ಹಾಸ್ಟೆಲ್ ನ ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು
ಹಾಸನ : ಹಾಸನ ಜಿಲ್ಲೆ ತಾಲೂಕಿನ ಗುಡ್ಡೇನಹಳ್ಳಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೌನೇಶ. ಜೆಕೆ. ಕರಕಿಹಳ್ಳಿಯ ವಿದ್ಯಾರ್ಥಿಯು ಹಾಸ್ಟೆಲ್ ನಲ್ಲಿ ಇದ್ದುಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಈ ವಿದ್ಯಾರ್ಥಿಯು “ಬದುಕು ಭರವಸೆ ” ಪುಸ್ತಕ ಬರೆದು ಇಡೀ ಕರ್ನಾಟಕಕ್ಕೆ ತನ್ನ ಸಾಹಿತ್ಯ ಸಾಧನೆಯನ್ನು ಗುರುತಿಸಿಕೊಂಡಿರುವ ವಿದ್ಯಾರ್ಥಿ ಮೌನೇಶ್ ರವರು. ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎಂಬಂತೆ ಗುರು ಇಲ್ಲದೇನೆ.. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಈ ಸಾಧಕನಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಇವರು ರಾಜ್ಯ ಮಟ್ಟದಿಂದ ಇಡಿದು ರಾಷ್ಟ್ರ ಮಟ್ಟದವರೆಗೂ ಇವರ ಹೆಸರು ಓಡಾಡುತ್ತಿದೇ… ಕನ್ನಡದ ಕೀರ್ತಿ ನಾಡಿನ ತುಂಬಾ ಪಸರಿಸಿರುವ ಎಳೆ ವಯಸ್ಸಿನ ಯುವ ಸಾಹಿತಿ…. ಸಕಲಕಲವಲ್ಲಭ ಇಂದೇ ಹೆಸರುವಾಸಿ ಆದ ಇವರು ಸಾಹಿತ್ಯದಲ್ಲಿ “ಸಾಹಿತ್ಯ ಶಿರೋಮಣಿ ರಾಷ್ಟ್ರಮಟ್ಟದ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ರಾಷ್ಟ್ರಮಟ್ಟದ ಪ್ರಶಸ್ತಿ, ಯುವಜ್ಞಾನ ಶ್ರೀ ರಾಷ್ಟ್ರಮಟ್ಟದ ಪ್ರಶಸ್ತಿ, ದೊರೆತಿದೆ.. ರಾಜ್ಯ ಮಟ್ಟದಿಂದ ಪುನೀತ್ ಪ್ರಶಸ್ತಿ, ಕರ್ನಾಟಕ ಕಣ್ಮಣಿ, ಕನ್ನಡ ವಿಭೂಷಣ, ಕರುನಾಡ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ.. ಇನ್ನು ಹೆಚ್ಚು ಪ್ರಶಸ್ತಿಗಳು ಬಂದಿದಾವೆ . ಈ ಸಾಧಕನ ಸಾಧನೆಗೆ ಹಾಸನದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ. ಮನುಕುಮಾರ್. ಎಚ್. ಎಂ ಅಧಿಕಾರಿಗಳು ಈ ವಿದ್ಯಾರ್ಥಿಯ ಹಾಸ್ಟೆಲ್ ನಲ್ಲಿ ಮಾಡಿದ ಸಾಧನೆಯನ್ನು ಮೆಚ್ಚಿ ಸಂತೋಷವನ್ನು ವ್ಯೆಕ್ತ ಪಡಿಸಿದ್ದಾರೆ… ಈ ಸಾಧಕನ ಸಾಧನೆಗೆ ಹಾಸ್ಟೆಲ್ ನಲ್ಲಿ ಬಂದು ಅದ್ಭುತವಾದ ಸಾಧನೆ ನಿಂದು ಈ ಸಾಧನೆ ಎಲ್ಲರನ್ನು ಮೆಚ್ಚುವಂತಹದು ಮತ್ತು ನಮ್ಮ ಹಾಸ್ಟೆಲ್ ನಲ್ಲಿ ಒಂದು ಅದ್ಭುತವಾದ ಪ್ರತಿಭೆ ಹುಟ್ಟಿದೆ, ಈ ಪ್ರತಿಭೆಯನ್ನು ನಾವು ಗೌರವಿಸಿ, ಇನ್ನು ಎತ್ತರಕ್ಕೆ ಕರೆದುಕ್ಕೊಂಡು ಹೋಗಲು ನಾವೆಲ್ಲರೂ ಜೊತೆಗೆ ಇರುತ್ತೇವೆ…. ಎಂದು ಭರವಸೆ ನೀಡಿದರು ಎಲ್ಲ ವಿದ್ಯಾರ್ಥಿಯ ಅರೋಗ್ಯ ಕ್ಷೆಮ ಮತ್ತು ಓದುವ ಪ್ರತಿಯೊಂದು ವಿದ್ಯಾರ್ಥಿಯ ಸಲಹೆಗಾರರಾಗಿ ಪ್ರತಿಯೊಂದರಲ್ಲೂ ಸಾಧಕರಿಗೆ ಪ್ರಶಂಸೆ ನೀಡುವರು. ಅದೇ ರೀತಿಯಾಗಿ ಮೌನೇಶ್. ಜೆಕೆ. ಸಾಧಕನಿಗೆ ಸಾಧನೆಯನ್ನು ಮೆಚ್ಚಿ ಈ ಹಾಸನದ ಎಲ್ಲ ವಸತಿ ನಿಲಯಗಳಿಗೆ ಮಾದರಿ ನೀನು ಎಂದು ಮಾತನಾಡಿದರು…… ಮೌನೇಶ್. ಜೆಕೆ ಅವರು ಬರೆದಿರುವ ಬದುಕು ಭರವಸೆ ಪುಸ್ತಕವನ್ನು ಪಡೆದು…. ಈ ಸಾಧನೆ ಇಡೀ ಜಗತ್ತು ಕೊಂಡಾಡುವಂತಾಗಲಿ ಎಂದು ಹರ್ಷ ವ್ಯೆಕ್ತಪಡಿಸಿದರು.. ಇದರ ಜೊತೆಗೆ ವಸತಿ ನಿಲಯದ ಪಾಲಕರಾದ ವೆಂಕಟೇಶ್ ಸರ್, ಶಿವಾನಂದ ಬಿರಾದಾರ್ ಸರ್, ದೇವೇಗೌಡ ಸರ್ ಆನಂದ ಪ್ರಕಾಶ್ ಸರ್ ಯೋಗರಾಜ ಸರ್ ಎಲ್ಲ ನಿಲಯದ ಪಾಲಕರು ಜೊತೆಗಿದ್ದರು………..