಮೌನವಾಗಿ ಊಟ ಮಾಡುತ್ತಿರುವಾಗ
ಆಶ ಮಾತನಾಡಿ ಅಪ್ಪಾ ನಿನಗೆ ನನ್ನ ಮೇಲೆ ಕೋಪ ಬಂದಿದೆಯೆಂದು ಗೊತ್ತಪ್ಪಾ, ಇರುವ ಒಬ್ಬ ಮಗಳ ಮೇಲೆ ಈ ರೀತಿ ಕೋಪಿಸಿಕೊಂಡರೆ ಮನೆಯಲ್ಲಿ ನಾನು ಹೇಗಿರಲಪ್ಪಾ? ನಾನು ಯಾವುದಾದರೂ ಪಿಜೆಗೆ ಸೇರಿಕೊಂಡು ಬಿಡುತ್ತೇನೆಂದು ಆಶಾ ಹೇಳಲು
ಆಶಾ ನೀನು ನನ್ನ ಮುದ್ದು ಮಗಳು ನಿನ್ನ ಮೇಲೆ ನನಗೆ ಖಂಡಿತಾ ಕೋಪ ಇಲ್ಲಮ್ಮಾ, ನನ್ನ ಮಗಳು ಚೆನ್ನಾಗಿರಲೆಂದು ತಾನೇ ನಾನು ಈ ರೀತಿ ಕಷ್ಟಪಡುತ್ತಿರುವುದು. ನೀನು ಚೆನ್ನಾಗಿದ್ದರೆ ನಾವೂ ಕೂಡಾ ನೆಮ್ಮದಿಯಿಂದ ಇರುತ್ತೇವೆ ಅಲ್ಲವೇನಮ್ಮಾ ಎಂಬ ಅವಳಪ್ಪನ ಮಾತಿಗೆ
ಅಪ್ಪಾ ನನಗೂ ನಿಮ್ಮ ಮನಸ್ಸು ನೋಯಿಸಲು ಇಷ್ಟವಿಲ್ಲಪ್ಪಾ, ನೀವು ಸಮಾಧಾನವಾಗಿರಲು ನಾನು ಏನು ಮಾಡಬೇಕೆಂದು ಆಶಾ ಪ್ರಶ್ನಿಸಲು
ನನಗೆ ಏನೂ ಬೇಡಮ್ಮಾ ಕೋಟಿ ಕೋಟಿ ಸಾಲಗಾರನ ಮರೆತು ನಿನ್ನೆ ಫೋನ್ ಮಾಡಿದವರ ಮಗನನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡರೆ ಸಾಕಮ್ಮಾ ಎಲ್ಲರೂ ನೆಮ್ಮದಿಯಿಂದ ಇರಬಹುದೆಂದು ಕೋದಂಡರಾಂ ಹೇಳಲು
ಅಪ್ಪಾ ನಾನವರ ಬಳಿ ಮಾತನಾಡಬಹುದಾ? ಎಂದು ಆಶಾ ಕೇಳುತ್ತಾಳೆ
ಓ ಅದಕ್ಕೇನಮ್ಮಾ? ಆ ಹುಡುಗನು ನೀನು ಮಾತನಾಡಿ ನಿನ್ನ ಅನುಮಾನ ಏನಿದೆಯೋ ಪರಿಹರಿಸಿಕೊಂಡು ಮದುವೆಗೆ ಒಪ್ಪಿದರೆ ಸಾಕೆಂದು ಅವಳಪ್ಪ ನುಡಿಯಲು
ಅಪ್ಪಾ ಅವರ ಫೋನ್ ನಂಬರ್ ಕೊಡಪ್ಪಾ ಊಟ ಮಾಡಿದ ತಕ್ಷಣ ಫೋನ್ ಮಾಡುತ್ತೇನೆ ಎಂದು ಆಶಾ ಹೇಳಲು.
ನನ್ನ ಮೊಬೈಲಿನಲ್ಲಿ ಆ ಹುಡುಗನ ಮೊಬೈಲ್ ನಂಬರ್ ಇದೆ ಊಟವಾದ ನಂತರ ತೆಗೆದುಕೊಂಡು ನೀನೇ ಮಾತನಾಡಮ್ಮಾ ಎಂದು ಕೋದಂಡರಾಮ್ ಹೇಳುತ್ತಾರೆ
ಆಗಲಪ್ಪಾ ಎಂದು ಆಶಾ ಹೇಳಿ ಸಮಾಧಾನದಿಂದ ಊಟಮಾಡಿ ಅಪ್ಪನ ಮೊಬೈಲಿನಲ್ಲಿದ್ದ ಹುಡುಗನ ನಂಬರ್ ತೆಗೆದುಕೊಂಡು ಮೊಬೈಲ್ ಅಲ್ಲೇ ಇಡುತ್ತಾಳೆ.
ಮಗಳ ನಡೆಯಿಂದ ಕೋದಂಡರಾಂ ರವರಿಗೆ ಮನಸ್ಸಿಗೆ ಸಮಾಧಾನ ವಾಗಿದ್ದು, ಅವರೂ ಕೂಡಾ ಊಟ ಮಾಡಿ ಕೈ ತೊಳೆದು ಆ ಹುಡುಗನ ಹೆಸರು ಅಭಿಜಿತ್ ಕಣಮ್ಮಾ ಅವರ ನಂಬರ್ ಸಿಕ್ಕಿತೇನಮ್ಮಾ ಎಂದು ಕೋದಂಡರಾಂ ಪ್ರಶ್ನಿಸಲು
ಹ್ಞೂಂ ಕಣಪ್ಪಾ ಸಿಕ್ಕಿತು ಸ್ವಲ್ಪ ಹೊತ್ತಿನ ನಂತರ ಫೋನ್ ಮಾಡುತ್ತೇನೆಂದು ಹೇಳುತ್ತಿರುವಾಗ
ಅವಳಮ್ಮನು ಆಶಾ ಆಶಾ ಬಾ ಇಲ್ಲಿ ಎಂದು ಅವಳಮ್ಮ ಕರೆದಾಗ
ಬಂದೇ ಕಣಮ್ಮಾ ಎಂದು ಹೇಳಿ ತನ್ನ ಮೊಬೈಲನ್ನು ಅಲ್ಲೇ ಬಿಟ್ಟು ಅಡಿಗೆ ಮನೆಗೆ ಹೋದ ತಕ್ಷಣ
ಆಶಾಳ ಮೊಬೈಲ್ ರಿಂಗ್ ಆಗುತ್ತದೆ. ಕೋದಂಡರಾಂ ರವರು ಯಾರ ನಂಬರೆಂದು ನೋಡಲು ಅದರಲ್ಲಿ ವಿಕ್ರಮ್ ಡಾರ್ಲಿಂಗ್ ಎಂದಿರುತ್ತದೆ. ತಕ್ಷಣ ಆ ನಂಬರನ್ನು ಪೇಪರಿನಲ್ಲಿ ಬರೆದುಕೊಂಡು ಮಗಳೇ ನಿನಗೆ ಯಾವುದೋ ಫೋನ್ ಬಂದಿದೆ ನೋಡಮ್ಮಾ ಎಂದು ಹೇಳಲು
ಬಂದೆ ಕಣಪ್ಪಾ ಎನ್ನುತ್ತಾ ಅಡಿಗೆ ಮನೆಯಿಂದ ಬಂದು ಮೊಬೈಲ್ ನೋಡಿದಾಗ ವಿಕ್ರಮ್ ಫೋನ್ ಮಾಡಿದ್ದಾನೆ ಎಂದುಕೊಳ್ಳುತ್ತಾ ಛೇ ಈಗೇಕೆ ಫೋನ್ ಮಾಡಿದ ಎಂದುಕೊಂಡು ಅಪ್ಪನಿಗೆ ಅನುಮಾನ ಬರದಿರಲೆಂದು ವಿಕ್ರಮ್ ಗೆ ಫೋನ್ ಮಾಡದೆ ಅಲ್ಲೇ ಕುಳಿತುಕೊಂಡು ಬೇರೆ ವಿಚಾರಗಳನ್ನು ಮಾತನಾಡುತ್ತಾ ನಂತರ ರೂಮಿಗೆ ಹೋಗಿ, ಆರ್ಮಿ ಹುಡುಗನ ನಂಬರನ್ನು ವಿಕ್ರಮ್ ಗೆ ಕೊಡುತ್ತಾಳೆ.
ಈ ಕಡೆ ಮಗಳ ಮೊಬೈಲಿನಿಂದ ಪಡೆದಿದ್ದ ವಿಕ್ರಮ್ ನಂಬರನ್ನು ಇನ್ಸ್ ಪೆಕ್ಟರ್ ಗೆ ಕೋದಂಡರಾಮ್ ಕೊಟ್ಚು ಸ್ವಲ್ಪ ಸರಿಯಾಗಿ ಎಚ್ಚರಿಕೆ ನೀಡುವಂತೆ ಹೇಳುತ್ತಾರೆ
ಮುಂದುವರೆಯುತ್ತದೆ
ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ –
ಹಠ ಮಾಡುತ್ತಿರುವವರು ಏಕ್ ದಂ ಮೃದುವಾದ ತಕ್ಷಣ ಅವರನ್ನು ನಂಬಬಾರದು. ಅವರು ಯಾವುದೋ ಒಳಸಂಚು ಇಟ್ಟುಕೊಂಡೇ ನಯವಾಗಿ ವರ್ತಿಸಲು ಶುರು ಮಾಡುತ್ತಾರೆ. ಊಸರವಳ್ಳಿಯಂತೆ ಬಣ್ಣ ಬದಲಿಸಿ ಮೋಸ ಮಾಡಬಹುದಲ್ಲವೇ?