ರಾಷ್ಟ್ರಾದ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ 2024
ಬೆಳಗಾವಿ: ದೇಶದಲ್ಲಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ, ಚಿತ್ರಕಲೆ, ವೈದ್ಯಕೀಯ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಪರಂಪರೆಗಳನ್ನು ವೈಭವೀಕರಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯಕ ಸಂಸ್ಥೆ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಪ್ರತಿವರ್ಷದಂತೆ ಈ ವರ್ಷವು ಕೂಡ ರಾಷ್ಟ್ರದಾದ್ಯಂತ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ‘ಕನ್ನಡ ರತ್ನ ಪುರಸ್ಕಾರ’ ಮತ್ತು ರಾಷ್ಟ್ರಮಟ್ಟದ ‘ಹಿಂದಿರತ್ನ ಪುರಸ್ಕಾರ’ ಹಾಗೂ 100 ಕ್ಕೆ 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ‘ತಾಯ್ನುಡಿ ಪ್ರತಿಭಾ ಪುರಸ್ಕಾರ’ ಮತ್ತು ರಾಷ್ಟ್ರಮಟ್ಟದ ‘ಶಾರದಾ ರಾಷ್ಟ್ರಭಾಷಾ ಪುರಸ್ಕಾರ’ ಘೋಷಿಸಿ ಪ್ರದಾನ ಮಾಡುವ ಮೂಲಕ ಸೆಪ್ಟೆಂಬರ್ 14 ರಂದು ‘ಹಿಂದಿ ದಿವಸ’ ಮತ್ತು ನವಂಬರ್ 01 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ರಾಷ್ಟ್ರದ ಎಲ್ಲ ಶಾಲಾ-ಕಾಲೇಜುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಉಪನ್ಯಾಸಕರು ತಮ್ಮ ತಮ್ಮ ವಿದ್ಯಾರ್ಥಿಗಳ ಪ್ರಶಸ್ತಿ ಪತ್ರಗಳನ್ನು ಪಡೆಯಲು ವೇದಿಕೆಯ ಅಧ್ಯಕ್ಷರಾದ ಪ್ರೊ. ಎಲ್.ಎಚ್. ಪೆಂಡಾರಿ (ಕವಿತ್ತ ಕರ್ಮಮಣಿ) ಅವರ ಸಂಪರ್ಕ ಸಂಖ್ಯೆ 9743867298 ಗೆ ಸಂಪರ್ಕಿಸಲು ವೇದಿಕೆಯ ಗೌರವ ಸಲಹೆಗಾರರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾನ್ವಿತ ಶಿಕ್ಷಕರು ರಾಷ್ಟ್ರಮಟ್ಟದ ‘ರಾಷ್ಟ್ರಭಾಷಾ ಸೇವಾರತ್ನ ಪುರಸ್ಕಾರ’ ಮತ್ತು ರಾಜ್ಯಮಟ್ಟದ ‘ತಾಯ್ನುಡಿ ಸೇವಾರತ್ನ ಪುರಸ್ಕಾರ‘ಕ್ಕೆ ದಿನಾಂಕ 10 ಸೆಪ್ಟೆಂಬರ್ 2024ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿವರ್ಷದಂತೆ ಅರ್ಜಿಸಲ್ಲಿಸಿದ (ಕನಿಷ್ಠ 5ಕ್ಕಿಂತ ಹೆಚ್ಚು) ಪ್ರತಿಭಾನ್ವಿತರಿಗೆ ಪುರಸ್ಕಾರ ಪತ್ರ, ಮೇಡಲ್, ಸ್ಟಿಕರ್, ರಿಬ್ಬನ್’ನ್ನು ಗೌರವಪೂರ್ವಕವಾಗಿ ಅಂಚೆ ಮೂಲಕ ಅವರವರ ಶಾಲಾಕಾಲೇಜುಗಳ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು. ಇನ್ನುಳಿದ ಅಂದ್ರೆ ಐದಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಮಿಂಚಂಚೆ ಮೂಲಕ ಸಾಫ್ಟ್ ಕಾಫಿಯನ್ನು ಕಳುಹಿಸಿಕೊಡಲಾಗುತ್ತದೆ. ತಮ್ಮ ತಮ್ಮ ಶಾಲಾಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಪುರಸ್ಕಾರ ವಿತರಣೆ ಮಾಡುವವರಿಗೆ ಗೌರವಪೂರ್ವಕವಾಗಿ ಪುಸ್ತಕ ಬಹುಮಾನವನ್ನು ಕೂಡ ಕೊಡಲಾಗುವುದು.
ಅರ್ಜಿ ಸಲ್ಲಿಸಲು ಲಿಂಕ್ https://forms.gle/5Lrroso92zNhH9eF9
ಈ ಹಿಂದೆ ಆಯೋಜಿಸಿದ ಕಾರ್ಯಕ್ರಮಗಳ ವಿವರ 👉👇
https://photos.app.goo.gl/SAGsgU8LdtKaZySa8
https://photos.app.goo.gl/njyRuqJFvtoKmeD16
ವಂದನೆಗಳೊಂದಿಗೆ
ಕವಿತ್ತ ಕರ್ಮಮಣಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ (ರಿ), ಬೆಳಗಾವಿ 9743867298
ಸರ್ವರಿಗೂ ಸುವರ್ಣಾವಕಾಶ