೫ನೇ ಸೆಪ್ಟೆಂಬರ್ : ಅಪ್ಪನಿಗೊಂದು ಪತ್ರ
ನಮ್ಮನ್ನಗಲಿ ಆ ಲೋಕಕ್ಕೆ ಅವಸರಿಸಿದಂತೆ ಪಯಣಿಸಿದರೂ ನಮ್ಮ ನೆನಪುಗಳಲ್ಲಿ ಜೀವಂತವಾಗಿರುವ ಪ್ರೀತಿಯ ತಂದೆಯವರೆ(ನಾವು ಕರೆಯುವಂತೆ ಮಾಮಾ) ಇಂದು ಎಂದಿನಂತೆ ಮತ್ತೆ ನಿಮ್ಮ ನೆನಪು ಉಕ್ಕುತ್ತಿರುವುದಕ್ಕೆ …. ಕಾರಣ ಈ “ಶಿಕ್ಷಕರ ದಿನ.”
ಇದಕ್ಕೆ ಪ್ರಮುಖ ಕಾರಣ ನನ್ನಂತಹ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಸಾಗುವಂತೆ ಮಾಡಿದ ನಿಮ್ಮ ಪ್ರೇರಣೆ. ನಾವೆಲ್ಲಾ(ನನ್ನ ಅಣ್ಣಂದಿರು) ನೀವು ಕೆಲಸ ಮಡುತ್ತಿದ್ದ ಶಾಲೆಯಲ್ಲೇ ಓದುತ್ತಿದ್ದರೂ ಶಾಲೆಯಲ್ಲಿರುವಾಗ ನಮ್ಮನ್ನು ಉಳಿದೆಲ್ಲ ಮಕ್ಕಳಂತೆಯೇ ನೀವು ನೋಡಿದ ರೀತಿ ಎಷ್ಟೊ ಜನರಿಗೆ ಪ್ರೇರಣೆಯಾಗಿತ್ತು. ಎಲ್ಲ ವಿಷಯಗಳನ್ನು ಸಲೀಸಾಗಿ ಮನಮುಟ್ಟುವಂತೆ ನೀವು ಮಾಡಿದ ಪಾಠಗಳು ಇಂದಿಗೂ ನಮ್ಮನ್ನು ಆವರಿಕೊಂಡಿವೆ. ಸಾವಿರಾರು ಬಡ ವಿದ್ಯಾರ್ಥಿಗಳು ಫೀಸು ತುಂಬಲು ಶಕ್ತರಾಗದೇ ಶಾಲೆ ಬಿಟ್ಟು ರುವಾಗ ನೀವೂ ಮನೆಮನೆಗೆ ಹೋಗಿ ಅವರ ಪಾಲಕರಿಗೆ ಮನವರಿಕೆ ಮಾಡಿ ತಾವೇ ಫೀಸು ಕಟ್ಟಿ ವಿದ್ಯಾದಾನ ಮಾಡಿದ್ದು.. ಅವರೆಲ್ಲರೀಗ ವಿವಿಧ ಉನ್ನತ ಹುದ್ದೆಯಲ್ಲಿರುವರು. ಅವರು ನಮ್ಮ ಭೇಟಿಯಾದಾಗ ನಿಮ್ಮನ್ನು ಅವರು ನೆನೆಯುವುದು ಕಂಡಾಗ ನಮಗೇನೋ ಧನ್ಯತೆ ಮತ್ತು ಹೆಮ್ಮೆ.!
ಎಲ್ಲ ವಿಷಯಗಳನ್ನು ಅದ್ಹೇಗೆ ಅಷ್ಟು ಸಲೀಸಾಗಿ ವಿವರಿಸುತ್ತೀದ್ದೀರಿ? ಅದು ಶ್ರೀಸರಸ್ವತಿ ದೇವಿಯ ಕರುಣೆ-ಕೃಪೆಯೇ ಸರಿ.
ಕಬ್ಬಿಣದ ಕಡಲೆಯಾದ
ಗಣೀತದ ಲೆಕ್ಕ ಬಿಡಿಸುವ/ಗ್ರಹಿಸುವ ವಿಶೇಷ ಪದ್ಧತಿಗಳನ್ನು/ವಿಧಾನಗಳನ್ನು ಕಲಿಸಿಬಿಡಿತ್ತಿದ್ದೀರಿ.
ಅದೊಂದು ಅಚ್ಚರಿಯೇ.!
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಮರೆಯುವಂತಿಲ್ಲ!.
ನಮ್ಮ ದೇಹದ ಮೇಲೆ ಮೂಡುತ್ತಿದ್ದ ಬಾಸುಂಡೆಗಳು ಇಂದು ನಮ್ಮ ಜೀವನದ ಸನ್ಮಾರ್ಗ ಸೌಧಕ್ಕೆ ಆಧಾರ ಸ್ತಂಭಗಳಾಗಿವೆ.
ಯಾವ ಜಿ ಗಳಿರದ ಆ ಕಾಲಘಟ್ಟದಿ ನೀವೇ ಪರಮಗುರುಜಿ ಆಗಿದ್ದೀರಿ!.
ಜನ ಮೆಚ್ಚಿದ ಶಿಕ್ಷಕರಲ್ಲದೇ ಜನ ಪ್ರೇಮಿ ವ್ಯಕ್ತಿ-ಊರಿನ ಶಕ್ತಿಯಾಗಿದ್ದಿರಿ. ಪ್ರಭಾತಫೇರಿಯಲ್ಲಿ ನೀವೂ ಹಾಡಿ ಸುತ್ತಿದ್ದ ವಿಜಯಿ ವಿಶ್ವ ತಿರಂಗಾ ಪ್ಯಾರಾ..
ಎಂಬ ಆ ದೇಶಭಕ್ತಿಗೇತೆ..ಇನ್ನೂ ಕಿವಿಯಲ್ಲಿ ಗುಂಯ್ ಗುಡುವುದು. ದೈಹಿಕ ಶಿಕ್ಷಣ ದಲ್ಲೂ ತಮ್ಮದು ಎತ್ತಿದ ಕೈ!..ಆ ಡ್ರಿಲ್..ಲೇಜಿಮ್..
ಕೋಲಾಟ..ಕಲಾಪ್ರಕಾರದ ವಿವಿಧ ಪ್ರಯೋಗ ಗಳು ಎಲ್ಲವೂ ಅನನ್ಯ ಮಾದರಿ. ಇಂದಿನ ದಿನಗಳಲ್ಲಿ ನಮ್ಮ ಕಣ್ಣುಗಳು ನಿಮ್ಮಂಥ ನಿಸ್ವಾರ್ಥ ಶಿಕ್ಷಕರನ್ನು ಹುಡುಕುತ್ತಿರುತ್ತವೆ ಆದರೆ ದೊರಕುವುದು ತುಂಬ ಅಪರೂಪ ಎನ್ನಿಸಿದೆ. ಒಬ್ಬ ಉತ್ತಮ ಶಿಕ್ಷಕನ ಮಕ್ಕಳಾಗಿ ಹುಟ್ತಿದ್ದು ನಮ್ಮ ಎಷ್ಟೋ ಜನುಮದ ಪುಣ್ಯ. ಇಲ್ಲಿಂದಲೆ ನಿಮ್ಮ ಪಾದಕ್ಕೆರಗುತ್ತಿರುವ..
ಇಂತಿನಿಮ್ಮ ಪ್ರೀತಿಯ ಅಪ್ಪ್ಯಾಗಳು
🙏
ಮನೋಹರ, ಶಶಿಕಾಂತ, ಅಶೋಕ.