ಮನ ಮಂದಿರ

ಇದು ದೇವ ಮಂದಿರ,,
ಕಲ್ಲಿನ ಶಿಲೆಯಿಂದ
ದೇವರ ಮೂರ್ತಿಯನ್ನು ಕೆತ್ತಿ

ಹಿಂದೂ ಮುಸ್ಲಿಂ  ಅನ್ನದೆ
ಎಲ್ಲಾ ಜಾತಿಯ ಜನರಿಂದ ಮಸೀದಿ
ದೇವಸ್ಥಾನದ ಕಟ್ಟಡವನ್ನು  ಕಟ್ಟಿಸಿ

ಕುಲ ಕುಲವೆಂದು ಹೊಡೆದಾಡುವ
ಜನರೇ
ಗುಡಿಯಲ್ಲಿ ದೇವರ ವಿಗ್ರಹವನ್ನು
ಸ್ಥಾಪಿಸುವ ಬದಲು

ನಿಮ್ಮ ಹೃದಯದಲ್ಲಿ ಮೇಲು ಕೀಳು
ಜಾತಿ ಮತ ಹಿಂದೂ ಮುಸ್ಲಿಂ
ಎಂದು ಬೇಧ ಭಾವವನ್ನು ಬಿಟ್ಟು

ಉತ್ತಮ ಮಾನವರಾಗಿ
ಸಹಬಾಳ್ವೆ  ಬಾಳಿದರೆ
ಅದಕ್ಕಿಂತ ದೇವ ಮಂದಿರ ಬೇರೆ ಇಲ್ಲ
ಅಲ್ಲವೇ

– ರಾಘವೇಂದ್ರ  ಸಿಂತ್ರೆ
ರಾಜಕಮಲ್, ಶಿರಸಿ