ಹರಸು ತಾಯೆ ಎಮ್ಮನು
ವಿದ್ಯಾಧಿದೇವತೆ ಸರಸ್ವತಿ
ಸುಜ್ಞಾನವ ನೀಡುತಲಿ
ಹರಸುತಾಯೆ ಎಮ್ಮನು
ಸೃಷ್ಟಿಕರ್ತನ ಮನದರಸಿಯಾಗಿ
ಕ್ಷೀರಸಾಗರದಲ್ಲಿ ಉದಿಸಿ
ಶ್ವೇತಾಂಬರ ಧಾರಿಣಿಯಾಗಿ
ವಾಗ್ದೇವಿ ಸ್ವರೂಪಿಣಿಯಾಗಿ
ಹರಸು ತಾಯೆ ಎಮ್ಮನು
ಸಪ್ತ ಸ್ವರಗಳ ಸುಧೆಯ ಹರಿಸಿ
ನಾದಲಹರಿ ವೀಣೆ ನುಡಿಸಿ
ಭಾವದಲೆಯ ಗಾನ ಹರಿಸಿ
ಸುರ ನರರ ಪ್ರೀತಿ ಗಳಿಸಿ
ಹರಸು ತಾಯೆ ಎಮ್ಮನು
ಸುರ ಲೋಕದ ಸುರ ಸುಂದರಿ
ಹಂಸವಾಹಿನಿ ಶಾರದಾಂಬೆ
ನವಿಲೆ ನಾಚುವ ನಾಟ್ಯದಿ
ಕಾವ್ಯರಸಿಕರ ಮನದಿ ನೆಲಸಿ
ಹರಸು ತಾಯೆ ಎಮ್ಮನು
ಬಿಳಿಯತಾವರೆ ದಳದಿ ಕುಳಿತು
ಅಜ್ಞಾನದ ಅಂಧಕಾರವ ಸರಿಸಿ
ಜ್ಞಾನದರಿವಿನ ಬೆಳಕ ಹರಿಸಿ
ಹರಸು ತಾಯೆ ಎಮ್ಮನು
ರಚನೆ: ಇಂದಿರಾ ಲೋಕೇಶ್, ಹಾಸನ