ಮಿತವಿರಲಿ ಮಾತು,.. ಚಂದದ ಗತಿಯೂ ಇರಲಿ

ನಾಲಿಗೆ ಬಳಸಿ,,ನೋಡಿಕೊಂಡು
ಇರುವಷ್ಟು ಜನ ನಿಮ್ಮ ಜೊತೆ ನಾಳೆಗೆ!.

ಅಲ್ಲಿ ಕೋಮಲತೆಯೂ ಇದೆ, ಕಠಿಣತೆಯೂ ಇದೆ
ಬಳಕೆಯ ಶುರು ಯಾವ ಎಳೆಯಿಂದ ಪ್ರಾರಂಭ?
ಎಂಬುದು ಮುಖ್ಯ. ನಾಲಿಗೆ ಮನೆ ಬೆಳಗುವ ದೀಪವಾಗಲಿ, ರಂಪವಾಗುವ ಬೆಂಕಿಯಾಗದಿರಲಿ.
ಆಗ ಮನೆ-ಮನ ಎಲ್ಲವೂ ನಾಲಿಗೆಯ ಆ ಕೆನ್ನಾಲಿಗೆಗೆ ಬಲಿಯಾಗುವವು.

ಮಾತು ದೀಪ ಬೆಳುಗವಂತಿರಲಿ, ನಲಿವಿನ ಬೆಳಕು ಎಲ್ಲೆಡೆ ಹರಡಲಿ!. ದೀಪವೂ ಒಮ್ಮೆ, ಕೈ ಜಾರಿದರೆ?!.. ಅದೂ ಬೆಂಕಿಯ ರೂಪ ತಾಳುವುದೇ!!. ಮಾತಿನ ಹಣತೆ ನಾಲಿಗೆಯ ಎಂಬ ಕರದಲ್ಲಿ ಜಾಗರೂಕತೆಯಿಂದ ನಿರ್ವಹಿಸಿ.

ಎಲ್ಲದರಲ್ಲಿಯೂ ಇರುವ ವೈರುಧ್ಯ ಮಾತಿನಲ್ಲೂ ಇದೆ. ಅದರ ಜೊತೆ ವಿವಿಧತೆಯೂ ಇವೆ.
ಕುಹಕ ಮಾತು, ಬಣ್ಣದ ಮಾತು, ಕಹಿಮಾತು,ಸವಿಮಾತು, ಹೊಗಳಿಕೆ ಮಾತು, ನಿಂದಿಸುವ ಮಾತು, ಬಣ್ಣಿಸುವ ಮಾತು, ಮುಖಸ್ತುತಿ ಯಿಂದ ಮಾತು, ನೇರ ಮಾತು, ಡೊಂಕು ಮಾತು ಎಷ್ಟೊಂದು ವೈವಿಧ್ಯಮಯ, ಜಿಹ್ವೆಗೆ ಅದೆಷ್ಟು ಪ್ರಕಾರದ ಹೊರಳುವುಕೆ! ..ಹೊರಳಿ ಹೊರಳಿ ಉರುಳಿಹೋಗದಿರಲಿ ಮಾತು. ನಾವು ಇಷ್ಟ ಪಟ್ಟಾಗ ಹೊರಬರಲು ಮಾತು. ಅದನ್ನು ಚಾಕಚಕ್ಯತೆಯಿಂದ ಬಳಸಿದಾಗ ಜಗಳವಿರದು.

ತಿರುಗಿ ಬಾರದ ರಾಸಾಯನಿಕ ಕ್ರಿಯೆಯಂತೆ ಮಾತು.. ಅಲ್ಲಿ ಬದಲಾವಣೆಗೆ ಅವಕಾಶವಿಲ್ಲ.
ಗೊಡೆಗೆ ಮೊಳೆ ಹೊಡೆದು ತೆಗೆದರೂ, ಮೂಡಿದ ತಗ್ಗು ಮುಚ್ಚದು.ತೇಪೆಯ ಕೆಲಸ ಮಾಡಿದರೂ ಮೊದಲಿನಂತಾಗದು!.

ಮಿತವಿರಲಿ.. ಜೊತೆಗೆ ಹಿತವೂ ಇರಲಿ ಮಾತು.
ಸಾಕಿನ್ನು ಹೆಚ್ಚು ಮಾತಾಡೆ! 😊😮

ಕವಿ: ಅ ದೇ ಉವಾಚ