ಜ್ಞಾನ ಭಂಡಾರದ ಗಣಿ ಗುರುಗಳು
(ಸರ್ವ ಗುರುಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು )
ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರು
ಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರು
ಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರು
ಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು ಶಿಕ್ಷಕರು
ತಾಯಿಯ ಉಸಿರಿಗೆ ತಂದೆಯ ಹೆಸರಿಗೆ ಅರ್ಥ ಕೊಟ್ಟವರು
ಸುಳ್ಳನು ಬದಿಗೊತ್ತಿ ಸತ್ಯದ ಬೆಲೆ ತಿಳಿಸಿಕೊಟ್ಟರು
ನಮಗಿರುವ ಪರೀಕ್ಷಾ ಭಯ ನಿವಾರಿಸಿದರು
ಕಪ್ಪು ಹಲಗೆಯಲಿ ಬದುಕಿನ ಚಿತ್ರ ತೋರಿಸಿದರು
ಲೆಕ್ಕವ ತಿಳಿಸಿ ಲೆಕ್ಕಕ್ಕೆ ಸಿಗದ ಮಟ್ಟಕ್ಕೆ ಬೆಳೆಸಿದರು
ಎರಡನೇ ತಾಯಿಯ ಸ್ವರೂಪ ಗುರು ಪೂಜ್ಯರು
ದೇಶ ಸುತ್ತಿ ಕೋಶ ಓದಿ ಬುದ್ದಿಯ ಹೇಳಿದರು
ವ್ಯಾಯಾಮ ಮಾಡಿಸಿ ದೇಹವನ್ನ ಸದೃಢಗೊಳಿಸಿದರು
ಪ್ರಾರ್ಥನೆ ಮಾಡಿಸಿ ಮನಸಿನ ಮಲೀನತೆ ಶುಭ್ರಗೊಳಿಸಿದರು ತಪ್ಪಾದಾಗ ದಂಡಿಸಿ ಯಾರ ಬಳಿ ಕೈ ಚಾಚಾದಂತೆ ತಿದ್ದಿದರು
ಪ್ರತಿ ವಿದ್ಯಾರ್ಥಿಯ ಭವಿಷ್ಯ ಬರೆದ ಮಹಾತ್ಮರು
ಒಮ್ಮೊಮ್ಮೆ ತಂದೆಯಾಗಿ ಜವಾಬ್ದಾರಿಯ ತಿಳಿಸಿದರು
ಒಮ್ಮೊಮ್ಮೆ ತಾಯಿಯಾಗಿ ಕರುಣೆಯ ಹೃದಯ ಆವರಿಸಿದರು ಒಮ್ಮೊಮ್ಮೆ ಸಂಬಂಧಿಯಾಗಿ ನಮ್ಮೆಲ್ಲಾ ಕಷ್ಟಕ್ಕೆ ಹೆಗಲಾದರು ಒಮ್ಮೊಮ್ಮೆ ಗೆಳೆಯನಾಗಿ ಸದಾ ಜೊತೆಗಿದ್ದು ಬೆಂಬಲಿಸಿದರು
ಜ್ಞಾನ ದೇಗುಲದ ಜ್ಞಾನ ಭಂಡಾರದ ಗಣಿಯಾದ ಶ್ರೇಷ್ಠರು
ಶಿಕ್ಷಕರು ಶಿವ ಸ್ವರೂಪಿಯ ತದ್ರೂಪದಂತೆ
ಗುರುಗಳು ಬ್ರಹ್ಮ ವಿಷ್ಣು ಮಹೇಶ್ವರನಂತೆ
ಮಾಜಿ ಎಂಬ ಪದ ಇರದ ಏಕೈಕ ವೃತ್ತಿಯಂತೆ
ಶಾಲೆಯೇ ಕುಟುಂಬವೆಂದು ಬದುಕಿದ ನಿಸ್ವಾರ್ಥಿಯಂತೆ
ಇಡೀ ಮನುಕುಲದ ಜ್ಞಾನಕ್ಕೆ ರೂವಾರಿಯಂತೆ
– ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು, ಬಾಗಲಕೋಟ