ಸುಂದರ ಬದುಕಿಗೆ ಕೈಗನ್ನಡಿ ತಾಳ್ಮೆ
ಸುಂದರ ಜೀವನಕ್ಕೆ ಬೇಕಾಗಿರುವುದು ಸಹನೆ
ಸುಂದರ ಬಾಳಿಗೆ ಬೆಳಕು ತ್ಯಾಗ
ಸುಂದರ ಸಂಸಾರಕ್ಕೆ ಅಡಿಪಾಯ ಹೊಂದಾಣಿಕೆ
ಸುಂದರ ಭವಿಷ್ಯಕ್ಕೆ ಸಂಸ್ಕಾರ ಸರಳತೆ
ಸುಂದರ ಕನಸುಗಳಿಗೆ ಪ್ರಯತ್ನ ಕಾಯಕ ನಿಷ್ಟೆ ಪ್ರಮುಖ ಆಧಾರಗಳು
♀♀♀♀♀♀♀♀◆♀♀◆♀♀♀◆♀◆
ಕಾಣ್ಣದ್ದು ಅಲ್ಪ ಕಂಡಿರುವುದು ಸ್ವಲ್ಪ
ಊಹೆ ಮಾತ್ರ ಗಗನದಷ್ಟು ಎತ್ತರ
ಆಸೆಯಿಂದಲೇ ಕನಸು ಹುಟ್ಟಿ
ನಿರಾಸೆಯಿಂದಲೇ ಬದುಕು ಮುಗಿಸಿ
ನೀ ಸಾಧಿಸುವುದಾದರೂ ಏನು
ತಿಳಿದರೆ ಜಾತ್ರೆ ಉಳಿದರೆ ಯಾತ್ರೆ
ತ್ಯಜಿಸಿದರೆ ಪಾತ್ರೆ
ಬಿಟ್ಟು ಹೋದರೆ ಪಾತ್ರ ಮಾತ್ರ
ಹನಿಗವನ
——————————
ನವನಾಟ್ಯವೆಲ್ಲಾ ಸಿಂಧೂರ ತಿಲಕ
ಭುವನವೆಲ್ಲಾ ಬಹುದೂರ ಬೆಳಕ
ಭಾವನೆಗಳೆಲ್ಲಾ ಸುಂದರ ಕ್ಷಣಿಕ
ಪಯಣವೆಲ್ಲಾ ನೆನಪಿನ ಬದುಕ
ಸೌಂದರ್ಯವೆಲ್ಲಾ ಬಾಹ್ಯ ನೋಟಕ
ಮನಸುಗಳೆಲ್ಲಾ ಸಂಬಂಧದ ಭಾವಕ
ತ್ರಿಪದಿ
—————————
ಅಂದದ ಅರಮನೆಯ ತಾವರೆ
ಚಂದದ ಬಾನಂಗಳದ ಚಂದ್ರರೆ
ಸುಗಂಧ ಸುಂದರಿ ನಿಸರ್ಗಧಾರೆ
ದ್ವಿಪದಿ
ನತ೯ನ ಲೋಕದ ಒಡೆಯ ನಿನ್ನ ಆಟ ಕಂಡವರು ಯಾರಯ್ಯ ಹರ
ಚುಟುಕು
———————–
ಅಲೆಗಳ ಹಾಗೆ ಬಾಳಿನ ಚಕ್ರ
ಮೋಡದಂತೆ ಕಷ್ಟದ ವೃತ್ತ
ತಂಗಾಳಿಯಂತೆ ಸುಖದ ಅಲೆ
ಸಾಗರದಂತೆ ಸಂಸಾರದ ನೌಕೆ
ಕವಿತಾ ಎಮ್. ಮಾಲಿ ಪಾಟೀಲ