😭😭😭😭😭

ಪ್ರೀತಿ ಕುರುಡೆಂಬುದು ನಿಜ
ಪ್ರೀತಿಯ ಪಾರಮ್ಯದಲ್ಲಿಯೇ
ಮುಳುಗಿದ ಜಗವು ಆಗಾಗ
ದ್ವೇಷದ ದುಂಬಾಲು ಬೀಳುವುದೇಕೆ??

ಅದೆಂಥ ಚಂದಿದ್ದ ಅವಳನ್ನು
ಕೊಲೆ ಮಾಡುವುದು ಎಂತಹ ಪ್ರೀತಿ
ಯಾರೋ ಸಾಕಿ ಸಲಹೆ ಕಾಡಿಸಿ
ಮುದ್ದಿಸಿ ಬೆಳೆಸಿದ ಅವಳನ್ನು
ಈ ದುಷ್ಟ ಕೊಲ್ಲುವುದ್ಯಾವ ನ್ಯಾಯ
ಆ ಪ್ರೀತಿಸಿದೆನೆಂಬ ಕರುಣೆ ಬೇಡವೇ
ಆ ಜೀವ ಅದೆಷ್ಟು ನೊಂದಿರಬೇಕು
ನಿಷ್ಕರುಣಿ ಚಾಕುವಿನ ಮುಂದೆ
ಎಲ್ಲಿ ಮರೆಯಾಗಿದೆ ಮಾನವೀಯತೆ..
ಈ ಜೀವಿಗಳಿಗೆ ಎಲ್ಲಿ ರಕ್ಷಣೆ
ಕಾಲೇಜು ಮೆಟ್ಟಿಲೇರುವುದೇ ತಪ್ಪಾ
ಕಳುಹಿಸಿದ ತಂದೆ ತಾಯಿಗಳು ಅವಳ
ಭವಿಷ್ಯಕ್ಕೆ ಮುನ್ನುಡಿ ಬರೆಯಲು
ಹೊರಟಿರುವುದೇ ತಪ್ಪಾಯಿತೋ
ಅದೆಷ್ಟೋ ಮುಗ್ಧೆಗಳಿಗೆ ಸ್ಪೂರ್ತಿಯಾಗಬೇಕಾದ
ಇವಳ ಸಾವಿಗೆ ಬೆಲೆ ಇಲ್ಲವೇ
ಇಂತಹ ಪಾಪಿ ಲೋಕವನ್ನು
ಸೃಷ್ಟಿಸಿದವರು ನಾವುಗಳೇನಾ??
ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ
ಪ್ರೀತಿಯಿಂದಲೇ ಜಗದ ಗೆಲ್ಲಬೇಕಾಗಿದೆ
ದ್ವೇಷ ಹತಾಶೆಯ ಪರಿಧಿ ಕಿತ್ತೊಗೆದು…

ಇನ್ನು ಏನೇನೋ ಹೇಳಬೇಕಾಗಿತ್ತು.
ಕ್ಷಮಿಸಿ ಅಳು ಬಂತು…

😭😭ದಾಕ್ಷಾಯಣಿ ಶಂಕರ 😭😭