ಹಿಂದ್ ಸ್ವರಾಜ್ – ಡಾ. ಎನ್. ದೇವರಾಜ್

ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾದ ಗುಜರಾತಿನ ಪೋರಬಂದರನಿಂದ ಹಿಡಿದು ದೆಹಲಿಯ ಬಿರ್ಲಾ ಭವನದ ವರೆಗೆ ಅವರ ಜೀವನದ ಪ್ರತಿಯೊಂದು ಕ್ಷಣಗಳು ವಿಶ್ವಕ್ಕೆ ತೆರೆದಿಟ್ಟ ಪುಸ್ತಕದಂತಿವೆ. ಅವರು ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಮಂಡಿಸಿರುವ ವಿಷಯಗಳ ಕುರಿತು ವಿವಿಧ ಲೇಖಕರು ವಿಶ್ಲೇಷಿಸಿರುವ ಪ್ರಮುಖ 10 ಲೇಖನಗಳು ಈ ಕೃತಿಯಲ್ಲಿವೆ.

ಹಿಂದ್ ಸ್ವರಾಜ್ ಕೃತಿಯ ಕನ್ನಡ ಅನುವಾದಕರಾದ ಡಾ. ಎನ್. ದೇವರಾಜ್ ಅವರ ಸಾಹಿತ್ಯಿಕ ಕಾರ್ಯ ವರ್ಣನಾತೀತವಾಗಿದೆ. ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರ್ವಧರ್ಮ ಸಮನ್ವಯ, ಸತ್ಯಾಗ್ರಹ, ಸ್ವಾತಂತ್ರ್ಯ, ಸರ್ವೋದಯ ಮತ್ತು ರಾಮರಾಜ್ಯ ಕಲ್ಪನೆ ಮುಂತಾದ ಚಿಂತನೆಗಳ ಕುರಿತು ಲೇಖನಗಳಲ್ಲಿ ನಿಷ್ಕಲ್ಮಶವಾಗಿ ಚರ್ಚಿಸಲಾಗಿದೆ. ವ್ಯಕ್ತಿ ನೈತಿಕತೆ ಮೌಲ್ಯಗಳೆಲ್ಲ ಅದಃಪತನಗೊಂಡು ಹಿಂಸಾವಾದ, ಅಸಹಿಷ್ಣುತೆ ಭಾವಗಳು ಜಗತ್ತಿನಲ್ಲಿ ರಾಕ್ಷಸವಾಗಿ ಬೆಳೆದು ಗ್ರಾಮಸ್ವರಾಜ್ಯ ಕಲ್ಪನೆ ಕೂಡ ಜಾಗತೀಕರಣ, ಖಾಸಗೀಕರಣದಿಂದಾಗಿ ಕೊಚ್ಚಿಹೋಯಿತು. ಅಲ್ಲಲ್ಲಿ ಚಿಕ್ಕಪುಟ್ಟ ಚಿಹ್ನೆಗಳ ದೋಷವಿದ್ದು ಮರುಮುದ್ರಣ ಕಾರ್ಯದಲ್ಲಿ ಸರಿಪಡಿಸಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ. ಈ ಕೃತಿಯ ವಸ್ತು ವಿಷಯ, ಭಾಷೆ, ಬರವಣಿಗೆ ಶೈಲಿ, ನಿರೂಪಣೆ ಎಲ್ಲವೂ ಮೂಲ ಕೃತಿಯಂತೆ ಇದ್ದು ಓದುಗರನ್ನು ಕೈ ಬೀಸಿ ಕರೆಯುವಂತಿದೆ. ಇಂತಹ ಅಮೂಲ್ಯ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಅನುವಾದಿಸಿಕೊಟ್ಟ ಡಾ. ಎನ್. ದೇವರಾಜ್ ಅವರಿಗೆ ವಂದನೆಗಳು, ಅಭಿನಂದನೆಗಳು……

  • ವಿಮರ್ಶಕರು: ಕವಿತ್ತ ಕರ್ಮಮಣಿ, ಕರ್ನಾಟಕ