ಇಂದಿನ ಸ್ತ್ರೀಯ ಅಂತರಾಳ
ನನ್ನ ಅವನ ಪ್ರೇಮ ಕಥೆಯಲಿ
ಬೇರೆ ಹೆಣ್ಣಿನ ಗಂಡನಿರಲಾರ
ರುಕ್ಮಿಣಿಯ ಕಣ್ಣಿನಲಿ ಮುಳ್ಳಿನಂತೆ
ಚುಚ್ಚಲಾರೆ ನಾ ರಾಧೆಯಾಗಲಾರೆ
ಪವಿತ್ರತೆಯ ಪ್ರಮಾಣ ಪತ್ರ ಕೊಡಲಾರೆ
ಅಗ್ನಿ ಪರೀಕ್ಷೆಗೊಳಗಾಗಲಾರೆ ಅವ ಏನು
ನನ್ನ ತೊರೆವ ನಾನೇ ಅವನ ತೊರೆವೆ
ನಾ ಸೀತೆಯಾಗಲಾರೆ
ಮೂರ್ತಿಯಲಿ ಮೋಹನ ಕಾಣುತ
ಮನೆ ಸಂಸಾರ ಬಿಟ್ಟು ಸಾಧು ಜತೆ
ಸುತ್ತಲಾರೆ ಒಲ್ಲದ ಗಂಡನಜತೆ ಬಾಳಿ
ವಿಷ ಕುಡಿವ ಮೀರಾ ನಾನಾಗಲಾರೆ
ಕರ್ತವ್ಯ ಮರೆತು ಮನೆ ತೊರೆದು
ಹೋದವ ಜ್ಞಾನಿಯಾಗಿದ್ದರೂ
ಕ್ಷಮಿಸಲಾರೆ ಕನ್ಯೆಯಾಗಿಯೇ ಇರುವೆ
ಆದರೆ ನಾ ಯಶೋಧರೆಯಾಗಲಾರೆ
ಕಣ್ಣಿಗೆ ಪಟ್ಟಿಕಟ್ಟಿಕೊಂಡು ಅಂಧಳಂತೆ
ಅಜ್ಞಾನಿಯಾಗಿ ಬಾಳಲಾರೆ ಜಗದಲಿ
ಕುರುಡು ಗಂಡನ ಕಣ್ಣಾಗುವೆ ವಿನಃ
ನಾ ಗಾಂಧಾರಿಯಾಗಲಾರೆ
ಅನ್ಯಾಯ ಅಪಮಾನ ಸಹಿಸಲಾರೆ
ಮನ ಗೆದ್ದವನೊಂದಿಗೇನೆ ಬಾಳುವೆ
ಹೆಣ್ಣಾಗಿ ಬಾಳಿನ ಹೊನ್ನಾಗುವೆ
ನನ್ನಸ್ತಿತ್ವ ತಿಳಿಸುತ ಜಗದ ಕಣ್ಣಾಗುವೆ
- ಅನ್ನಪೂರ್ಣ ಸಕ್ರೋಜಿ ಪುಣೆ
ದೇವರ ಹೆಸರಲ್ಲಿ ಶೋಷಣೆ ಮಾಡುವ ಸ್ವಾರ್ಥಿಗಳನ್ನ ನಂಬಬೇಡಿ. ದೈವ ಭಕ್ತನೆಂದು ಮುಖವಾಡ ಧರಿಸಿ ಎಲ್ಲರನ್ನೂ ವಂಚಿಸುವ ಆಷಾಢ ಭಕ್ತರನ್ನು ನಂಬಬೇಡಿ. ಆತ್ಮ ಶುದ್ಧಿ ಇಲ್ಲದೆ ತೋರ್ಪಡಿಕೆಗೆ ಮಾಡುವ ಕಾರ್ಯಕರ್ತರನ್ನು ನಂಬುವುದು ಹೇಗೆ
ಪುರುಷ ಪ್ರಧಾನ ದೇಶ ಅಲ್ವಾ..? ಸ್ತ್ರೀ ಎಷ್ಟೇ ಮುಂದುವರೆದರು ಪುರುಷನ ಹಿಡಿತದಲ್ಲೇ ಇರಬೇಕಾಗುತ್ತದೆ. ಉತ್ತಮ ಶಿಕ್ಷಣದಿಂದ ಮಾತ್ರ ಎಲ್ಲ ಬದಲಾಗಲು ಸಾಧ್ಯ….
ನಿಜವಾದ ಮಾತು
100% ನಿಜ ಸರ್