ಲಂಚವಿಲ್ದೆ ಬದುಕಿಲ್ಲ

ಆಗೋಲ್ಲ ಆಗೋಲ್ಲ
ಲಂಚವಿಲ್ಲದೆ ಕೆಲಸ ಆಗೋಲ್ಲ
ನ್ಯಾಯ ನೀತಿ ನಡೆಯೋಲ್ಲ
ದುಡ್ಡಿಲ್ಲದೆ ಏನಾಗೋಲ್ಲ
ಏನೇನಾಗೋಲ್ಲ

ಬಡವನಿಗಿಲ್ಲಿ ಬದುಕಿಲ್ಲ
ದುಡಿದವಗೆ ಹಣದಕ್ಕೋಲ್ಲಾ
ಅಧಿಕಾರಿ ಹೊಟ್ಟೆ ತುಂಬೊಲ್ಲ
ಹಣದಾಹ ತೀರೋದಿಲ್ಲ
ಆಗೋಲ್ಲ ಆಗೋಲ್ಲ
ಲಂಚವಿಲ್ದೆ ಕೆಲಸ ಮಾಡೋಲ್ಲ

ಭ್ರಷ್ಟಾಚಾರಕೆ ಕೊನೆಯಿಲ್ಲ
ಪ್ರಶ್ನೆಗೆ ಉತ್ತರವಿಲ್ಲಿಲ್ಲಾ
ಪ್ರಶ್ನಿಸೋ ಹಕ್ಕು ನಮಗಿಲ್ಲಾ
ನಾಳೆಗಳೆಂದು ನಿಜವಲ್ಲ
ಇಂದಿನ ಬದುಕು ಸುಳ್ಳಲ್ಲ
ಆಗೋಲ್ಲ ಆಗೋಲ್ಲ
ಲಂಚವಿಲ್ದೆ ಕೆಲಸ ಆಗೋಲ್ಲ

ಲಂಚದಬಾಯ್ಗೆ ಬೀಗವಿಲ್ಲ
ಬೇಲಿಯೇ ಹೊಲ ಮೆಯ್ತಿದೆಯಲ್ಲಾ
ಆಗೋಲ್ಲ ಆಗೋಲ್ಲ
ಇನ್ನಿಲ್ಲಿ ಬದುಕಲು ಆಗೋಲ್ಲ
ಬಡವನ ಬೇಳೆ ಬೆಯೋಲ್ಲ
ಏನೇನಾಗೋಲ್ಲ

ಆಗೋಲ್ಲ ಆಗೋಲ್ಲ ಲಂಚ
ಕೊಡ್ದೆ ಬದುಕು ಸಾಗೋಲ್ಲ
ಅಲೆಯೋಕೆ ನಮ್ಮಿಂದ ಆಗೋಲ್ಲ
ಹೆಣ ಕೂಡ ಸಹಿ ಮಾಡುವುದಲ್ಲ
ಮೋಸವೇ ದಿನಚರಿ ಆಯ್ತಲ್ಲ
ಲಂಚದ ಹಣದಲೇ ಜಗವಲ್ಲ

ಬಡವರ ಸುಲಿಗೆ ನಿಲ್ಲೊಲ್ಲ
ತಿದ್ದುವನಾರೋ ಇವರನ್ನೆಲ್ಲ
ಹುಟ್ಟಿಸುವ ಬ್ರಹ್ಮನೆ ಬಲ್ಲ
ಮತ ನೀಡುವ ನಮಗೆ ಬುದ್ದೀ ಇಲ್ಲಾ
ಮತದಾರ ಪ್ರಭು ಎಚ್ಚತ್ಕೊಳ್ಳ್ರಲ್ಲಾ

✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್, ಕಡೂರು