ಉದಯಿಸಲಿ ಜಗಕ್ಕೆ ಹೊಸ ಬೆಳಕು
ಮೌಡ್ಯ, ಮಾತ್ಸರ್ಯದ, ದುರ್ಬುದ್ಧಿಗಳಲ್ಲಿ
ತುಂಬಿಹುದು ಜಗವು ಕೆಲ ಕುಹಕಗಳಲ್ಲಿ
ಕರುಣೆ, ಪ್ರೀತಿ, ಸ್ನೇಹವೆಂಬ ಮಾಯೆಗಳಲ್ಲಿ
ಸಿಲುಕಿ ನರಳುವ ಜನಕ್ಕೆ ಬೇಕಾಗಿದೆ ವೈಜ್ಞಾನಿಕ ದೃಷ್ಟಿ ಮನೆ ಮನಗಳಲ್ಲಿ
ಮತವೆಂಬ ಮದಿರೆ ಕುಡಿದು ತೇಲಾಡುವ ಜನಕೆ
ಜಾತಿ, ವೈಷಮ್ಯಗಳಲ್ಲಿ ತೇಲಿ ನೈಜ ದರ್ಶನವಿಲ್ಲದೆ ಬೀಳುತ್ತಿದ್ದಾರೆ ಕೂಪಕ್ಕೆ
ಜ್ಞಾನಿಗಳೇ, ಸರಕಾಗಿ ಸಿದ್ದರಾಗಿದ್ದಾರೆ ಮೌಢ್ಯವೆಂಬ ತಪಕ್ಕೆ
ಇನ್ನಾದರೂ ಇವೆಲ್ಲವ ಬಿಟ್ಟು ಮಾನವತ್ವದ ಅರಿವಿರಲಿ ಮುಂದಿನ ಯುಗಕ್ಕೆ
ಅಜ್ಞಾನದ ಅಂಗಡಿಗಳಲ್ಲಿ ಭರಾಟೆಯಿಂದ ಮಾರಾಟವಾಗುತ್ತಿವೆ ಮೌಡ್ಯದ ಸರಕು
ಮತಾಂಧತೆ, ಮತಬ್ರಾಂತಿ, ಮತ ದ್ವೇಷವೆಂಬುದು ಕೊಳಕು
ವೈಚಾರಿಕತೆಗೆ ಮನಬಾಗದಿದ್ದರೆ ಸುಖವಿಲ್ಲ ಯಾವುದಕು
ಮುಂದಾದರೂ ಜ್ಞಾನ ವಿಜ್ಞಾನಗಳಿಂದುದಯಿಸಲಿ ಜಗಕೆ ಹೊಸ ಬೆಳಕು
- ಪ್ರೊ. ಮ. ಆನಂದ್, ಮಂಡ್ಯ