ಶ್ರೀ ಶಿರಸಿ ಮಾರಿಕಾಂಬಾ ಜಾತ್ರೆ

ಸಸ್ಯ ಶ್ಯಾಮಲೆಯ ಸುಂದರ ಬನದಲ್ಲಿ ತಾಯಿಯ ಆಲಯ;
ಧರ್ಮ ಭೂಮಿಯಲ್ಲಿ ರಕ್ಷಣೆಗೆ ನಿಂತಿಹಳು ಶ್ರೀ ಮಾರಿಯಮ್ಮ,
ತಂಡೋಪತಂಡವಾಗಿ ಹರಿದು ಬರುವುದಿಲ್ಲಿ ಭಕ್ತರ ಸಮೂಹ;
ದಕ್ಷಿಣ ಭಾರತದಲ್ಲಿ ನಡೆಯುವ ಅತಿ ದೊಡ್ಡ ಜಾತ್ರಾಮಹೋತ್ಸವ:
ಭಕ್ತರ ನಂಬಿಕೆ ನಶಿಸದಂತೆ ಸಕಲ ಸಿದ್ಧತೆ ಮಾಡಿರುವ ರವೀಂದ್ರ ನಾಯ್ಕರ ಅಧ್ಯಕ್ಷತೆ,
ದೇವಿಯೇ ಪ್ರಸನ್ನಳು ಕಂಡು ಸುದೇಶ ಜೋಗಳೇಕರ ನೆರಳಲ್ಲಿ ಆಡಳಿತ ಕಮಿಟಿಯ ಕ್ಷಮತೆ;
ಬಂದ ದೇಶವಾಸಿಗಳು ಹಾಡಿ ಹೊಗಳುವಂತಾ ಧರ್ಮದರ್ಶಿ ಮಂಡಳಿ, ಬಾಬುದಾರರು, ಅರ್ಚಕರು_
ದರ್ಶನ ಭಾಗ್ಯ ಭಕ್ತರ ಹಕ್ಕು ಆ ಕಾಯಕದಲ್ಲಿ ಪುಣ್ಯ ಪ್ರಾಪ್ತಿ ಎನ್ನುವ ಹುರಿಯಾಳುಗಳು ಸಿಬ್ಬಂದಿಗಳು:
ಮಾರ್ಚ್ 19 ರಿಂದ 27 ರ ವರೆಗೆ ನಡೆಯಲಿದೆ ತಾಯಿಯ ಅದ್ಭುತ ಜಾತ್ರೆ ,
ಬನ್ನಿ ಬಂದು ಧನ್ಯರಾಗಿ ಪಡೆದು ದರ್ಶನ ಬಿಡ್ಕಿ ಬೈಲಿನಲ್ಲಿದೆ ಅಮೃತ ಪಾತ್ರೆ;
✍️ನಾಗರಾಜ ಗುನಗ
ನಿವೃತ್ತ ಸೈನಿಕರು
ಕೋಡಕಣಿ/ಕುಮಟಾ ತಾಲ್ಲೂಕು