ಯೌವ್ವನದ ದಿನಗಳಲ್ಲಿ
ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ
ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ;
ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ
ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ!
ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ
ನಿನ್ನಂತರಂಗದಲ್ಲೂ ಇರಬಹುದು ಪ್ರೇಮದ ಜೀವಸೆಲೆ;
ಅರಿಯಲಾರದೇ ಅರಮನೆಯ ದ್ವಾರ ಕಾಯುತ್ತಲಿರುವೆ
ಕೈ ಹಿಡಿದು ಕರೆದೊಯ್ಯಬಾರದೇ ನನ್ನನ್ನು ನಿನ್ನೊಳಗೆ ?
✍️ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು