ಮಲ್ಲ ದಾತೆ
********
ಮಂಗಳ ರೂಪಿನಿ ಅಂಬಿಕೆ ಮಾಯೇ
ಕಂಗಳ ತೆರೆದೂ ನೋಡಮ್ಮ
ಚಂಡಿಕೆ ದೇವೀ ಶಂಕರಿ ಶಾಂಭವಿ
ದುರ್ಗಾ ಮಾತೆಯೆ ಸಲಹಮ್ಮ ll

ಅನುದಿನ ನಿನ್ನನೆ ನುತಿಸುವೆ ತಾಯೇ
ಅಭಯವ ನೀಡುತ ಪೊರೆಯಮ್ಮ
ನಿತ್ಯವು ಭಜನೆಯ ಪೂಜೆಯ ಸಲ್ಲಿಸಿ
ಎದುರಲಿ ನಿಂದಿಹೆ ನಾನಮ್ಮ ll

ಕರುಣೆಯ ತೋರುತ ಮಂಗಳ ಕರುಣಿಸು
ಮನದಲಿ ನೀನೂ ನೆಲೆಸಮ್ಮ
ಮಂಗಳದಾಯಿನಿ ಮಂಜುಳ ಭಾಷಿಣಿ
ಮಲ್ಲದ ಮಾತೆಯೆ ಶರಣಮ್ಮ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ