ವಿಶ್ವ ರತ್ನ
ರಾಮಜಿ ಭೀಮಾಬಾಯಿಯವರ
ಹದಿನಾಲ್ಕನೆ ಪುತ್ರರತ್ನ
ಅಸ್ಪೃಶ್ಯತೆಯನಳಿಸಲು ಹೋರಾಡಿ
ಗೆದ್ದ ಭಾರತದ ರತ್ನ
ಬೃಹತ್ ಲಿಖಿತ ಸಂವಿಧಾನ ಬರೆದು
ಜನರ ಮನ ಗೆದ್ದ ವಿಶ್ವ ರತ್ನ
ಬಾಲ್ಯದ ಬಡತನದ ಝಳಕೆ ಬಗ್ಗದ
ಅಪಮಾನ ಅವಮಾನದಿ
ನೊಂದು ಬೆಂದರೂ ಅಗ್ನಿಯಲಿಸುಟ್ಟ
ಬಂಗಾರದ ಹೊಳಪಿನಂದದಿ
ಪದವಿಗಳ ಮೇಲೆ ಪದವಿ ಪಡೆದ
ಪ್ರಶಸ್ತಿ ಪುರಸ್ಕಾರ ಪಡೆದ
ಮಹಿಳೆಯರ ಹಕ್ಕು ಬಾಧ್ಯತೆಗಳಿಗೆ
ಪ್ರಾಮುಖ್ಯತೆ ಕೊಟ್ಟು
ದಲಿತರ ಮೂಲ ಅಧಿಕಾರಗಳಿಗೆ
ಸದಾವಕಾಶ ಕೊಟ್ಟು
ಹೃದಯವಂತ ಧೀಮಂತ ವ್ಯಕ್ತಿತ್ವದ
ವಿಶ್ವ ಮಾನವನಿಗೆ ನಮೊ
ಸಮಾಜದಲಿ ಸಮಾನತೆಯ ಬೀಜ
ಬಿತ್ತಿ ಸರ್ವ ಜನಾಂಗದ
ಸತ್ಯ ಶಾಂತಿ ನೀತಿ ಬೌದ್ಧಧರ್ಮದ
ಜ್ಯೋತಿಯ ಬೆಳಗಿಸಿದ
ಪ್ರಜ್ವಲ ದೀಪವಾಗಿ ಮಾರ್ಗದರ್ಶಿ
ಅಂಬೇಡಕರವರಿಗೆ ನಮನ
– ಅನ್ನಪೂರ್ಣ ಸಕ್ರೋಜಿ, ಪುಣೆ