ನಮ್ಮೊಳಗೂ ಸಂದೀಪ್ ಉನ್ನಿಕೃಷ್ಣನ್ ನೆಲೆಗೊಳ್ಳಬೇಕು!
(ಜನುಮ ದಿನದ ಸಾರ್ಥಕ ನೆನಪಿನಲ್ಲಿ)

  • ಆಗೆಲ್ಲಾ ನಮ್ಮ ಪ್ರಾಥಮಿಕ ಶಾಲೆಯಲ್ಲಿ ಓದಲಿಕ್ಕೆ ಗ್ರಂಥಾಲಯದ ಕಿರು ಪುಸ್ತಕಗಳನ್ನು ನೀಡುತಿದ್ದರು ಅದೇ ತಿಂಗಳಲ್ಲಿಯೇ ಹುತಾತ್ಮ ವೀರಯೋದ ಸಂದೀಪ್ ಉನ್ನಿಕೃಷ್ಣನ್ ಭಾರತಾಂಬೆಯಲ್ಲಿ ಒಳಗಾಗಿದ ತಿಂಗಳು ಇವರ ಆ ಬಾಂಬ್ ದಾಳಿ ಎದುರಿಸಿದ ಅಲ್ಲಿನ ಜನರನ್ನು ರಕ್ಷಿಸಲು ಹೋರಾಡಿದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಲೇಖನದಲ್ಲಿ ಪ್ರಕಟಿಸಿದ್ದರು ಅದೇ ಮೊದಲ ಸ್ಪೂರ್ತಿ.
  • ನೀವು ನಂಬಲಾರಿರಿ ನನಗೆ ಇನ್ನೂ ನೆನಪಿದೆ ಆಗ ನಾನಿನ್ನೂ ನಾಲ್ಕನೇ ತರಗತಿ ನಾ ಓದಿದ ಮೊದಲ ಲೇಖನ ಅಂದಿನಿಂದಲೇ ಓದುವ ಗೀಳು ಬೇರೂರಿದ್ದ ಆಗ ಭಾವನಾತ್ಮಕ ಸಂಬಂಧಗಳ ಅರಿವಿರದ ಆ ದಿನಗಳಲ್ಲಿ ಇವರ ಲೇಖನ ಓದುವಾಗಲೇ ಮತ್ತೆ ಓದಬೇಕೆನಿಸುವಷ್ಟು ಕೌತುಕ ಕಾಡುತ್ತಿತ್ತು !!
  • ಆಗ ನಮಗೆ ಅಶ್ವಿನಿ ಮೇಡಂ ಎನ್ನುವವರಿದ್ದರು ಅವರಿಗೂ ಅಷ್ಟೇ ಓದಿನಾಸಕ್ತಿ ಇದ್ದಿದ್ದರಿಂದ ಆ ಲೇಖನ ಕೈಲಿರಿಸಿ ಓದಲೇಳಿದಾಗ ಓದುತ್ತಾ ಅದೇನೋ ಕೌತುಕ ಉಗಮಿಸಲಾರಂಭಿಸಿತು ಅಲ್ಲಿಂದಲೇ ಈ ವೀರ ಹುತಾತ್ಮ ಮನದಲ್ಲೊಂದು ಹೆಮ್ಮೆ ಸ್ಥಾನ ಗಿಟ್ಟಿಸಿಕೊಂಡಿದ್ದರು ಇಂದಿಗೂ ಇವರ ಪಟ ನೋಡಿದಾಕ್ಷಣ ನಾ ಓದಿದ ಮೊದಲ ಅನುಭವವವೇ ನೆನಪಾಗುತ್ತದೆ!!
  • ಆಗ ಓದಿದ ಒಂದಿಷ್ಟು ಮತ್ತೆ….
    ೨೦೦೮ ರ ನವೆಂಬರ್ ನಲ್ಲಿ ೨೬ ರಂದು ಪಾಕಿಸ್ತಾನದ ೧೦ ಜನ ಭಯೋತ್ಪಾದಕರು ಸಮುದ್ರದ ಮೂಲಕ ಮುಂಬೈನಲ್ಲಿ ನುಸುಳಿ ೧೬೬ ಜನ ಅಮಾಯಕರನ್ನು ಹತ್ಯೈಗೈದಿದ್ದರು ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಆ ಜನರನ್ನು ಪಾರುಮಾಡಲು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು ಗುಂಡು ಅವರ ಎದೆಗೆ ನಾಟಿದಾಗಲೂ”ದಯವಿಟ್ಟು ಮೇಲೆಹತ್ತಿರಬರಬೇಡಿ”ನಾನೊಬ್ಬನೇ ಅವರನ್ನು ಎದುರಿಸುತ್ತೆನೆ “ಎಂದು ಹೇಳಿ ನುಗಿದ್ದ ವೀರ ಯೋಧ ಸಂದೀಪ್ ಅವರನ್ನು ನಾವು ಹೇಗೆ ಮರೆಯಲು ಸಾಧ್ಯ ಹೇಳಿ?
  • ಕೊನೆಯಲ್ಲಿ ಕಣ್ಣಂಚಿಗೆ ನೀರ್ ತರುವ ಸಂಗತಿಯೆಂದರೆ ಅವರ ಅಂತ್ಯಸಂಸ್ಕಾರ ಆಗುವ ವೇಳೆಯಲ್ಲಿ ಅವರ ತಂದೆ ತಾಯಿ ನಾವು ಅಳಲಾರೆವು ಇಂತಹ ಮಗನನ್ನು ಪಡೆದ ತಂದೆ ತಾಯಿಎಂದು ಹೆಮ್ಮೆ ಪಡುತ್ತೆವೆ. ಆದರೆ ನಮ್ಮ ಮಗ ಬಳಸುತ್ತಿದ್ದ ಆ ಬಾಚಣಿಗೆ, ಕನ್ನಡಿ, ಆತನ ಬಟ್ಟೆ ಬ್ರಶ್ ಕೊಡಿ ಅದರಲ್ಲಿಯೇ ಮಗನನ್ನು ಕಾಣುತ್ತೆವೆ ಎಂದಾಗ ಭಾವನಾತ್ಮಕ ಮಾತುಗಳನ್ನು ಕೇಳಿದಾಗ ಅದೆಷ್ಟು ಸಂಕಟವಿರಬಹುದು ಶಿವಶಿವಾ !!
  • ಅರ್ಥವಿಲ್ಲದೇ ಸಾಧನೆಯಿರದವನ್ನು ನಾಯಕರೆನ್ನುವ ಮಿತ್ರರಿಗೆ ಹೇಳುವ ವಿನಂತಿ ಇಷ್ಟೇ ಈ ಸಂದೀಪ್ ಉನ್ನಿಕೃಷ್ಣನ್ ಇವರಂತಹ ನಮಗೆ ನಿಜವಾದ ನಾಯಕರನ್ನಾಗಿ ಸ್ವೀಕರಿಸಿ ಇವರಂತೆ ಸಾಧಿಸಲು ಆಗದಿದ್ದರು ಇವರಲ್ಲಿನ ದೇಶಪ್ರೇಮವನ್ನಾದರೂ ನಾವು ಆದರಿಸಿಕೊಳ್ಳಬೇಕು!!

ಮತ್ತೆ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿರಬೇಕು ಹುತಾತ್ಮನಾದ ಯೋಧನಿಗೆ ಶತಶತ ಪ್ರಣಾಮಗಳು 🙏

ಇಂತಿ ನಿಮ್ಮ
ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ
ವಿಜಯನಗರ