ಸಾಧನೆಗೆ ಅಡ್ಡಿಯಾಗದು

ಹಳೆಯ ತಲೆಮಾರಿನ ಜನ
ಆರೇಳು ಮಕ್ಕಳ ಜನನ
ಬೆನ್ನಿಗೆ ಬಿದ್ದಿರುವ ಬಡತನ
ಕಷ್ಟವಾಗಿದೆ ನೆಡೆಸಲು ಜೀವನ
ಆರೋಗ್ಯಕೆ ಕೊಡದ ಗಮನ
ಪರಿಣಾಮದ ಮಗು ವಿಕಲಚೇತನ
ಸರಿಯಾದ ಮಾಹಿತಿ ಕೊಡುವವರಿಲ್ಲ
ಪೋಲಿಯೋ ಹನಿಯನು ಹಾಕಿಸಲಿಲ್ಲ
ಆರೈಕೆಯ ಮಾಡುತ ನಿಂತರೆಲ್ಲ
ಹೆತ್ತವರಿಗೆ ಮಗು ಹೊರೆಯಾಗಲಿಲ್ಲ
ಕಣ್ಮಚ್ಚಿದ ನಂತರ ಅನಾಥನಾದೆನಲ್ಲ
ಬದುಕುವ ಛಲ ಅಂದೇ ಹುಟ್ಟಿತಲ್ಲ
ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ
ಹೆಳವನೆಂದವರ ಬಾಯಿ ಮುಚ್ಚಿಸಿ
ಸಾಹಿತ್ಯದಲಿ ಸಾಧನೆಯ ಮಾಡಿ ತೋರಿಸಿ
ಬರುತಿರುವೆ ನೋಡಿ ಎದೆಯುಬ್ಬಿಸಿ
ಹೀಯಾಳಿಸಿದವರೇ ತಲೆ ತಗ್ಗಿಸಿ
ಸ್ವಾಗತಿಸುವರು ನೋಡಿ ನಗೆಯ ಸೂಸಿ
– ಜೆ.ಆರ್.ಶಿವಕುಮಾರ್ ಚಿತ್ರದುರ್ಗ