ನಿನ್ನಾ ಕಿರುನಗೆ

ನೀ ತಿರುಗಿ ನೋಡಬೇಡ ಎನ್ನಾ
ನಾ ಕಳೆದುಹೋಗುವೆ ಚಿನ್ನಾ
ತಟ್ಟುವೆ ಎನ ಹೃದಯವನ್ನಾ
ಮನಸಿಗೆ ಹಾಕಿದೆ ಕನ್ನಾ

ಬಂದಾರ ಬಂದುಬಿಡು
ಮನದಲ್ಲಿ ಜಾಗ ನೀಡು
ಬದುಕಲಿ ಜೊತೆಗೂಡು
ಕಟ್ಟೋಣ ನಾವ್ ಜೇನುಗೂಡು

ನನ್ನಲ್ಲಿ ಅಳುಕೇಕೆ ನಿನಗೆ
ತಕ್ಕವನಲ್ಲವೇ ಬಾಳಿಗೆ
ಮಲ್ಲಿಗೆ ಮುಡಿಸುವೆ ಮುಡಿಗೆ
ತಿರುತಿರುಗಿ ನೋಡಬ್ಯಾಡ ಹಿಂಗೆ

ಚೆಂದ ಚೆಂದ ನಿನ್ನಾ ಕಿರುನಗೆ
ಬಾ ಬಾರೆ ಬದುಕಲಿ ಮೆಲ್ಲಗೆ
ಉಸಿರಾಗುವೆ ನಿನ್ನ ಬಾಳಿಗೆ
ಕಾಪಾಡಿಕೊಳ್ಳುವೆ ಬೆಚ್ಚಗೆ

ಬೆಟ್ಟದಲ್ಲಿ ಪುಟ್ಟಮನೆ ಇರುವುದೇ
ಕಾನನವೇ ಅಲ್ಲಿ ನಲಿವುದೇ
ಗಿರಿತೊರೆ ವೈಯಾರ ಮಾಡಿದೆ
ಪುಟ್ಟಮಲ್ಲಿ ನಿನಗಷ್ಟು ಸಾಲದೇ

✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್ ಕಡೂರು