ಮೌನೇಶ ಜೆ.ಕೆ. ಕರಕಿಹಳ್ಳಿ ಅವರ ಬದುಕು ಭರವಸೆ ಸಂಕಲನ ಬಿಡುಗಡೆ
ಮೈಸೂರು : ಮೈಸೂರು ನಲ್ಲಿ ನಡೆದ ಅಕ್ಷರನಾದ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಮೈಸೂರ್ ನಲ್ಲಿ 39 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮೌನೇಶ ಜೆ.ಕೆ. ಕರಕಿಹಳ್ಳಿ, ಜಾನಪದ, ಕಲೆ, ಸಾಹಿತ್ಯ, ಪ್ರಬಂಧ, ಹಾಡುಗಾರ, ಚಿತ್ರಕಲಾ,ಎಲ್ಲದರಲ್ಲೂ ಅಪಾರವಾದ ಸಾಧನೆ ಮಾಡಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಇವರಿಗೆ ದೊರೆತಿದೆ. ಇವರ ಮೊದಲು ಕೃತಿ ‘ಬದುಕು ಭರವಸೆ’ ಕವನ ಸಂಕಲನ ಜುಲೈ 04 ರಂದು ಕನ್ನಡದ ಪ್ರಸಿದ್ಧ ಲೇಖಕರಾದ ಡಾ. ಅರವಿಂದ ಮಾಲಗತ್ತಿ ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಬದುಕು ಭರವಸೆ ಪುಸ್ತಕ ನಮ್ಮ ಭಾರತ ದೇಶಕ್ಕೆ ಮಾದರಿ ಆಗುತ್ತೆ ಜೊತೆಗೆ ಬದುಕಿನಲ್ಲಿ ಬಳಲಿದವರಿಗೆ. ನೊಂದವರಿಗೆ ಭರವಸೆ ಆಗುತ್ತೆ, “ಬದುಕು ಬಂದಂತೆ ಸ್ವೀಕರಿಸು; ಬದುಕು ತುಂಬಾ ದೊಡ್ಡದು ಅದಕ್ಕೊಂದು ಭರವಸೆ ಬೇಕು ಅದ್ಭುತವಾದ ಸಂಕಲನ ಬದುಕು ಭರವಸೆ…” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಈ ಕಾರ್ಯಕ್ರಮ ನನ್ನ ಮೊದಲು ಸಾಹಿತ್ಯ ಲೋಕದ ಹೆಜ್ಜೆ ಗೆ ಆರಂಭದ ದಿನ ಅಂದು ನನ್ನ ಗೆಳೆಯರು, ಅಣ್ಣ, ಎಲ್ಲರು ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಹರಸಿ ಹಾರೈಸಿದರು…….. ಈ ಸಾಧನೆ ನಮ್ಮ ಇಡೀ ಕಲಬುರ್ಗಿ ಜಿಲ್ಲೆ ಹರ್ಷ ವ್ಯಕ್ತಪಡಿಸಿದೆ… ಕರಕಿಹಳ್ಳಿಯ ಜನರು ಶುಭಾಶಯಗಳು ಕೋರಿದ್ದಾರೆ……… ಎಂದು ಮೌನೇಶ್ ಅವರು ವರದಿಗಾರರ ಬಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಂಪಾದನೆ: ಕವಿತ್ತ ಕರ್ಮಮಣಿ, ಕರ್ನಾಟಕ