ಶ್ರೀ ದೇವಿ ಅಂಬಿಕೆ
**************
ಅಂಬಿಕೇ ತಾಯೇ ಮೂಕಾಂಬಿಕೇ ತಾಯೇ
ಅಂಬಿಕೆ ತಾಯೇ ನಂಬಿದೆ ನಿನ್ನನು
ಶಂಭುವ ಅರಸಿಯೆ ದಯೆ ತೋರು
ತುಂಬಿದ ಭಕ್ತಿಲಿ ಅಂಬೆಯ ಪೂಜಿಪೆ
ಇಂಬನು ನೀಡುತ ಶುಭಕೋರು ll

ಕರುಣದಿ ಎನ್ನನು ಹರಸುವ ಮಾತೆಯೆ
ವರವನು ನೀಡುತ ನೀ ಸಲಹು
ದುರುಳರ ವಧಿಸುತ ಶರಣರ ಪೊರೆಯುವ
ಎರಗುವೆ ನಿನ್ನಯ ಚರಣದೊಳು ll

ದೇವಿಯೆ ಶಂಕರಿ ಪಾವನ ರೂಪಿಣಿ
ನೋವಿನ ಬಾಧೆಯ ನೀಗಮ್ಮ
ಧಾವಿಸಿ ಬಂದೆನು ದೇವಿಯ ಬೇಡಲು
ಸಾವಿರ ನಮನವು ನಿನಗಮ್ಮ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ