ಹೆಣ್ಣು ಹುಣ್ಣಲ್ಲ ಹೊನ್ನು

ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣು
ನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು
ಯಾರೊ ಮೂರ್ಖರಂದರು ಮಹಿಳೆಯು ಹುಣ್ಣು
ಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು

ಮಣ್ಣುಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆ
ಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ
ನಿಷ್ಕಲ್ಮಶವಾದ ಪ್ರೀತಿ ಅಡಗಿದೆ ಹೃದಯದೊಳಗೆ
ಗುಡಿಯ ಕಟ್ಟಿ ಪೂಜಿಸಿ ಸ್ತ್ರೀಯ ತ್ಯಾಗದ ಮಹಿಮೆಗೆ

ಮಹಿಳಾ ಸಮಾನತೆ ಕೇವಲ ಭಾಷಣಕ್ಕಾಗದಿರಲಿ
ಮಹಿಳೆ ಅಬಲೆ ಅಲ್ಲ ಸಬಲೆ ಗೊತ್ತಿರಲಿ
ಹೆಣ್ಣಿರದೆ ಗಂಡು ಶೂನ್ಯ ಎಂಬುದು ತಿಳಿದಿರಲಿ
ಹೆಣ್ಮಕ್ಕಳ ಮನಸ್ಸಿಗೆ ನೋವಾಗದಂತೆ ಇರಲಿ

ಕರುಣೆಗೆ ಮಮತೆಗೆ ತಾಯಿಯಾಗಿ ಹೆಣ್ಣು
ಪ್ರೀತಿಗೆ ಬಾಳಿಗೆ ಮಡದಿಯಾಗಿ ಹೆಣ್ಣು
ಬಾಂಧವ್ಯಕ್ಕೆ ಋಣಾನುಬಂದಕ್ಕೆ ಮಗಳಾಗಿ ಹೆಣ್ಣು
ಪವಿತ್ರ ಹಬ್ಬ ರಕ್ಷಾಬಂಧನಕ್ಕೆ ಸೋದರಿಯಾಗಿ ಹೆಣ್ಣು

ಬದುಕಲು ಬಿಡಿ ಅವಳ ಪಾಡಿಗೆ ಅವಳನ್ನು
ಅವಳಿಗೂ ಒಂದು ಕ್ಷಣ ನೀಡಿ ಸ್ವಾತಂತ್ರ್ಯವನ್ನು
ಹಿರಿಯರೇ ಹೇಳಿದ್ದಾರೆ ಹೆಣ್ಣು ಹುಣ್ಣಲ್ಲ ಹೊನ್ನು
ಕೈ ಮುಗಿದು ನಮಸ್ಕರಿಸಿ ಹೆಣ್ಣು ಜಗದ ಕಣ್ಣು

– ಶ್ರೀ ಮುತ್ತು ಯ. ವಡ್ಡರ, ಶಿಕ್ಷಕರು, ಬಾಗಲಕೋಟ
Mob- 9845568484