Table of Contents

1】ಸುಖವನ್ನರಿಸಿ ಹೊರಟಾಗ

ನೆಲ, ನೀರು, ಗಾಳಿಯನ್ನು ಹಾಳುಗೆಡವಿ ಬದುಕುವುದು ಸಾಧ್ಯವೇ ಮನುಜ ಕುಲ,
ಹೊಲ, ಮನೆ ಸಂಬಂಧಗಳ ಮರೆತು ಕೂಡಿಟ್ಟ ಸಂಪತ್ತು ನೀಡದು ನೈಜ ಸುಖ;
ಕಿರು ಕಾಲುವೆ ತುಂಬಾ ಪ್ಲಾಸ್ಟಿಕ್ ಕಸ, ತಿನ್ನುವ ಪ್ರಾಣಿ ಸೇರುವುದು ಯಮಲೋಕ
ಸುಖವಿದೆ ಎಂದು ಹೋಗದಿರಿ ನಗರದಲ್ಲಿನ ಜೀವನ ಅರಿವಿಗೆ ಬಾರದ ನರಕ!

2】ಪ್ರಾರಬ್ಧ ಕರ್ಮ

ಯಾರನ್ನೋ ನಂಬ್ಕೊಂಡು ಎಲ್ಲೆಲ್ಲೋ ಕುತ್ಕೊಂಡು ಎಷ್ಟೋ ದಿನಗಳ ಸಾಗಿಸಬಹುದು?
ಯಾವತ್ತೋ ಒಂದಿನ ಎದೆಗೆ ಹೊಡಯೋದಾದ್ರೆ ಇವತ್ತು ನರಳೋದ್ಯಾಕೆ ನೆನೆಸಿಕೊಂಡು?
ತಪ್ಪು ಸರಿ ಅಂತ ಹೇಳೋಕೆ ನಾವ್ಯಾರು ಎಲ್ಲಾನೂ ಈ ಲೋಕದಲ್ಲಿ ಅವರವರ ಚಿತ್ತ ತಾನೇ;
ಸನ್ನಿವೇಶ ಅಂದು ಆಡಿಸಿರುವ ಆಟಕ್ಕೆ ಹೆದರಿ ಕುಳಿತರೆ ಸಿಗೋದಿಲ್ಲ ಭಯಕ್ಕೆ ಕೊನೆ!
– ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು